ಅಭಿಪ್ರಾಯ / ಸಲಹೆಗಳು

ಡಾಸ್ ಬಗ್ಗೆ

ಬೆಂಗಳೂರು ವಿತರಣಜಾಲ ಉನ್ನತೀಕರಣ ಯೋಜನೆ

ಸ್ವಯಂಚಾಲಿತ ವಿತರಣಾ ವ್ಯವಸ್ಥೆ

 

ಪೀಠಿಕೆ:

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು “ಬೆಂಗಳೂರು ನಗರ ವ್ಯಾಪ್ತಿಗೆ” ಸರಬರಾಜು ಮಾಡುತ್ತಿರುವ ವಿದ್ಯುತ್ತಿನ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಣ ಹಾಗೂ ಸಮಾನೀಕರಿಸುವ ನಿಟ್ಟಿನಲ್ಲಿ ಹಾಗೂ ಸಂಪೂರ್ಣ ಬೆಂಗಳೂರು ನಗರ ವ್ಯಾಪ್ತಿಯ ವಿತರಣಾ ವ್ಯವಸ್ಥೆಯನ್ನು ಸ್ವಯಂಚಾಲನೆಗೊಳಿಸಲು “ಬೆಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆಯ ಉನ್ನತೀಕರಣ” ಎಂಬ ಕಾರ್ಯಯೋಜನೆಯನ್ನು ಕೈಗೆತ್ತಿಕೊಂಡಿರುತ್ತದೆ.

ಈ ಸ್ವಯಂಚಾಲಿತ ಯೋಜನೆಯ ಮೂಲಕ ಹಾಲಿ ಇರುವ ವಿದ್ಯುತ್ ಜಾಲದ ನಿಯಂತ್ರಣ, ಮೇಲ್ವಿಚಾರಣೆ ಮತ್ತು 11ಕೆವಿ ಮಾರ್ಗಗಳ ಸ್ವಯಂಚಾಲಿತ ಕಾರ್ಯಾಚರಣೆಗೆ ಒತ್ತು ಕೊಟ್ಟು, ಈ ಯೋಜನೆಯನ್ನು ಪ್ರಸ್ತಾಪನೆ ಮಾಡಲಾಗಿದೆ. ಈ ಸ್ವಯಂಚಾಲಿತ ಯೋಜನೆಯಿಂದ ನವೀನ ತಂತ್ರಾಂಶವನ್ನು ಬಳಸುವ ಮೂಲಕ ವಿಶ್ವಾಸನೀಯ ಮತ್ತು ಉತ್ತಮ ಗುಣಮಟ್ಟದ ವಿದ್ಯುತನ್ನು ಸರಬರಾಜು ಮಾಡಬಹುದಾಗಿದೆ.

ಈ ಯೋಜನೆಯ ಅಂದಾಜು ವೆಚ್ಚ ಸುಮಾರು ರೂ.563.7ಕೋಟಿ ಆಗಿದ್ದು, ಈ ಯೋಜನೆಗೆ ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಸಂಸ್ಥೆಯು (JICA) ಸುಮಾರು ರೂ. 417.7ಕೋಟಿ ರೂ. ಆರ್ಥಿಕ ನೆರವನ್ನು ನೀಡುತ್ತದೆ. ಉಳಿದ ರೂ 146.6 ಕೋಟಿ ವೆಚ್ಚವನ್ನು ಬೆ.ವಿ.ಕಂಪನಿಯು ಭರಿಸಬೇಕಾಗುತ್ತದೆ.

ಡಾಸ್ ವ್ಯವಸ್ಥೆಯು ಪ್ರಸ್ತುತ 104 ಸಂಖ್ಯೆಯ ವಿದ್ಯುತ್ ಉಪಸ್ಥಾವರಗಳನ್ನು ಹಾಗೂ 1516 ಸಂಖ್ಯೆಯ 11ಕೆವಿ ಫೀಡರುಗಳನ್ನು ಒಳಗೊಂಡಿದೆ.

ಸ್ವಯಂಚಾಲಿತ ವಿತರಣಾ ವ್ಯವಸ್ಥೆಯು Distribution SCADA ಜೊತೆಗೆ ಕೆಳಕಂಡ Advanced DMS ಅಪ್ಲೀಕೇಶನ್ಗಳನ್ನು ಒಳಗೊಂಡಿದೆ.

 • Outage Management system (OMS)
 • Fault Detection, Location, and Restoration (FDIR)
 • Switching Management System (SMS)
 • Distribution State Estimation (DSE)
 • Distribution Load Forecasting
 • Crew Management
 • Optimum Feeder Reconfiguration

ಯೋಜನೆಯ ಪ್ರಮುಖ ಉದ್ದೇಶಗಳು;

 • ಬೆಂಗಳೂರು ನಗರದಲ್ಲಿ 11ಕೆವಿ ವಿತರಣಾ ಜಾಲದ ಉಸ್ತುವಾರಿ, ಮೇಲ್ವಿಚಾರಣೆ, ನಿಯಂತ್ರಣ ಹಾಗೂ ವಿತರಣಾ ಕಾರ್ಯವನ್ನು ಸ್ವಯಂಚಾಲನೆಗೊಳಿಸುವುದು.
 • ವಿಶ್ವಾಸನೀಯ ಮತ್ತು ಉತ್ತಮ ಗುಣಮಟ್ಟದ ವಿದ್ಯುತನ್ನು ಸರಬರಾಜು ಮಾಡುವುದು.
 • ವಿದ್ಯುತ್ ಮಾರ್ಗಗಳಲ್ಲಿನ ಅಡಚಣೆ/ ಲೋಪದೋಷಗಳು ಕಂಡುಬಂದಲ್ಲಿ ದೋಷರಹಿತ ಭಾಗಕ್ಕೆ ತ್ವರಿತಗತಿಯಲ್ಲಿ ಬೇರೆ ಮಾರ್ಗದ ಮುಖೇನ ಪುನರ್ ವಿದ್ಯುತ್ ಸಂಪರ್ಕ ಕಲ್ಪಿಸುವುದು.
 • ವಿದ್ಯುತ್ ಸರಬರಾಜು ಅಡಚಣೆಯಿಂದಾಗಿ, ಗ್ರಾಹಕರಿಗೆ ನೀಡಬೇಕಾಗಿದ್ದ ವಿದ್ಯುತ್ ಸರಬರಾಜಿನ ಬಳಕೆಯ ಪ್ರಮಾಣವು ಕುಂಠಿತಗೊಳ್ಳುವುದನ್ನು ತಡೆಗಟ್ಟಿ, ವಿದ್ಯುತ್ ಮಾರಾಟ ಪ್ರಮಾಣವನ್ನು ಹೆಚ್ಚಿಸುವುದು.

ಡಾಸ್ ಯೋಜನೆಯ ಕೆಲಸದ ವ್ಯಾಪ್ತಿ;

 • ಹಾಲಿ ಇರುವ 11ಕೆ.ವಿ ವಿತರಣಜಾಲದ ಮೇಲ್ಮಾರ್ಗವನ್ನು ಏರಿಯಲ್ ಬಂಚ್ ಕೇಬಲ್(ಎ.ಬಿ.ಸಿ)/ಯು.ಜಿ. ಕೇಬಲ್‌ಗೆ ಪರಿವರ್ತನೆಗೊಳಿಸುವುದು ಹಾಗೂ ಹೆಚ್.ಟಿ 11ಕೆ.ವಿ ಮೇಲ್ಮಾರ್ಗದ ಹಳೆ ತಂತಿಯನ್ನು ಮೇಲ್ದರ್ಜೆಯ ತಂತಿಯಿಂದ/ ಏರಿಯಲ್ ಬಂಚ್ ಕೇಬಲ್(ಎ.ಬಿ.ಸಿ)ನಿಂದ ಬದಲಾಯಿಸುವುದು.
 • 11ಕೆ.ವಿ ವಿತರಣಜಾಲದಲ್ಲಿ 1590 ಸಂಖ್ಯೆಯ ಡಾಸ್ ಆರ್.ಎಮ್.ಯುಗಳನ್ನು ಅಳವಡಿಸುವುದು. ಈ ಆರ್.ಎಮ್.ಯುಗಳಿಗೆ 1590 ಆರ್.ಟಿ.ಯುಗಳನ್ನು ಅಳವಡಿಸುವುದು.
 • 795 ಸಂಖ್ಯೆಯ ಲೈನ್ ರಿಕ್ಲೋಷರ್ಸ್ (LRC) & 795 ಸಂಖ್ಯೆಯ ಲೋಡ್ ಬ್ರೇಕ್ ಸ್ವಿಚ್ (LBS)ಗಳನ್ನು ಅಳವಡಿಸುವುದು.
 • ಡಾಸ್ ವ್ಯವಸ್ಥೆಗೆ ಅಗತ್ಯವಾಗಿರುವಂತಹ ಸಂವಹನ ಜಾಲ, ಹಾರ್ಡವೇರ್ & ಸಾಫ್ಟ್‍ವೇರ್ಗ ಳನ್ನು ಸ್ಥಾಪಿಸುವುದು ಹಾಗೂ ಅನುಷ್ಠಾನಗೊಳಿಸುವುದು.

ಉಪಯೋಗಗಳು:

 • ಬೆಂಗಳೂರು ನಗರದ 11ಕೆವಿ ವಿತರಣಾ ಜಾಲವನ್ನು ನೈಜ-ಸಮಯದಲ್ಲಿ ಪರಿವೀಕಣೆ ಮಾಡಬಹುದಾಗಿದೆ.
 • ನೈಜ ಸಮಯದಲ್ಲಿ 11ಕೆವಿ ಜಾಲವನ್ನು ಪರಿವೀಕ್ಷಣೆ ಮಾಡುವುದರಿಂದ ದೋಷರಹಿತ ಮಾರ್ಗಗಳನ್ನು ಬೇರ್ಪಡಿಸಿ, ಈ ಭಾಗಗಳಿಗೆ ತ್ವರಿತಗತಿಯಲ್ಲಿ ವಿದ್ಯುತ್ ಪುನಶ್ಚೇತನಗೊಳಿಸುವ ಮೂಲಕ ವಿದ್ಯುತ್ ಅಡಚಣೆ ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.
 • 11ಕೆವಿ ವಿತರಣಾ ಜಾಲದ ಕಾರ್ಯದಕ್ಷತೆಯನ್ನು ಉತ್ತಮಪಡಿಸಿಕೊಳ್ಳಬಹುದಾಗಿದೆ.
 • ವಿಶ್ವಾಸನೀಯ ಮತ್ತು ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದಾಗಿದ್ದು, ವಿದ್ಯುತ್ ನಷ್ಟವನ್ನು ಕಡಿಮೆಗೊಳಿಸಬಹುದಾಗಿದೆ.
 • MIS ವರದಿಗಳನ್ನು ಪಡೆಯಬಹುದಾಗಿದೆ.

ಡಾಸ್ ಯೋಜನೆಯ ವಿವರಗಳು:

ಈ ಯೋಜನೆಯು ವಿವಿಧ ಭಾಗಗಳನ್ನು ಹೊಂದಿದುರಿಂದ

ಕ್ರ.ಸಂ

ಪ್ಯಾಕೇಜ್ ಸಂಖ್ಯೆ

ಗುತ್ತಿಗೆದಾರರ ವಿವರ

ಪ್ಯಾಕೇಜ್ ನ ವಿವರ

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ

1.

PMC

M/s KEMA, USA & M/s CPRI, B’lore

Consultancy services for design, tendering, implementation and capacity building

ಸಂವಹನದೊಂದಿಗೆ ಡಾಸ್ ತಂತ್ರಜ್ಞಾನ ವ್ಯವಸ್ಥೆ

2.

Package-I

M/s EFACEC Engenharia-e-Systemas, Portugal

Establishing 2nos of DAS Master stations, Control Centre Facilities with all IT equipment’s & Communications System.

ಡಾಸ್ ನಿಯಂತ್ರಣ ಕೇಂದ್ರಗಳ ನಿರ್ಮಾಣ

3.

Package-IA

M/s Amrutha Constructions Pvt Ltd, B’lore & M/s Mithuna Construction Pvt. Ltd, B’lore

Construction of BICC-1 Control Centre building at HSR Layout

4.

Package-IB

M/s Hombale Construction & estates Pvt ltd, B’lore

Construction of BICC-2 Control Centre building at Rajajinagar.

ಡಾಸ್- ಉಪಕರಣಗಳು

5.

Package-IIA

M/s ABB, ltd., B’lore

Supply, Installation, commissioning and Integration of Remote terminal units for interfacing with control centre and DAS RMU

6.

Package-IIB

M/s CGL,Gurgaon

7.

Package-IIC

M/s EFACEC Enganharia-e-Systemas, Portugal

8.

Package-IIIA

M/s P&C Technologies, S. Korea

Supply, Installation, commissioning and Integration of LRS/LBS with control centre

9.

Package-IIIB

M/s ENTEC Electric Co. Ltd, S. Korea

10.

Package-IVA

M/s Schneider Electric Pvt ltd, B’lore

Supply, Installation, commissioning and Integration of DAS RMU with control center

11.

Package-IVB

M/s CGL, Nasik

12.

Package-IVC

M/s Siemens ltd, Chennai

13.

Package-VA

M/s Eswari Electric Pvt Ltd, Chennai

14.

Package-VB

M/s Schneider Infrastructure ltd, Vadodara

ವಿತರಣಾ ಜಾಲದ ಉನ್ನತೀಕರಣ

15.

Package-VI

M/s L&T Ltd, Chennai

Construction of Overhead lines (HT AB Cable, coyote conductor, spun poles and other accessories) for enhancing OH lines infrastructure in DAS project

16.

Package-VII

M/s L&T Ltd, Chennai

Construction of Underground cables for enhancing UG Distribution lines infrastructure in DAS project

ಇತ್ತೀಚಿನ ನವೀಕರಣ​ : 06-08-2020 04:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ