ಅಭಿಪ್ರಾಯ / ಸಲಹೆಗಳು

ವಿದ್ಯುತ್ ಉಳಿಸಲು ಸಲಹೆಗಳು

 

  • ದೀಪಗಳು:

 

 

      • ಅನವಶ್ಯಕವಾಗಿ ದೀಪಗಳನ್ನು ಉರಿಸಬೇಡಿ, ಅವಶ್ಯಕತೆಇದ್ದಾಗ ಮಾತ್ರ ಉಪಯೋಗಿಸಿ
      • ನಿಮ್ಮ ಕಿಟಕಿಗಳಿಗೆ ತಿಳಿ ಬಣ್ಣದ, ತೆಳು ಪದರದ ಕರ್ಟೈನುಗಳನ್ನು ಅಳವಡಿಸಿ, ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣಗಳ ಬೆಳಕನ್ನು ಪಡೆಯಿರಿ ಹಾಗೂ ಸೂರ್ಯನ ಬೆಳಕನ್ನು ಹೆಚ್ಚು ಪಡೆಯಲು ತಿಳಿ ಬಣ್ಣಗಳಿಂದ ಅಲಂಕರಿಸಿ
      • ಹೆಚ್ಚು ಬೆಳಕನ್ನು ಪಡೆಯಲು ದೀಪದಜೋಡಣೆ, ದೀಪಗಳನ್ನುಆಗಾಗ್ಗೆ ಸ್ವಚ್ಛಗೊಳಿಸಿ
      • ಇಡೀಕೊಠಡಿಗೆ ಪ್ರಖರವಾಗಿಬೆಳಕನ್ನು ಪಡೆಯುವ ಬದಲು, ಅವಶ್ಯವಿರುವೆಡೆ ಬೆಳಕನ್ನು ಪಡೆಯುವ ಸಾಧನವನ್ನು ಉಪಯೋಗಿಸಿ
      • ಕಾಪರ್ ಚೋಕುಗಳ ಬದಲುಎಲೆಕ್ಟ್ರಾನಿಕ್ ಚೋಕುಗಳನ್ನು ಉಪಯೋಗಿಸಿ.
      • ಸಾಂಪ್ರದಾಯಿಕಇನ್‍ಕ್ಯಾಂಡಿಸೆಂಟ್ ಬಲ್ಬ್‍ಗಳ ಬದಲಾಗಿಎಲ್.ಇ.ಡಿ ಬಲ್ಬ್‍ಗಳನ್ನು ಉಪಯೋಗಿಸುವುದು. 150 ವ್ಯಾಟ್ ಹ್ಯಾಲೋಜೆನ್ ದೀಪಕ್ಕಿಂತ 16 ವ್ಯಾಟ್‍ಎಲ್.ಇ.ಡಿ ಬಲ್ಬ್ ಹೆಚ್ಚು ಪ್ರಕಾಶಮಾನವಾಗಿರುತ್ತದೆ.ಇನ್‍ಕ್ಯಾಂಡಿಸೆಂಟ್ ಬಲ್ಬ್‍ಗಳ ಬಾಳಿಕೆಯು 1000 ಘಂಟೆಗಳಾಗಿದ್ದು, ಸಿ.ಎಫ್.ಎಲ್ ಬಲ್ಬ್‍ಗಳ ಬಾಳಿಕೆಯು 8000 ಘಂಟೆಗಳು ಆದರೆಎಲ್.ಇ.ಡಿ ಬಲ್ಬ್‍ಗಳ ಬಾಳಿಕೆಯು 25000 ಘಂಟೆಗಳಾಗಿರುತ್ತದೆ.ಎಲ್.ಇ.ಡಿ ದೀಪಗಳಲ್ಲಿ ಮಕ್ರ್ಯೂರಿಇರುವುದಿಲ್ಲ ಮತ್ತು ಇವುಗಳ ಬಾಳಿಕೆಯ ಮೇಲೆ ‘ಆನ್’ ಅಂಡ್ ‘ಆಫ್’ಕ್ರಿಯೆಗಳ ಪ್ರಭಾವಬೀರುವುದಿಲ್ಲ.

 

 

  • ಫ್ಯಾನುಗಳು:

 

 

      • ಸೀಲಿಂಗ್ ಫ್ಯಾನುಗಳಿಗೆ ಸಾಂಪ್ರದಾಯಿಕ ರೆಗ್ಯೂಲೇಟರ್‍ಗಳ ಬದಲುಎಲೆಕ್ಟ್ರಾನಿಕ್ ರೆಗ್ಯೂಲೇಟರ್‍ಗಳನ್ನು ಉಪಯೋಗಿಸಿ
      • ಎಕ್ಸಾಸ್ಟ್ ಫ್ಯಾನುಗಳನ್ನು ಸೀಲಿಂಗ್ ಫ್ಯಾನುಗಳಿಗಿಂತ ಹೆಚ್ಚಿನಎತ್ತರದಲ್ಲಿ ಅಳವಡಿಸಿ
      • ಡೈರಿ ಮತ್ತು ಪೌಲ್ಟ್ರಿ ಕೈಗಾರಿಕೆಗಳಲ್ಲಿ ಮಲ್ಟಿ ಆಕ್ಸಿಯಲ್‍ಎಕ್ಸಾಸ್ಟ್ ಫ್ಯಾನ್‍ಗಳನ್ನು ಬಳಸುವುದರಿಂದ ವಿದ್ಯುತ್ ಬಳಕೆಯು ಕಡಿಮೆಯಾಗುತ್ತದೆ ಮತ್ತು ಶಬ್ದವು ಕಡಿಮೆಯಾಗುತ್ತದೆ.
      • ಬಿ.ಇ.ಇ 5 ಸ್ಟಾರ್‍ರೇಟೆಡ್ ವಿದ್ಯುತ್ ದಕ್ಷತೆಯುಳ್ಳ ಫ್ಯಾನ್‍ಗಳನ್ನು ಬಳಸುವುದು

 

 

  • ಎಲೆಕ್ಟ್ರಿಕ್‍ಐರನ್:

 

 

      • ಸ್ವಯಂಚಾಲಿತವಾಗಿತಾಪಮಾನವನ್ನು ಕಡಿತಗೊಳಿಸುವ ಐರನ್‍ಪೆಟ್ಟಿಗೆಗಳನ್ನು ಆಯ್ಕೆ ಮಾಡಿಕೊಳ್ಳಿ
      • ಸೂಕ್ತ ರೆಗ್ಯೂಲೇಟರ್ ಸ್ಥಾನವನ್ನು ಬಳಸಿ ಐರನ್ ಮಾಡುವುದು
      • ಐರನ್ ಮಾಡುವಾಗ ಬಟ್ಟೆಗಳ ಮೇಲೆ ಹೆಚ್ಚು ನೀರು ಸಿಂಪಡಿಸಬೇಡಿ
      • ಒದ್ದೆ ಬಟ್ಟೆಗಳನ್ನು ಐರನ್ ಮಾಡಬೇಡಿ
      • ಬಿ.ಇ.ಇ 5 ಸ್ಟಾರ್‍ರೇಟೆಡ್‍ವಿದ್ಯುತ್ ದಕ್ಷತೆಯುಳ್ಳ ಐರನ್ ಪೆಟ್ಟಿಗೆಗಳನ್ನು ಬಳಸುವುದು
    1. ಅಡಿಗೆ ಮನೆ ಉಪಕರಣಗಳು:ಬಿ.ಇ.ಇ 5 ಸ್ಟಾರ್‍ರೇಟೆಡ್ ವಿದ್ಯುತ್ ದಕ್ಷತೆಯುಳ್ಳ ಉಪಕರಣಗಳನ್ನು ಉಪಯೋಗಿಸುವುದು

 

 

  • ಮಿಕ್ಸರ್:

 

 

        • ಆಹಾರ ಸಂಸ್ಕರಣಯಂತ್ರದಲ್ಲಿ (ಮಿಕ್ಸರ್ ಮತ್ತುಗ್ರೈಂಡಿಂಗ್) ಡ್ರೈಗ್ರೈಡಿಂಗ್ ಮಾಡಬೇಡಿ. ಇದುದ್ರವ ಪದಾರ್ಥಕ್ಕಿಂತಅಧಿಕ ಸಮಯವನ್ನು ತೆಗೆದುಕೊಳ್ಳುತ್ತದೆ

 

 

  • ಮೈಕ್ರೋವೇವ್‍ಓವನ್:

 

 

        • ಅಧಿಕ ಪ್ರಮಾಣದಆಹಾರವನ್ನು ಬೇಯಿಸಬೇಡಿ
        • ಬ್ರೆಡ್‍ಅಥವಾಪೇಸ್ಟ್ರಿಗಳನ್ನು ತಯಾರಿಸುವ ಹೊರತು ಪಡಿಸಿ, ಓವನ್‍ನ್ನು ಮುಂಚಿತವಾಗಿಪ್ರೀಹೀಟ್ ಮಾಡುವಅಗತ್ಯವಿಲ್ಲ.

 

 

  • ಇಂಡಕ್ಷನ್ ಸ್ಟೌವ್:

 

 

        • ಸಾಂಪ್ರದಾಯಿಕಎಲೆಕ್ಟ್ರಿಕ್‍ಕಾಯಿಲ್/ಹಾಟ್ ಪ್ಲೇಟ್‍ಗಳಿಗಿಂತ ವಿದ್ಯುತ್ ಬಳಕೆಯು 50% ಕಡಿಮೆಯಾಗುತ್ತದೆ
        • ಸಾಂಪ್ರದಾಯಿಕಎಲೆಕ್ಟ್ರಿಕ್ ಸ್ಟೌವ್‍ಗಿಂತಕಡಿಮೆ ಸಮಯದಲ್ಲಿ ನೀರು ಬಿಸಿಯಾಗುತ್ತದೆ

 

 

  • ಎಲೆಕ್ಟ್ರಿಕ್ ಸ್ಟೌವ್:

 

 

        • ನಿಗಧಿತಅಡುಗೆ ಸಮಯಕ್ಕೆ ಹಲವು ನಿಮಿಷಗಳ ಮೊದಲೇಎಲೆಕ್ಟ್ರಿಕ್ ಸ್ಟೌವ್‍ಆಫ್ ಮಾಡಿ
        • ಕುಕಿಂಗ್‍ಕಾಯಿಲ್‍ಗೆಪೂರ್ಣ ಸಂಪರ್ಕಹೊಂದುವ ಸಮತಟ್ಟಾದ ಫ್ಯಾನ್‍ಗಳನ್ನೇ ಉಪಯೋಗಿಸಿ

 

 

  • ರೆಫ್ರಿಜರೇಟರ್:

 

 

        • ಪದೇ ಪದೇರೆಫ್ರಿಜರೇಟರಿನ ಬಾಗಿಲನ್ನುತೆರೆಯಬೇಡಿ
        • ನಿಮ್ಮರೆಫ್ರಿಜರೇಟರಿನ ಬಾಗಿಲು ಗಟ್ಟಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ.
        • ನಿಮ್ಮರೆಫ್ರಿಜರೇಟರ್/ಫ್ರೀಜರನ್ನುತುಂಬಾ ಶೀತಲಗೊಳಿಸಬೇಡಿ.
        • ರೆಫ್ರಿಜರೇಟರಿನಲ್ಲಿ ಬಿಸಿಯಾದ ಅಥವಾ ಬೆಚ್ಚಗಿನ ಪದಾರ್ಥಗಳನ್ನು ಇಡಬೇಡಿ
        • ನಿಮ್ಮರೆಫ್ರಿಜರೇಟರಿನ ಬಾಗಿಲನ್ನುತುಂಬಾ ಸಮಯತೆರೆದಿಡಬೇಡಿಅದರಲ್ಲಿರುವ ಶೀತಗಾಳಿಯು ಹೊರಹೋಗುತ್ತದೆ
        • ರೆಫ್ರಿಜರೇಟರ್ ಹಾಗೂ ಗೋಡೆಯ ಮಧ್ಯೆಜಾಗವನ್ನು ಬಿಡುವುದರಿಂದ ಗಾಳಿಯು ರೆಫ್ರಿಜರೇಟರ್ ಸುತ್ತ ಚಲಿಸಲು ಸಾಧ್ಯವಾಗುತ್ತದೆ
        • ಬಿ.ಇ.ಇ 5 ಸ್ಟಾರ್‍ರೇಟೆಡ್ ರೆಫ್ರಿಜರೇಟರ್‍ಗಳನ್ನು ಬಳಸುವುದು

 

 

  • ವಾಷಿಂಗ್ ಮೆಷಿನ್:

 

 

        • ವಾಷಿಂಗ್ ಮೆಷಿನ್‍ನಲ್ಲಿ ಬಟ್ಟೆಗಳನ್ನು ಭರ್ತಿಯಾಗಿತುಂಬಿ ಉಪಯೋಗಿಸಿ.
        • ಗರಿಷ್ಠ ಪ್ರಮಾಣದ ನೀರನ್ನು ಬಳಸಿ
        • ವಿದ್ಯುತ್ ಉಳಿಸಲು ಟೈಮರ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ
        • ಎಲೆಕ್ಟ್ರಿಕ್ ಡ್ರೈಯರ್‍ಗಳ ಬದಲು ಬಟ್ಟೆಗಳನ್ನು ನೈಸರ್ಗಿಕವಾಗಿಒಣಗಿಸಲುಆದ್ಯತೆ ನೀಡಿ
        • ಬಿ.ಇ.ಇ 5 ಸ್ಟಾರ್‍ರೇಟೆಡ್ ವಾಷಿಂಗ್ ಮೆಷಿನ್‍ಗಳನ್ನು ಬಳಸುವುದು

 

 

  • ಎಲೆಕ್ಟ್ರಿಕ್ ಉಪಕರಣಗಳು:

 

 

      • ಟಿ.ವಿ ಹಾಗೂ ಆಡಿಯೋ ಸಿಸ್ಟಂಗಳನ್ನು ಉಪಯೋಗಿಸದೇಇರುವ ಸಮಯದಲ್ಲಿ ಸ್ವಿಚ್ ಆಫ್ ಮಾಡಿ, ಸ್ವಿಚ್ ಆಫ್ ಮಾಡದೇಇದ್ದರೆಅನವಶ್ಯಕವಾಗಿ 10 ವ್ಯಾಟ್ ವಿದ್ಯುತ್ ಬಳಕೆಯಾಗುತ್ತದೆ.

 

 

  • ಗಣಕಯಂತ್ರ:

 

 

      • ಮನೆ ಹಾಗೂ ಕಛೇರಿಯಲ್ಲಿಗಣಕಯಂತ್ರಉಪಯೋಗಿಸದ ಸಮಯದಲ್ಲಿಅದರ ಸಂಪರ್ಕವನ್ನು ಸ್ವಿಚ್ ಆಫ್ ಮಾಡಿ. ದಿನಕ್ಕೆ 24 ಗಂಟೆಗಳ ಕಾಲ ಸ್ವಿಚ್ ಆನ್‍ನಲ್ಲಿಇರುವಗಣಕಯಂತ್ರವುಒಂದುದಕ್ಷರೆಫ್ರಿಜರೇಟರ್‍ಗಿಂತ ಹೆಚ್ಚಿನ ವಿದ್ಯುತ್ ಬಳಸುತ್ತದೆ.
      • ಗಣಕಯಂತ್ರದ ಮಾನಿಟರ್‍ನ ಆಪ್ಟಿಮಮ್ ಬ್ರೈಟ್ನೆಸ್ ಮಟ್ಟದಲ್ಲಿ ಬಳಸುವುದರಿಂದ ವಿದ್ಯುತ್ ಬಳಕೆಯು ಕಡಿಮೆಯಾಗುತ್ತದೆ. ಕನಿಷ್ಠ ಬ್ರೈಟ್ನೆಸ್ ಮಾನಿಟರ್‍ನಿಂದ 11ವ್ಯಾಟ್ಸ್ ವಿದ್ಯುತ್ ಬಳಕೆಯಾಗುತ್ತದೆ ಮತ್ತು ಗರಿಷ್ಠ ಬ್ರೈಟ್ನೆಸ್ ಮಾನಿಟರ್‍ನಿಂದ 25ವ್ಯಾಟ್ಸ್ ವಿದ್ಯುತ್ ಬಳಕೆಯಾಗುತ್ತದೆ.

 

 

  • ಹವಾ ನಿಯಂತ್ರಣ ವ್ಯವಸ್ಥೆ:

 

 

    • ಸ್ವಯಂಚಾಲಿತವಾಗಿತಾಪಮಾನವನ್ನು ಕಡಿತಗೊಳಿಸುವ ಹವಾ ನಿಯಂತ್ರಣಗಳಿಗೆ ಆದ್ಯತೆ ನೀಡಿ
    • ರೆಗ್ಯೂಲೇಟರುಗಳನ್ನು ಲೋ ಕೂಲ್‍ಅಥವಾ ವಿದ್ಯುತ್‍ದಕ್ಷತಾ ಹಂತದಲ್ಲಿಉಪಯೋಗಿಸಿ
    • ಕೊಠಡಿಯಲ್ಲಿರುವ ಹವಾಮಾನ ನಷ್ಟವಾಗದೇಇರಲು ಬಾಗಿಲು ಮತ್ತು ಕಿಟಕಿಗಳು ಗಟ್ಟಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ
    • ಬಿ.ಇ.ಇ 5 ಸ್ಟಾರ್‍ರೇಟೆಡ್ ಹವಾ ನಿಯಂತ್ರಣಗಳನ್ನು ಬಳಸುವುದು

ಇತ್ತೀಚಿನ ನವೀಕರಣ​ : 21-05-2020 02:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080