ಗ್ರಾಹಕ ಸಂವಾದ ಸಭೆ ಎಂದರೇನು

ಗ್ರಾಹಕ ಸಂವಾದ ಸಭೆ ಎಂದರೇನು?

  • ಗ್ರಾಹಕರ ತೃಪ್ತಿಕರವಾದ ಸೇವೆಗಾಗಿ ಮತ್ತು ದೂರುಗಳನ್ನು ತುರ್ತಾಗಿ ಬಗೆಹರಿಸುವುದಕ್ಕಾಗಿ, ಗ್ರಾಹಕ ಸಂವಾದ ಸಭೆಗಳನ್ನು ಪ್ರತಿ ತಿಂಗಳ ಮೂರನೇ ಶನಿವಾರದಂದು ಅಪರಾಹ್ನ ೩:೦೦ ರಿಂದ ೫:೩೦ ರ ವರಗೆ ಉಪವಿಭಾಗಗಳಲ್ಲಿ ನಡೆಸಲಾಗುತ್ತದೆ.
  • ಸಂಬಂಧಿತ ವೃತ್ತದ ಅಧೀಕ್ಷಕ ಇಂಜಿನಿಯರ್ ಹಾಗೂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಇವರು ಸದರಿ ಸಭೆಗಳಿಗೆ ಸರದಿ ಆಧಾರದ ಮೇಲೆ ಅಧ್ಯಕ್ಷತೆಯನ್ನು ವಹಿಸಿ, ಗ್ರಾಹಕರ ದೂರುಗಳನ್ನು ಆಲಿಸುವುದು.
  • ಗ್ರಾಹಕ ಸಂವಾದ ಸಭೆಗಳಲ್ಲಿ ಗ್ರಾಹಕರು ಸಹಭಾಗಿಗಳು. ಇಲ್ಲಿ ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಪ್ರಸ್ತಾಪಿಸಬಹುದು. ಇವುಗಳ ಕಾರ್ಯಕಲಾಪಗಳನ್ನು ಹಾಗೂ ಅಂಕಿಅಂಶಗಳನ್ನು ಜಾಲತಾಣದಲ್ಲಿ ದಾಖಲಿಸಲಾಗುತ್ತದೆ.
  • ಗ್ರಾಹಕ ಸಂವಹನ ಸಭೆಯಲ್ಲಿ, ಗ್ರಾಹಕರು ದೂರು ದಾಖಲಿಸಿರುವುದರಿಂದ, ಆ ದೂರು ಉಪವಿಭಾಗದ ಮಟ್ಟದಲ್ಲೆ ನಿವಾರಿಸಲಾಗುತ್ತದೆ. ದೂರುಗಳನ್ನು ನಿಯಮಿತ ಸಮಯದಲ್ಲಿ ನಿವಾರಿಸದಿದ್ದಲ್ಲಿ, ಅದನ್ನು ಮೇಲಿನ ಮಟ್ಟದ ಅಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ.
  • ಗ್ರಾಹಕರಿಗೆ ಸಮಾಧಾನವಾಗದಿದ್ದ ಪಕ್ಷದಲ್ಲಿ ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆ ಗೆ ಮನವಿ ಸಲ್ಲಿಸಬಹುದು.

ಇತ್ತೀಚಿನ ನವೀಕರಣ​ : 17-06-2020 05:01 PM ಅನುಮೋದಕರು: Admin