ಅಭಿಪ್ರಾಯ / ಸಲಹೆಗಳು

ಕರ್ತವ್ಯಗಳು ಮತ್ತು ಜವಾಬ್ದಾರಿಗಳು

ಕರ್ತವ್ಯಗಳು ಮತ್ತು ಜವಾಬ್ದಾರಿಗಳು:

ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿ ಬೆವಿಕಂಪನಿಯದ್ದಾಗಿದೆ. ಪ್ರಕ್ರಿಯೆಯಲ್ಲಿ ಕೆಳಕಂಡ ಉಪ ಕರ್ತವ್ಯಗಳು ಒಳಗೊಂಡಿವೆ:

 • ಕವಿನಿ ಆಯೋಗವು ನಿರ್ಧರಿಸುವ ದರಗಳ ಪ್ರಕಾರ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವುದು.
 • ನಿಗದಿತ ವೋಲ್ಟೇಜು ಹಾಗೂ ತರಂಗದಲ್ಲಿ ವಿದ್ಯುತ್ ಸರಬರಾಜು ಮಾಡುವುದು.
 • ೧೧ ಕೆವಿ ಮಾರ್ಗಗಳು, ವಿತರಣ ಪರಿವರ್ತಕಗಳು, ಹಾಗೂ ಭರವಸಾಪೂರ್ವಕ ಮತ್ತು ಉತ್ತಮ ಗುಣಮಟ್ತದ ವಿದ್ಯುತ್ ಸರಬರಾಜಿಗಾಗಿ ಸಲಕರಣೆ/ಉಪಕರಣಗಳ ನಿಯತ ನಿರ್ವಹಣೆ.
 • ಬೇಡಿಕೆಯನ್ನು ಪೂರೈಸಲು ಮೂಲ ಸೌಕರ್ಯಗಳ ಉನ್ನತೀಕರಣ.
 • ವಿದ್ಯುತ್ ಅಪಘಾತಗಳನ್ನು ತಡೆಗಟ್ಟಿ, ಪ್ರಮಾಣವನ್ನು ಕಡಿಮೆಗೊಳಿಸಿ ಮಾನವ ಹಾಗೂ ಪ್ರಾಣಿ ಸಂಕುಲದ ಅಮೂಲ್ಯ ಜೀವಗಳ ರಕ್ಷಣೆಗಾಗಿ ಸುರಕ್ಷಾ ಕ್ರಮಗಳು.

ಎಫ್) ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸುವುದಕ್ಕಾಗಿ ನಿರತ ಯೋಜನೆಗಳು.

 • ಕವಿನಿ ಆಯೋಗದ ವೆಬ್‌ಸೈಟಿನಲ್ಲಿ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ವಿವರಣಾತ್ಮಕ ಮಾಹಿತಿ ಲಭ್ಯವಿದೆ.

ಶಾಖಾ ಕಛೇರಿ:

ಗ್ರಾಹಕ ಮತ್ತು ಕಂಪೆನಿಯ ನಡುವೆ ಕಾರ್ಯ ಮತ್ತು ಪಾಲನಾ ಘಟಕವು ಪ್ರಮುಖ ಸಂಪರ್ಕ ಸಾಧನವಾಗಿದೆ. ಇದು ಕಂಪೆನಿಯಲ್ಲಿ ಅತ್ಯಂತ ಕೆಳಹಂತದಲ್ಲಿರುವ ಕಚೇರಿಯಾಗಿದ್ದು, ಇಲ್ಲಿಂದಲೇ ಗ್ರಾಹಕ ಸಂಬಂಧ ಪ್ರಾರಂಭವಾಗುತ್ತದೆ. ಕಛೇರಿಗೆ ಸಹಾಯಕ ಇಂಜಿನಿಯರ್(ವಿ) ಅಥವಾ ಕಿರಿಯ ಇಂಜಿನಿಯರ್(ವಿ) ರವರು ಮುಖ್ಯಸ್ಥರಾಗಿರುತ್ತಾರೆ. ಅಧಿಕಾರಿಯ ಕರ್ತವ್ಯ ಹೀಗಿದೆ:

 • ಆಸಕ್ತ ಗ್ರಾಹಕರಿಂದ ವಿದ್ಯುತ್ ಸರಬರಾಜು ಕೋರಿಕೆಯ ಮನವಿಯನ್ನು ಸ್ವಿಕರಿಸುವುದು.
 • ವಿದ್ಯುತ್ ಸಂಪರ್ಕ ಕಲ್ಪಿಸುವುದರ ವೆಚ್ಚವನ್ನು ಗೊತ್ತುಪಡಿಸಿಕೊಳ್ಳಲು ಅಂದಾಜನ್ನು ಸಿದ್ಧಪಡಿಸುವುದು.
 • ಹಾಲಿ ಮೂಲ ಸೌಕರ್ಯದಿಂದ ವಿದ್ಯುತ್ ಸರಬರಾಜು ಕಲ್ಪಿಸಲು ಸಾಧ್ಯತೆ ಇರುವುದರ ಬಗ್ಗೆ ತಪಾಸಣೆ ನಡೆಸುವುದು.
 • ಅಂದಾಜು, ಕಾರ್ಯಸಾಧ್ಯತಾ ವರದಿಗಳ ಜೊತೆ ಅರ್ಜಿದಾರರ ಮನವಿಯನ್ನು ವಿದ್ಯುತ್ ಸರಬರಾಜು ಮಂಜೂರು ಮಾಡುವ ಪ್ರಾಧಿಕಾರಿಗೆ ರವಾನಿಸುವುದು.
 • ಸಕ್ಷಮ ಪ್ರಾಧಿಕಾರಿಯಿಂದ ವಿದ್ಯುತ್ ಸರಬರಾಜು ಸಂಪರ್ಕ ನೀಡುವ ಅನುಮೋದನೆ ದೊರೆತ ನಂತರ ನಿಗದಿತ ಕ್ರಮಗಳ ಪ್ರಕಾರ ಸೇವಾ ಸಂಪರ್ಕ ವ್ಯವಸ್ಥೆ ಮಾಡುವುದು.
 • ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಭರವಸಾ ಪೂರ್ವಕ ವಿದ್ಯುತ್ ಸರಬರಾಜು ಕಲ್ಪಿಸುವುದಕ್ಕಾಗಿ ೧೧ಕೆವಿ ಮಾರ್ಗಗಳು,ವಿತರಣ ಪರಿವರ್ತಕಗಳು, ಕೇಬಲ್ ಗಳು, ಸಲಕರಣೆಗಳ ನಿಯತ ನಿರ್ವಹಣೆ.
 • ವಿದ್ಯುತ್ ಸರಬರಾಜು ಸಂಬಂಧವಾದ ಗ್ರಾಹಕ ದೂರುಗಳು ಹಾಗೂ ಇತರ ತಾಂತ್ರಿಕ ವಿಷಯಗಳಿಗೆ ಕ್ರಮ ತೆಗೆದುಕೊಳ್ಳುವುದು.

ಉಪ ವಿಭಾಗ ಕಛೇರಿ:

ಪ್ರತಿ ಉಪವಿಭಾಗದ ವ್ಯಾಪ್ತಿಯಲ್ಲಿ ೩ರಿಂದ ಕಾರ್ಯ ಮತ್ತು ಪಾಲನಾ ಶಾಖಾ ಕಛೇರಿಗಳು ಕಾರ್ಯನಿರ್ವಹಿಸುತ್ತವೆ. ಉಪವಿಭಾಗಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ರವರು ಮುಖ್ಯಸ್ಥರಾಗಿರುತ್ತಾರೆ. ಇವರು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟ ಹಾಗೂ ಭರವಸಾಪೂರ್ವಕ ವಿದ್ಯುತ್ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಕಾರ್ಯ ಮತ್ತು ಪಾಲನಾ ಶಾಖಾ ಕಛೇರಿಗಳ ಕಾರ್ಯನಿರ್ವಹಣೆಯ ಉಸ್ತುವಾರಿ ನಡೆಸುತ್ತಾರೆ. ಉಪವಿಭಾಗದ ಆರ್ಥಿಕ ಹಾಗೂ ಲೆಕ್ಕನಿರ್ವಹಣೆಯನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ಸಹಾಯಕ ಲೆಕ್ಕಾಧಿಕಾರಿ/ಹಿರಿಯ ಸಹಾಯಕರು ಇರುತ್ತಾರೆ. ಉಪವಿಭಾಗಾಧಿಕಾರಿಯ ಕರ್ತವ್ಯಗಳು ಹೀಗಿವೆ:

 • ಅವರ ಅಧಿಕಾರ ಮಿತಿಗೆ ಒಳಪಟ್ಟು, ವಿದ್ಯುತ್ ಸರಬರಾಜು ಸೇವಾ ಸಂಪರ್ಕವನ್ನು ಮಂಜೂರು ಮಾಡುವುದು.
 • ಅವರ ಅಧಿಕಾರ ಮಿತಿಗೆ ಒಳಪಟ್ಟು, ನಿರ್ವಹಣಾ ಕಾಮಗಾರಿಗಳಿಗೆ ಸಂಬಂಧಿಸಿದ ಕೆಲಸಗಳನ್ನು ಅನುಮೋದಿಸುವುದು.
 • ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಭರವಸಾ ಪೂರ್ವಕ ವಿದ್ಯುತ್ ಸರಬರಾಜು ಕಲ್ಪಿಸುವುದಕ್ಕಾಗಿ ೧೧ಕೆವಿ ಮಾರ್ಗಗಳು,ವಿತರಣ ಪರಿವರ್ತಕಗಳು, ಕೇಬಲ್ ಗಳು , ಸಲಕರಣೆಗಳ ನಿಯತ ನಿರ್ವಹಣೆ.
 • ವಿದ್ಯುತ್ ಸರಬರಾಜು ಗುಣಮಟ್ಟ/ಅಡಚಣೆ, ತಾಂತ್ರಿಕ ವಿಷಯಗಳು, ಬಿಲ್ ಸಂಬಂಧವಾದ ಗ್ರಾಹಕ ದೂರುಗಳಿಗೆ ಸ್ಪಂದಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವ ಏರ್ಪಾಡು ಮಾಡುವುದು.
 • ಸಾರ್ವಜನಿಕ ಅಗತ್ಯತೆಗೆ ಅನುಸಾರವಾಗಿ ವಿದ್ಯುತ್ ಸರಬರಾಜು ವ್ಯವಸ್ಥೆಯ ಉನ್ನತೀಕರಣ.
 • ಕೆಲಸಗಳ ಮೇಲ್ವಿಚಾರಣೆ.
 • ತನ್ನ ವ್ಯಾಪ್ತಿಗೆ ಒಳಪಡುವ ಗ್ರಾಹಕರ ವಿದ್ಯುತ್ ಬಳಕೆ ಶುಲ್ಕದ ಬಿಲ್ಲುಗಳನ್ನು ತಯಾರಿಸಿ, ಗ್ರಾಹಕರಿಗೆ ವಿತರಿಸುವ ವ್ಯವಸ್ಥೆ.
 • ಸರಬರಾಜು ನಿಯಮಗಳ ಪ್ರಕಾರ ಗ್ರಾಹಕರಿಂದ ವಿದ್ಯುತ್ ಬಳಕೆ ಶುಲ್ಕ ವಸೂಲಾತಿ ಕ್ರಮಗಳು.
 • ನಿಗದಿತ ನಮೂನೆಯಲ್ಲಿ ಗ್ರಾಹಕರ ಲೆಕ್ಕ ನಿರ್ವಹಣೆ.
 • ಉನ್ನತ ಹಂತದ ಕಛೇರಿಗಳಿಗೆ ವಿವಿಧ ಅಂಕಿ-ಅಂಶ ಮಾಹಿತಿಗಳ ಸಲ್ಲಿಕೆ.
 • ಆರ್.ಎಂ.ಯು, ಎಂ.ಟಿ ಹಾಗೂ ಕೇಬಲ್ ದೋಷ ಇಂತಹ ಅಪಾಯಕಾರಿ ಹಾಗೂ ಪರಿಣಿತ ಕೆಲಸಗಳಿಗೆ ಸಾಮಗ್ರಿಗಳನ್ನು ಒದಗಿಸಿ, ನುರಿತ ಸಿಬ್ಬಂದಿಯನ್ನು ತೊಡಗಿಸುವುದು.
 • ವಿದ್ಯುತ್ ಕಳ್ಳತನವನ್ನು ಹತ್ತಿಕ್ಕಲು ಕ್ರಮ.
 • ವಿದ್ಯುತ್ ಕಳ್ಳತನದಲ್ಲಿ ತೊಡಗಿರುವ ವ್ಯಕ್ತಿಗಳು/ಗ್ರಾಹಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದು.

ವಿಭಾಗ ಕಛೇರಿ:

ಪ್ರತಿ ವಿಭಾಗದ ವ್ಯಾಪ್ತಿಯಲ್ಲಿ ೩ರಿಂದ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಛೇರಿಗಳು ಕಾರ್ಯನಿರ್ವಹಿಸುತ್ತವೆ. ಕಛೇರಿಯು ಕೇವಲ ಆಡಳಿತಾತ್ಮಕ ಕಛೇರಿಯಾಗಿದ್ದು, ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುವುದಿಲ್ಲ. ವಿಭಾಗಕ್ಕೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ರವರು ಮುಖ್ಯಸ್ಥರಾಗಿದ್ದು, ಇವರ ಅಡಿಯಲ್ಲಿ ಕೆಳ ದರ್ಜೆ ಹುದ್ದೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಾರೆ. ವಿಭಾಗದ ಆರ್ಥಿಕ ಹಾಗೂ ಲೆಕ್ಕನಿರ್ವಹಣೆಯನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ಲೆಕ್ಕಾಧಿಕಾರಿಯವರು ಇರುತ್ತಾರೆ. ವಿಭಾಗಾಧಿಕಾರಿಯವರಿಗೆ ವಹಿಸಿರುವ ಅಧಿಕಾರ ವ್ಯಾಪ್ತಿಯ ಮಿತಿಗೊಳಪಟ್ಟು ಕರ್ತವ್ಯಗಳು ಹೀಗಿವೆ:

 • ಉಪವಿಭಾಗಗಳ ಕಾರ್ಯಶೈಲಿಯು ನಿಗದಿಪಡಿಸಿರುವ ಕಾರ್ಯನೀತಿ ಮತ್ತು ನಿಯಮಾವಳಿಗಳ ಪ್ರಕಾರ ನಿರ್ವಹಣೆಗೊಳ್ಳುತ್ತಿರುವುದರ ಬಗ್ಗೆ ಉಸ್ತುವಾರಿ ನಡೆಸುವುದು.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ವಿದ್ಯುತ್ ಸರಬರಾಜು ಸೇವಾ ಸಂಪರ್ಕಗಳ ಮಂಜೂರಾತಿ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾರ್ಯನಿರ್ವಹಣೆ ಹಾಗೂ ಬಂಡವಾಳ ಕಾಮಗಾರಿಗಳ ಅನುಮೋದನೆ ನೀಡಿಕೆ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾಮಗಾರಿ ಉನ್ನತೀಕರಣದ ಅನುಮೋದನೆ ನೀಡಿಕೆ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾಮಗಾರಿಗೆ ಸಾಮಗ್ರಿ ಒದಗಣೆ ಮತ್ತು ಕೂಲಿ ಕಾರ್ಮಿಕರನ್ನು ನಿಯೋಜಿಸುವುದು.
 • ಇವರ ಕಾರ್ಯವ್ಯಾಪ್ತಿಯೊಳಗೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ಮೇಲುಸ್ತುವಾರಿ ಮತ್ತು ಅಂತಹ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು.
 • ಕೇಂದ್ರ ಕಛೇರಿ ಹಾಗೂ ಇತರ ಕಚೇರಿಗಳಿಗೆ ನಿಯತಕಾಲಿಕವಾಗಿ ಅಂಕಿ-ಅಂಶ ಮಾಹಿತಿಗಳ ಸಲ್ಲಿಕೆ.
 • ಕಾಮಗಾರಿ ಪ್ರಗತಿ, ಸೇವಾ ಸಂಪರ್ಕಗಳನ್ನು ಅನುಮತಿಸುವುದು, ವಿದ್ಯುತ್ ಕಳ್ಳತನವನ್ನು ತಡೆಯುವ ಕ್ರಮ. ರೆವಿನ್ಯೂ ಗಳಿಗೆಯನ್ನು ಉತ್ತಮಪಡಿಸುವುದು, ಗ್ರಾಹಕ ಕುಂದುಕೊರತೆ ನಿವಾರಣೆ ಇಂತಹ ಕಂಪನಿಯ ಚಟುವಟಿಕೆಗಳ ಕಾರ್ಯಸಾಧನೆಯ ಬಗ್ಗೆ ಖಚಿತಪಡಿಸಿಕೊಳ್ಳುವುದು.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಸರಿಯಾಗಿ ಕಾರ್ಯನಿರ್ವಹಿಸದ, ತಪ್ಪಿತಸ್ಥ ಉದ್ಯೋಗಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದು.

ವೃತ್ತ ಕಛೇರಿ:

ಪ್ರತಿ ವೃತ್ತದ ಕಛೇರಿಯ ವ್ಯಾಪ್ತಿಯಲ್ಲಿ ೩ರಿಂದ ಕಾರ್ಯ ಮತ್ತು ಪಾಲನಾ ವಿಭಾಗ ಕಛೇರಿಗಳು ಕಾರ್ಯನಿರ್ವಹಿಸುತ್ತವೆ. ಕಛೇರಿಯು ಸಹ ಕೇವಲ ಆಡಳಿತಾತ್ಮಕ ಕಛೇರಿಯಾಗಿದ್ದು, ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುವುದಿಲ್ಲ. ವೃತ್ತ ಕಛೇರಿಗೆ ಅಧೀಕ್ಷಕ ಇಂಜಿನಿಯರ್(ವಿ)ರವರು ಮುಖ್ಯಸ್ಥರಾಗಿದ್ದು, ಇವರ ಅಡಿಯಲ್ಲಿ ಕೆಳ ದರ್ಜೆ ಹುದ್ದೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಾರೆ. ವಿಭಾಗದ ಆರ್ಥಿಕ ಹಾಗೂ ಲೆಕ್ಕನಿರ್ವಹಣೆಯನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ಉಪ ಲೆಕ್ಕ ನಿಯಂತ್ರಣಾಧಿಕಾರಿಯವರು ಇರುತ್ತಾರೆ. ವೃತ್ತ ಕಛೇರಿಯ ಮುಖ್ಯಸ್ಥರ ಕರ್ತವ್ಯಗಳು ಹೀಗಿವೆ:

 • ವಿಭಾಗಗಳು ಹಾಗೂ ಉಪವಿಭಾಗಗಳ ಕಾರ್ಯಶೈಲಿಯು ನಿಗದಿಪಡಿಸಿರುವ ಕಾರ್ಯನೀತಿ ಮತ್ತು ನಿಯಮಾವಳಿಗಳ ಪ್ರಕಾರ ನಿರ್ವಹಣೆಗೊಳ್ಳುತ್ತಿರುವುದರ ಬಗ್ಗೆ ಉಸ್ತುವಾರಿ ನಡೆಸುವುದು.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ವಿದ್ಯುತ್ ಸರಬರಾಜು ಸೇವಾ ಸಂಪರ್ಕಗಳ ಮಂಜೂರಾತಿ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾರ್ಯನಿರ್ವಹಣೆ ಹಾಗೂ ಬಂಡವಾಳ ಕಾಮಗಾರಿಗಳ ಅನುಮೋದನೆ ನೀಡಿಕೆ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾಮಗಾರಿ ಉನ್ನತೀಕರಣದ ಅನುಮೋದನೆ ನೀಡಿಕೆ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾಮಗಾರಿಗೆ ಸಾಮಗ್ರಿ ಒದಗಣೆ ಮತ್ತು ಕೂಲಿ ಕಾರ್ಮಿಕರನ್ನು ನಿಯೋಜಿಸುವುದು.
 • ಇವರ ಕಾರ್ಯವ್ಯಾಪ್ತಿಯೊಳಗೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ಮೇಲುಸ್ತುವಾರಿ ಮತ್ತು ಅಂತಹ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು.
 • ಕೇಂದ್ರ ಕಛೇರಿ ಹಾಗೂ ಇತರ ಕಛೇರಿಗಳಿಗೆ ನಿಯತಕಾಲಿಕವಾಗಿ ಅಂಕಿ-ಅಂಶ ಮಾಹಿತಿಗಳ ಸಲ್ಲಿಕೆ.
 • ಕಾಮಗಾರಿ ಪ್ರಗತಿ, ಸೇವಾ ಸಂಪರ್ಕಗಳನ್ನು ಅನುಮತಿಸುವುದು, ವಿದ್ಯುತ್ ಕಳ್ಳತನವನ್ನು ತಡೆಯುವ ಕ್ರಮ. ರೆವಿನ್ಯೂ ಗಳಿಗೆಯನ್ನು ಉತ್ತಮಪಡಿಸುವುದು, ಗ್ರಾಹಕ ಕುಂದುಕೊರತೆ ನಿವಾರಣೆ ಇಂತಹ ಕಂಪನಿಯ ಚಟುವಟಿಕೆಗಳ ಕಾರ್ಯಸಾಧನೆಯ ಬಗ್ಗೆ ಖಚಿತಪಡಿಸಿಕೊಳ್ಳುವುದು.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಸರಿಯಾಗಿ ಕಾರ್ಯನಿರ್ವಹಿಸದ, ತಪ್ಪಿತಸ್ಥ ಉದ್ಯೋಗಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದು.

ವಲಯ ಕಛೇರಿ:

ಪ್ರತಿ ವಲಯ ಕಛೇರಿಯ ವ್ಯಾಪ್ತಿಯಲ್ಲಿ ೩ರಿಂದ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿಗಳು ಕಾರ್ಯನಿರ್ವಹಿಸುತ್ತವೆ. ಕಛೇರಿಯು ಸಹ ಕೇವಲ ಆಡಳಿತಾತ್ಮಕ ಕಛೇರಿಯಾಗಿದ್ದು, ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುವುದಿಲ್ಲ. ವಲಯ ಕಛೇರಿಗೆ ಮುಖ್ಯ ಇಂಜಿನಿಯರ್(ವಿ)ರವರು ಮುಖ್ಯಸ್ಥರಾಗಿದ್ದು, ಇವರ ಅಡಿಯಲ್ಲಿ ಕೆಳ ದರ್ಜೆ ಹುದ್ದೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಾರೆ. ವಿಭಾಗದ ಆರ್ಥಿಕ ಹಾಗೂ ಲೆಕ್ಕನಿರ್ವಹಣೆಯನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ನಿಯಂತ್ರಣಾಧಿಕಾರಿ(ಲೆಕ್ಕಗಳು)ಯವರು ಇರುತ್ತಾರೆ. ವಲಯ ಕಛೇರಿಯ ಮುಖ್ಯಸ್ಥರ ಕರ್ತವ್ಯಗಳು ಹೀಗಿವೆ

 • ವೃತ್ತ, ವಿಭಾಗ ಹಾಗೂ ಉಪವಿಭಾಗಗಳ ಕಾರ್ಯಶೈಲಿಯು ನಿಗದಿಪಡಿಸಿರುವ ಕಾರ್ಯನೀತಿ ಮತ್ತು ನಿಯಮಾವಳಿಗಳ ಪ್ರಕಾರ ನಿರ್ವಹಣೆಗೊಳ್ಳುತ್ತಿರುವುದರ ಬಗ್ಗೆ ಉಸ್ತುವಾರಿ ನಡೆಸುವುದು.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ವಿದ್ಯುತ್ ಸರಬರಾಜು ಸೇವಾ ಸಂಪರ್ಕಗಳ ಮಂಜೂರಾತಿ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾರ್ಯನಿರ್ವಹಣೆ ಹಾಗೂ ಬಂಡವಾಳ ಕಾಮಗಾರಿಗಳ ಅನುಮೋದನೆ ನೀಡಿಕೆ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾಮಗಾರಿ ಉನ್ನತೀಕರಣದ ಅನುಮೋದನೆ ನೀಡಿಕೆ.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಕಾಮಗಾರಿಗೆ ಸಾಮಗ್ರಿ ಒದಗಣೆ ಮತ್ತು ಕೂಲಿ ಕಾರ್ಮಿಕರನ್ನು ನಿಯೋಜಿಸುವುದು.
 • ಇವರ ಕಾರ್ಯವ್ಯಾಪ್ತಿಯೊಳಗೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ಮೇಲುಸ್ತುವಾರಿ ಮತ್ತು ಅಂತಹ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು.
 • ಕೇಂದ್ರ ಕಛೇರಿ ಹಾಗೂ ಇತರ ಕಛೇರಿಗಳಿಗೆ ನಿಯತಕಾಲಿಕವಾಗಿ ಅಂಕಿ-ಅಂಶ ಮಾಹಿತಿಗಳ ಸಲ್ಲಿಕೆ.
 • ಕಾಮಗಾರಿ ಪ್ರಗತಿ, ಸೇವಾ ಸಂಪರ್ಕಗಳನ್ನು ಅನುಮತಿಸುವುದು, ವಿದ್ಯುತ್ ಕಳ್ಳತನವನ್ನು ತಡೆಯುವ ಕ್ರಮ. ರೆವಿನ್ಯೂ ಗಳಿಗೆಯನ್ನು ಉತ್ತಮಪಡಿಸುವುದು, ಗ್ರಾಹಕ ಕುಂದುಕೊರತೆ ನಿವಾರಣೆ ಇಂತಹ ಕಂಪನಿಯ ಚಟುವಟಿಕೆಗಳ ಕಾರ್ಯಸಾಧನೆಯ ಬಗ್ಗೆ ಖಚಿತಪಡಿಸಿಕೊಳ್ಳುವುದು.
 • ಇವರಿಗೆ ನೀಡಿರುವ ಅಧಿಕಾರ ಮಿತಿಗೆ ಒಳಪಟ್ಟು, ಸರಿಯಾಗಿ ಕಾರ್ಯನಿರ್ವಹಿಸದ, ತಪ್ಪಿತಸ್ಥ ಉದ್ಯೋಗಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದು.

ಇತ್ತೀಚಿನ ನವೀಕರಣ​ : 03-03-2020 11:59 AM ಅನುಮೋದಕರು: Admin

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080