ಡಿ.ಎಸ್.ಎಂ ಬಗ್ಗೆ

ಬೇಡಿಕೆಗೆತಕ್ಕಂತೆ ನಿರ್ವಹಣೆ (ಡಿ.ಎಸ್.ಎಂ) ಬಗ್ಗೆ

 • ಭಾರತದಲ್ಲಿ ಮೊದಲ ಬಾರಿಗೆ ಬೆವಿಕಂಯು 05.11.2007 ರಂದು ಬೇಡಿಕೆಗೆತಕ್ಕಂತೆ ನಿರ್ವಹಣೆ (ಡಿ.ಎಸ್.ಎಂ) ಶಾಖೆಯನ್ನು ಪ್ರಾರಂಭಿಸಿತು.
 • ಬೇಡಿಕೆಗೆತಕ್ಕಂತೆ ನಿರ್ವಹಣೆಒಂದುವಿದ್ಯುತ್ ಸರಬರಾಜುಕಂಪನಿಯಕಾರ್ಯಕ್ರಮವಾಗಿದ್ದು, ವಿದ್ಯುತ್ ಸರಬರಾಜುಕಂಪನಿಯವಿದ್ಯುತ್‍ಬೇಡಿಕೆ ಹಾಗೂ ವಿತರಣಾ ಸಾಮಥ್ರ್ಯಕ್ಕೆಅನುಗುಣವಾಗಿಗ್ರಾಹಕರ ಸೌಕರ್ಯವನ್ನುರಾಜಿ ಮಾಡದೇ, ಗ್ರಾಹಕರ ವಿದ್ಯುತ್ ಬಳಕೆಯ ವಿಧಾನವನ್ನುಉತ್ಕøಷ್ಟ ಮಟ್ಟದಲ್ಲಿ ಹೊಂದಾಣಿಕೆ ಮಾಡುವುದು.
 • ಬೇಡಿಕೆಗೆತಕ್ಕಂತೆ ನಿರ್ವಹಣೆಯಲ್ಲಿಉತ್ತಮವಾದಕಾರ್ಯಾಚರಣಾಅಭ್ಯಾಸದ ಮೂಲಕ ಹೆಚ್ಚಿನದಕ್ಷತೆಯ ಉಪಕರಣಗಳನ್ನು ಮತ್ತುದಕ್ಷತೆಯಿಂದ ವಿದ್ಯುತ್‍ನ್ನುಬಳಸುವ ಒಂದು ಸಂಯೋಜನೆಯನ್ನು ಅವಲಂಭಿಸಿದೆ.
 • ಬೇಡಿಕೆಗೆತಕ್ಕಂತೆ ನಿರ್ವಹಣೆಯು, ವಿದ್ಯುತ್ ಬೇಡಿಕೆಯನ್ನುಅರಿತುಕೊಂಡುಅದರ ಪ್ರಮಾಣವನ್ನುಕಡಿಮೆಗೊಳಿಸುವುದು, ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಕಾರ್ಯನೀತಿ ಹಾಗೂ ಕ್ರಮಗಳ ಅನುಷ್ಠಾನವಾಗಿದೆ.

ಉದ್ದೇಶಗಳು:

  • ವಿಶ್ವಾಸಾರ್ಹತೆ ಮತ್ತು ಸ್ಥಿರತೆ:
 • ವಿದ್ಯುತ್‍ದಕ್ಷತೆ ಕಾರ್ಯಕ್ರಮಗಳ ಮೂಲಕ ಒಟ್ಟಾರೆ ಬೇಡಿಕೆಯನ್ನು ಕಡಿಮೆಗೊಳಿಸಿ ಹಾಗೂ ಜisಠಿಚಿಣಛಿhಚಿbಟeಕಾರ್ಯಕ್ರಮಗಳಡಿಯಲ್ಲಿ ಗರಿಷ್ಠ ಬೇಡಿಕೆಯನ್ನು ಕಡಿಮೆಗೊಳಿಸುವ ಮೂಲಕ ಡಿ.ಎಸ್.ಎಂ ವಿಶ್ವಾಸಾರ್ಹತ ಮತ್ತು ಸ್ಥಿರತೆಯ ವ್ಯವಸ್ಥೆಯನ್ನುನೀಡುತ್ತದೆ.
 • ವಿತರಣ ನಷ್ಟದಪ್ರಮಾಣವನ್ನು ಸಹ ಕಡಿಮೆಗೊಳಿಸುತ್ತದೆ
 • ವಿದ್ಯುತ್ ಮೂಲಗಳ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ
  • ಕಡಿಮೆ ವೆಚ್ಚ ಮತ್ತು ಸಮರ್ಥನೀಯತೆ:
 • ಬೇಡಿಕೆಗೆತಕ್ಕಂತೆ ನಿರ್ವಹಣೆಯತಂತ್ರಜ್ಞಾನ ನಿರ್ದಿಷ್ಟತೆಯುಳ್ಳದ್ದಾಗಿದ್ದು, ಇತರ ಸರಬರಾಜು ಮೂಲಗಳಿಗೆ ಅನುಗುಣವಾಗಿ ವ್ಯತ್ಯಯಗೊಳ್ಳುತ್ತದೆ.
 • ಕಾರ್ಯಕ್ರಮದ ವೆಚ್ಚವು ಪರ್ಯಾಯ ಮಾರುಕಟ್ಟೆಖರೀದಿ ದರಕ್ಕಿಂತಕಡಿಮೆಇದ್ದಾಗಅಳವಡಿಸಿಕೊಳ್ಳಬಹುದು.
 • ಕಡಿಮೆಆದಾಯದ ಗುಂಪಿನ ಗ್ರಾಹಕರನ್ನು ಸಹ ತಮ್ಮ ವಿದ್ಯುತ್ ಬಳಕೆ ವೆಚ್ಚವನ್ನು ಕಡಿಮೆಗೊಳಿಸಿಕೊಳ್ಳಲು ಡಿ.ಎಸ್.ಎಂಕಾರ್ಯಕ್ರಮವು ನೆರವಾಗುತ್ತದೆ.

ಡಿ.ಎಸ್.ಎಂ ಕಾರ್ಯಕ್ರಮಗಳ ವಿಧಗಳು:
ಈ ಕೆಳಗಿನ ಮೂರು ಕ್ರಮಗಳು ವಿದ್ಯುತ್ ಬಳಕೆ (ಕೆ.ಡಬ್ಲೂ.ಹೆಚ್), ಗರಿಷ್ಠ ಬೇಡಿಕೆ (ಕಿಲೊ ವ್ಯಾಟ್) ನ್ನು ಕಡಿಮೆಗೊಳಿಸುತ್ತದೆ. ಆದಾಗ್ಯೂಇದರ ಪ್ರಾಧಾನ್ಯತೆಯು ವ್ಯತ್ಯಯಗೊಳ್ಳುತ್ತದೆ.

 • ವಿದ್ಯುತ್ ಸಮರ್ಥತೆ:ಹಲವು ವರ್ಷಗಳಿಗೆ ಪರಿಣಾಮವಾಗುವಂತೆಒಟ್ಟಾರೆ ವಿದ್ಯುತ್ ಉಳಿತಾಯ ಹಾಗೂ ಗರಿಷ್ಠ ಬೇಡಿಕೆಯನ್ನುಕಡಿಮೆ ಮಾಡುವುದಕ್ಕೆಒತ್ತುನೀಡುವುದು.
 • ಗರಿಷ್ಠ ಬೇಡಿಕೆ ನಿರ್ವಹಣೆ:ಒಂದು ನಿರ್ದಿಷ್ಟಕಾಲಾವಧಿಗೆಗರಿಷ್ಠ ಬೇಡಿಕೆಯನ್ನು ಸ್ಥಿರವಾಗಿ ಕಡಿಮೆ ಮಾಡುವುದಕ್ಕೆಒತ್ತು ನೀಡುವುದು.
 • ಬೇಡಿಕೆಗೆ ಪ್ರತಿಕ್ರಿಯೆ:ವರ್ಷದಲ್ಲಿ ಕೆಲವೇ ದಿನಗಳಲ್ಲಿ ಅಲ್ಪಾವಧಿವರೆಗೆ ಬೇಡಿಕೆಯನ್ನು ಕಡಿಮೆಗೊಳಿಸಲು ಒತ್ತು ನೀಡುವುದು.

 

ಇತ್ತೀಚಿನ ನವೀಕರಣ​ : 02-06-2020 01:04 PM ಅನುಮೋದಕರು: Admin