ಅಭಿಪ್ರಾಯ / ಸಲಹೆಗಳು

ಡಾಸ್ ಬಗ್ಗೆ

ಬೆಂಗಳೂರು ವಿತರಣಜಾಲ ಉನ್ನತೀಕರಣ ಯೋಜನೆ

ಸ್ವಯಂಚಾಲಿತ ವಿತರಣಾ ವ್ಯವಸ್ಥೆ

 

ಪೀಠಿಕೆ:

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು “ಬೆಂಗಳೂರು ನಗರ ವ್ಯಾಪ್ತಿಗೆ” ಸರಬರಾಜು ಮಾಡುತ್ತಿರುವ ವಿದ್ಯುತ್ತಿನ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಣ ಹಾಗೂ ಸಮಾನೀಕರಿಸುವ ನಿಟ್ಟಿನಲ್ಲಿ ಹಾಗೂ ಸಂಪೂರ್ಣ ಬೆಂಗಳೂರು ನಗರ ವ್ಯಾಪ್ತಿಯ ವಿತರಣಾ ವ್ಯವಸ್ಥೆಯನ್ನು ಸ್ವಯಂಚಾಲನೆಗೊಳಿಸಲು “ಬೆಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆಯ ಉನ್ನತೀಕರಣ” ಎಂಬ ಕಾರ್ಯಯೋಜನೆಯನ್ನು ಕೈಗೆತ್ತಿಕೊಂಡಿರುತ್ತದೆ.

ಈ ಸ್ವಯಂಚಾಲಿತ ಯೋಜನೆಯ ಮೂಲಕ ಹಾಲಿ ಇರುವ ವಿದ್ಯುತ್ ಜಾಲದ ನಿಯಂತ್ರಣ, ಮೇಲ್ವಿಚಾರಣೆ ಮತ್ತು 11ಕೆವಿ ಮಾರ್ಗಗಳ ಸ್ವಯಂಚಾಲಿತ ಕಾರ್ಯಾಚರಣೆಗೆ ಒತ್ತು ಕೊಟ್ಟು, ಈ ಯೋಜನೆಯನ್ನು ಪ್ರಸ್ತಾಪನೆ ಮಾಡಲಾಗಿದೆ. ಈ ಸ್ವಯಂಚಾಲಿತ ಯೋಜನೆಯಿಂದ ನವೀನ ತಂತ್ರಾಂಶವನ್ನು ಬಳಸುವ ಮೂಲಕ ವಿಶ್ವಾಸನೀಯ ಮತ್ತು ಉತ್ತಮ ಗುಣಮಟ್ಟದ ವಿದ್ಯುತನ್ನು ಸರಬರಾಜು ಮಾಡಬಹುದಾಗಿದೆ.

ಈ ಯೋಜನೆಯ ಅಂದಾಜು ವೆಚ್ಚ ಸುಮಾರು ರೂ.563.7ಕೋಟಿ ಆಗಿದ್ದು, ಈ ಯೋಜನೆಗೆ ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಸಂಸ್ಥೆಯು (JICA) ಸುಮಾರು ರೂ. 417.7ಕೋಟಿ ರೂ. ಆರ್ಥಿಕ ನೆರವನ್ನು ನೀಡುತ್ತದೆ. ಉಳಿದ ರೂ 146.6 ಕೋಟಿ ವೆಚ್ಚವನ್ನು ಬೆ.ವಿ.ಕಂಪನಿಯು ಭರಿಸಬೇಕಾಗುತ್ತದೆ.

ಡಾಸ್ ವ್ಯವಸ್ಥೆಯು ಪ್ರಸ್ತುತ 104 ಸಂಖ್ಯೆಯ ವಿದ್ಯುತ್ ಉಪಸ್ಥಾವರಗಳನ್ನು ಹಾಗೂ 1516 ಸಂಖ್ಯೆಯ 11ಕೆವಿ ಫೀಡರುಗಳನ್ನು ಒಳಗೊಂಡಿದೆ.

ಸ್ವಯಂಚಾಲಿತ ವಿತರಣಾ ವ್ಯವಸ್ಥೆಯು ವಿತರಣಾ ಸ್ಕಾಡಾ ಜೊತೆಗೆ ಕೆಳಕಂಡ Advanced DMS ಅಪ್ಲೀಕೇಶನ್ಗಳನ್ನು ಒಳಗೊಂಡಿದೆ.

  • ನಿಲುಗಡೆ ನಿರ್ವ‍ಹಣಾ ವ್ಯವಸ್ಥೆ-Outage Management system (OMS)
  • ದೋಷ ಪತ್ತೆಹಚ್ಚುವುದು, ಪ್ರತ್ಯೇಕತೆ ಹಾಗೂ ಪುನ:ಸ್ಥಾಪನೆ-Fault Detection, isolation, and Restoration (FDIR)
  • ಸ್ವಿಚಿಂಗ್ ಮ್ಯಾನೇಜ್ಮೆಂಟ್ ವ್ಯವಸ್ಥೆ-Switching Management System (SMS)
  • ವಿತರಣಾ ವ್ಯವಸ್ಥೆಯ ಸ್ಥಿತಿಗತಿ ಅಂದಾಜು-Distribution State Estimation (DSE)
  • ವಿತರಣಾ ವ್ಯವಸ್ಥೆಯ ಹೊರೆ ಅಂದಾಜು Distribution Load Forecasting (DLF)
  • ಸಿಬ್ಬಂದಿ ನಿರ್ವಹಣೆ-Crew Management
  • ಪ್ರಶಸ್ತ ಫೀಡರ್ ಪುನರ್‍ರಚನೆ-Optimum Feeder Reconfiguration

ಯೋಜನೆಯ ಪ್ರಮುಖ ಉದ್ದೇಶಗಳು;

  • ಬೆಂಗಳೂರು ನಗರದಲ್ಲಿ 11ಕೆವಿ ವಿತರಣಾ ಜಾಲದ ಉಸ್ತುವಾರಿ, ಮೇಲ್ವಿಚಾರಣೆ, ನಿಯಂತ್ರಣ ಹಾಗೂ ವಿತರಣಾ ಕಾರ್ಯವನ್ನು ಸ್ವಯಂಚಾಲನೆಗೊಳಿಸುವುದು.
  • ವಿಶ್ವಾಸನೀಯ ಮತ್ತು ಉತ್ತಮ ಗುಣಮಟ್ಟದ ವಿದ್ಯುತನ್ನು ಸರಬರಾಜು ಮಾಡುವುದು.
  • ವಿದ್ಯುತ್ ಮಾರ್ಗಗಳಲ್ಲಿನ ಅಡಚಣೆ/ ಲೋಪದೋಷಗಳು ಕಂಡುಬಂದಲ್ಲಿ ದೋಷರಹಿತ ಭಾಗಕ್ಕೆ ತ್ವರಿತಗತಿಯಲ್ಲಿ ಬೇರೆ ಮಾರ್ಗದ ಮುಖೇನ ಪುನರ್ ವಿದ್ಯುತ್ ಸಂಪರ್ಕ ಕಲ್ಪಿಸುವುದು.
  • ವಿದ್ಯುತ್ ಸರಬರಾಜು ಅಡಚಣೆಯಿಂದಾಗಿ, ಗ್ರಾಹಕರಿಗೆ ನೀಡಬೇಕಾಗಿದ್ದ ವಿದ್ಯುತ್ ಸರಬರಾಜಿನ ಬಳಕೆಯ ಪ್ರಮಾಣವು ಕುಂಠಿತಗೊಳ್ಳುವುದನ್ನು ತಡೆಗಟ್ಟಿ, ವಿದ್ಯುತ್ ಮಾರಾಟ ಪ್ರಮಾಣವನ್ನು ಹೆಚ್ಚಿಸುವುದು.

ಡಾಸ್ ಯೋಜನೆಯ ಕೆಲಸದ ವ್ಯಾಪ್ತಿ;

  • ಹಾಲಿ ಇರುವ 11ಕೆ.ವಿ ವಿತರಣಜಾಲದ ಮೇಲ್ಮಾರ್ಗವನ್ನು ಏರಿಯಲ್ ಬಂಚ್ ಕೇಬಲ್(ಎ.ಬಿ.ಸಿ)/ಯು.ಜಿ. ಕೇಬಲ್‌ಗೆ ಪರಿವರ್ತನೆಗೊಳಿಸುವುದು ಹಾಗೂ ಹೆಚ್.ಟಿ 11ಕೆ.ವಿ ಮೇಲ್ಮಾರ್ಗದ ಹಳೆ ತಂತಿಯನ್ನು ಮೇಲ್ದರ್ಜೆಯ ತಂತಿಯಿಂದ/ ಏರಿಯಲ್ ಬಂಚ್ ಕೇಬಲ್(ಎ.ಬಿ.ಸಿ)ನಿಂದ ಬದಲಾಯಿಸುವುದು.
  • 11ಕೆ.ವಿ ವಿತರಣಜಾಲದಲ್ಲಿ 1590 ಸಂಖ್ಯೆಯ ಡಾಸ್ ಆರ್.ಎಮ್.ಯುಗಳನ್ನು ಅಳವಡಿಸುವುದು. ಈ ಆರ್.ಎಮ್.ಯುಗಳಿಗೆ 1590 ಆರ್.ಟಿ.ಯುಗಳನ್ನು ಅಳವಡಿಸುವುದು.
  • 795 ಸಂಖ್ಯೆಯ ಲೈನ್ ರಿಕ್ಲೋಷರ್ಸ್ (LRC) & 795 ಸಂಖ್ಯೆಯ ಲೋಡ್ ಬ್ರೇಕ್ ಸ್ವಿಚ್ (LBS)ಗಳನ್ನು ಅಳವಡಿಸುವುದು.
  • ಡಾಸ್ ವ್ಯವಸ್ಥೆಗೆ ಅಗತ್ಯವಾಗಿರುವಂತಹ ಸಂವಹನ ಜಾಲ, ಹಾರ್ಡವೇರ್ & ಸಾಫ್ಟ್‍ವೇರ್ಗ ಳನ್ನು ಸ್ಥಾಪಿಸುವುದು ಹಾಗೂ ಅನುಷ್ಠಾನಗೊಳಿಸುವುದು.

ಉಪಯೋಗಗಳು:

  • ಬೆಂಗಳೂರು ನಗರದ 11ಕೆವಿ ವಿತರಣಾ ಜಾಲವನ್ನು ನೈಜ-ಸಮಯದಲ್ಲಿ ಪರಿವೀಕಣೆ ಮಾಡಬಹುದಾಗಿದೆ.
  • ನೈಜ ಸಮಯದಲ್ಲಿ 11ಕೆವಿ ಜಾಲವನ್ನು ಪರಿವೀಕ್ಷಣೆ ಮಾಡುವುದರಿಂದ ದೋಷರಹಿತ ಮಾರ್ಗಗಳನ್ನು ಬೇರ್ಪಡಿಸಿ, ಈ ಭಾಗಗಳಿಗೆ ತ್ವರಿತಗತಿಯಲ್ಲಿ ವಿದ್ಯುತ್ ಪುನಶ್ಚೇತನಗೊಳಿಸುವ ಮೂಲಕ ವಿದ್ಯುತ್ ಅಡಚಣೆ ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.
  • 11ಕೆವಿ ವಿತರಣಾ ಜಾಲದ ಕಾರ್ಯದಕ್ಷತೆಯನ್ನು ಉತ್ತಮಪಡಿಸಿಕೊಳ್ಳಬಹುದಾಗಿದೆ.
  • ವಿಶ್ವಾಸನೀಯ ಮತ್ತು ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದಾಗಿದ್ದು, ವಿದ್ಯುತ್ ನಷ್ಟವನ್ನು ಕಡಿಮೆಗೊಳಿಸಬಹುದಾಗಿದೆ.
  • ಎಂ.ಐ.ಎಸ್ ವರದಿಗಳನ್ನು ಪಡೆಯಬಹುದಾಗಿದೆ.

ಡಾಯೋಜನೆಯ ವಿವರಗಳು:

ಈ ಯೋಜನೆಯು ವಿವಿಧ ಭಾಗಗಳನ್ನು ಹೊಂದಿದುರಿಂದ

ಕ್ರ. ಸಂ

ಪ್ಯಾಕೇಜ್ ಸಂಖ್ಯೆ

ಗುತ್ತಿಗೆದಾರರ ವಿವರ

ಪ್ಯಾಕೇಜ್ ನ ವಿವರ

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ

1.

ಪಿಎಮ್‍ಸಿ

ಮೆ|| ಕೆಇಎಮ್ಎ, ಯುಎಸ್‍ಎ ಹಾಗೂ ಮೆ|| ಸಿಪಿಆರ್‍ಐ, ಬೆಂಗಳೂರು

ವಿನ್ಯಾಸ, ಟೆಂಡರಿಂಗ್, ಅನುಷ್ಠಾನ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಕನ್ಸಲ್ಟೆನ್ಸಿ ಸೇವೆಗಳು

ಸಂವಹನದೊಂದಿಗೆ ಡಾಸ್ ತಂತ್ರಜ್ಞಾನ ವ್ಯವಸ್ಥೆ

2.

ಪ್ಯಾಕೇಜ್-1

ಮೆ|| ಎಫಾಸೆಕ್ ಎಂಗೆನ್‍ಹಾರಿಯ ಇ-ಸಿಸ್ಟಂಮ್ಸ್, ಪೋರ್ಚುಗಲ್

ಎರಡು ನಿಯಂತ್ರಣ ಕೇಂದ್ರಗಳ ನಿರ್ಮಾಣದೊಂದಿಗೆ ಎಲ್ಲಾ IT, ಹಾರ್ಡ್‍ವೇರ್‍ ಹಾಗೂ ಸಂವಹನ ಸೌಲಭ್ಯವನ್ನು ಕಲ್ಪಿಸುವುದು.

ಡಾಸ್ ನಿಯಂತ್ರಣ ಕೇಂದ್ರಗಳ ನಿರ್ಮಾಣ

3.

ಪ್ಯಾಕೇಜ್-1ಎ

ಮೆ|| ಅಮೃತಾ ಕನ್ಸ್ಟ್ರಕ್ಷನ್ ಪ್ರೈ ಲಿ ಮತ್ತು ಮೆ|| ಮಿಥುನಾ ಕನ್ಸ್ಟ್ರಕ್ಷನ್ ಪ್ರೈ ಲಿ, ಬೆಂಗಳೂರು

ಹೆಚ್.ಎಸ್.ಆರ್ ಲೇಔಟ್ನಲ್ಲಿ ಡಾಸ್ ನಿಯಂತ್ರಣ ಕೇಂದ್ರದ ನಿರ್ಮಾಣ

4.

ಪ್ಯಾಕೇಜ್-1ಬಿ

ಮೆ|| ಮಿಥುನಾ ಕನ್ಸ್ಟ್ರಕ್ಷನ್ & ಎಸ್ಟೇಟ್ ಪ್ರೈ ಲಿ, ಬೆಂಗಳೂರು

ರಾಜಾಜಿನಗರದಲ್ಲಿ  ಡಾಸ್ ನಿಯಂತ್ರಣ ಕೇಂದ್ರದ ನಿರ್ಮಾಣ

ಡಾಸ್- ಉಪಕರಣಗಳು

5.

ಪ್ಯಾಕೇಜ್-2ಎ

ಮೆ|| ಎಬಿಬಿ, ಬೆಂಗಳೂರು

ಡಾಸ್ ನಿಯಂತ್ರಣ ಕೇಂದ್ರ ಹಾಗೂ ಆರ್.ಎಮ್.ಯುನೊಂದಿಗೆ ಸಂಪರ್ಕ ಸಾಧಿಸಲು ಆರ್.ಟಿ.ಯುಗಳ(RTU) ಪೂರೈಕೆ, ಸ್ಥಾಪನೆ, ನಿಯೋಜನೆ ಹಾಗೂ ಸಂಯೋಜನೆ.

6.

ಪ್ಯಾಕೇಜ್-2ಬಿ

ಮೆ|| ಸಿಜಿಎಲ್‍, ಗುರುಗ್ರಾಮ್

7.

ಪ್ಯಾಕೇಜ್-2ಸಿ

ಮೆ|| ಎಫಾಸೆಕ್ ಎಂಗೆನ್‍ಹಾರಿಯ ಇ-ಸಿಸ್ಟಂಮ್ಸ್, ಪೋರ್ಚುಗಲ್

8.

ಪ್ಯಾಕೇಜ್-3ಎ

ಮೆ|| ಪಿ&ಸಿ ಟೆಕ್ನಾಲೊಜಿಸ್‍, ಕೊರಿಯ

ಡಾಸ್ ನಿಯಂತ್ರಣ ಕೇಂದ್ರ ಸಂಪರ್ಕ ಸಾಧಿಸಲು ಲೈನ್ ರಿಕ್ಲೋಷರ್ಸ್ ಹಾಗೂ ಸೆಕ್ಷನಲೈಸರ್ಸ್ಗಳ (LRS/LBS) ಪೂರೈಕೆ, ಸ್ಥಾಪನೆ, ನಿಯೋಜನೆ ಹಾಗೂ ಸಂಯೋಜನೆ.

9.

ಪ್ಯಾಕೇಜ್-3ಬಿ

ಮೆ|| ಎನ್‍ಟೆಕ್‍ ಟೆಕ್ನಾಲೊಜಿಸ್‍, ಕೊರಿಯ

10.

ಪ್ಯಾಕೇಜ್-4ಎ

ಮೆ|| ಶ್ನೈಡರ್ ಎಲೆಕ್ಟ್ರಿಕ್ ಪ್ರೈ ಲಿ, ಬೆಂಗಳೂರು

ಡಾಸ್ ಆರ್.ಎಮ್.ಯುಗಳ ಪೂರೈಕೆ, ಸ್ಥಾಪನೆ, ನಿಯೋಜನೆ ಹಾಗೂ ಡಾಸ್ ನಿಯಂತ್ರಣ ಕೇಂದ್ರದೊಂದಿಗಿನ ಸಂಯೋಜನೆ.

11.

ಪ್ಯಾಕೇಜ್-4ಬಿ

ಮೆ|| ಸಿಜಿಎಲ್‍, ನಾಸಿಕ್

12.

ಪ್ಯಾಕೇಜ್-4ಸಿ

ಮೆ|| ಸೀಮನ್ಸ್ ಲಿ, ಚೆನ್ನೈ

13.

ಪ್ಯಾಕೇಜ್-5ಎ

ಮೆ|| ಈಶ್ವರಿ  ಎಲೆಕ್ಟ್ರಿಕ್ ಪ್ರೈ ಲಿ, ಚೆನ್ನೈ

14.

ಪ್ಯಾಕೇಜ್-5ಬಿ

ಮೆ|| ಶ್ನೈಡರ್ ಇನ್ಪ್ರಾಸ್ಟಕ್ಚರ್ ಲಿ, ವಾಡೋದರ

ವಿತರಣಾ ಜಾಲದ ಉನ್ನತೀಕರಣ

15.

ಪ್ಯಾಕೇಜ್-6

ಮೆ|| ಎಲ್&ಟಿ, ಚೆನ್ನೈ

ವಿತರಣಾ ಜಾಲದ ಮೇಲ್ಮಾರ್ಗದಲ್ಲಿ ಮೇಲ್ದರ್ಜೆಯ ತಂತಿಗಳ ನಿರ್ಮಾಣ (ಎಬಿ ಕೇಬಲ್, ಕೊಯೋಟ್, ತಂತಿ, ಸ್ಪನ್ ಕಂಬ)

16.

ಪ್ಯಾಕೇಜ್-7

ಮೆ|| ಎಲ್&ಟಿ, ಚೆನ್ನೈ

ವಿತರಣಾ ಜಾಲದ ಮೇಲ್ಮಾರ್ಗವನ್ನು ಯುಜಿ ಕೇಬಲ್‍ನಿಂದ ಬದಲಾವಣೆ

**********

ಇತ್ತೀಚಿನ ನವೀಕರಣ​ : 25-02-2021 06:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080