ಅಭಿಪ್ರಾಯ / ಸಲಹೆಗಳು

ಆರ್ ಎ ಪಿ ಡಿ ಆರ್ ಪಿ ಭಾಗ-ಬಿ

ಆರ್ ಎ ಪಿ ಡಿ ಆರ್ ಪಿ (ಭಾಗ ಬಿ)ದ ಬಗ್ಗೆ

 

ಪರಿಚಯ:

ಭಾರತ ಸರ್ಕಾರವು ತನ್ನ ೧೧ನೆಯ ಯೋಜನೆಯಲ್ಲಿ, ಪುನಾರಚಿತ ತ್ವರಿತ ವಿದ್ಯುತ್ ಅಭಿವೃದ್ಧಿ ಸುಧಾರಣಾ ಯೋಜನೆಯನ್ನು ಪರಿಷ್ಕೃತ ಷರತ್ತು ಹಾಗೂ ನಿಬಂಧನೆಗಳೊಡನೆ ಒಂದು ಕೇಂದ್ರ ಸರ್ಕಾರದ ಯೋಜನೆಯನ್ನಾಗಿ ಮುಂದುವರೆಸಬೇಕೆಂದು ಪ್ರಸ್ತಾಪಿಸಿತು. ಈ ಕಾರ್ಯಕ್ರಮದ ಉದ್ದೇಶ ಕೆಳಕಂಡವುಗಳ ಪರವಾಗಿರತಕ್ಕದ್ದು:
 • ನಷ್ಟ ಪ್ರಮಾಣವನ್ನು ಸಮರ್ಥವಾಗಿ ಪ್ರಾತ್ಯಕ್ಷಿಕವಾಗಿ ಇಳಿತಗೊಳಿಸುವ ವಾಸ್ತವಿಕ ಕಾರ್ಯಸಾಧನೆಯಾಗಿರತಕ್ಕದ್ದು.
 • ವಿತರಣಾ ಕಂಪೆನಿಗಳಲ್ಲಿ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟ ಪ್ರಮಾಣವನ್ನು ಸಮಗ್ರವಾಗಿ ಇಳಿತಗೊಳಿಸುವಲ್ಲಿ ಕಾರ್ಯಯೋಜನೆಗಳು.
 • ವಾಸ್ತವಿಕ ದತ್ತ ಮಾಹಿತಿಯನ್ನು ಪಡೆದುಕೊಳ್ಳಲು ಭರವಸಾಪೂರ್ವಕ ಹಾಗೂ ಸ್ವನಿರ್ವಹಿತ ವ್ಯವಸ್ಥೆಯನ್ನು ಸ್ಥಾಪಿಸುವುದು.
 • ವಿತರಣಾ ವ್ಯವಸ್ಥೆಯನ್ನು ಉನ್ನತೀಕರಿಸುವ ಯೋಜನೆಗೂ ಮುನ್ನ ವಿದ್ಯುತ್ ಬಳಕೆ ಲೆಕ್ಕೀಕರಣ ಪ್ರದೇಶಗಳಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆ.

ಉದ್ದೇಶಗಳು:

 • ಮುಂದಿನ ೫ ವರ್ಷಗಳಲ್ಲಿ ಆಯ್ದ ಪಟ್ಟಣಗಳಲ್ಲಿ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟ ಪ್ರಮಾಣವನ್ನು ಶೇಕಡಾ ೧೫ರಷ್ಟು ಇಳಿತಗೊಳಿಸುವುದು.
 • ವಿದ್ಯುತ್ ಸರಬರಾಜು ಕಂಪೆನಿಗಳ ಸಮಗ್ರ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟ ಪ್ರಮಾಣವನ್ನು ವಾರ್ಷಿಕವಾಗ ಇಳಿತಗೊಳಿಸುವುದು.
 • ಶೇಕಡಾ ೩೦ಕ್ಕಿಂತ ಅಧಿಕ ನಷ್ಟ ಪ್ರಮಾಣವಿರುವೆಡೆ ವಾರ್ಷಿಕವಾಗಿ ಶೇಕಡಾ ೩ರ ಪ್ರಮಾಣದಲ್ಲಿ ಇಳಿತಗೊಳಿಸುವುದು.
 • ಶೇಕಡಾ ೩೦ಕ್ಕಿಂತ ಕಡಿಮೆ ನಷ್ಟ ಪ್ರಮಾಣವಿರುವೆಡೆ ವಾರ್ಷಿಕವಾಗಿ ಶೇಕಡಾ ೧.೫ರ ಪ್ರಮಾಣದಲ್ಲಿ ಇಳಿತಗೊಳಿಸುವುದು

ನಿಧಿ ಪಡೆಯುವಿಕೆಯ ಮೂಲಗಳು:

ಭಾಗ-ಬಿ ಗೆ ಭಾರತ ಸರ್ಕಾರವು ಶೇಕಡಾ೨೫ರಷ್ಟು ಸಾಲವನ್ನು ಒದಗಿಸುತ್ತದೆ. ಉಳಿದ ಶೇಕಡಾ೭೫ರಷ್ಟನ್ನು ಆರ್ಥಿಕ ಸಂಸ್ಥೆಗಳು/ಗ್ರಾ.ವಿ.ನಿ/ಪಿ.ಎಫ್.ಸಿ.ಮುಂತಾದವರಿಂದ ಪಡೆದುಕೊಳ್ಳತಕ್ಕದ್ದು.
 • ಸ್ವಾಯತ್ತ ಸಂಸ್ಥೆ
 • ಯೋಜಿತ ಪ್ರದೇಶಗಳಲ್ಲಿ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟ ಪ್ರಮಾಣವನ್ನು ಸಮಗ್ರವಾಗಿ ಶೇಕಡಾ ೧೫ರಷ್ಟು ಕಡಿಮೆಗೊಳಿಸಿ, ಇದನ್ನು ಸ್ವಾಯತ್ತ ಸಂಸ್ಥೆಯೊಂದರಿಂದ ಮೌಲ್ಯೀಕರಣಗೊಳಿಸುವ ಮೂಲಕ ಭಾಗ-ಬಿಗೆ ಪಡೆದಿರುವ ಶೇಕಡಾ ೫೦ರಷ್ಟು ಸಾಲದ ಮೊತ್ತವನ್ನು ಅನುದಾನದ ರೂಪದಲ್ಲಿ ಐದು ಸಮಾನ ಕಂತುಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ಪರಿವರ್ತಿಸಲಾಗುವುದು. ಯಾವುದೇ ಒಂದು ನಿರ್ದಿಷ್ಟ ವರ್ಷದಲ್ಲಿ, ವಿತರಣ ಕಂಪೆನಿಯು ಈ ಇಳಿಕೆಯ ಪ್ರಮಾಣವನ್ನು ಸಾಧಿಸಲು ವಿಫಲವಾದಲ್ಲಿ, ಆ ವರ್ಷದ ಕಂತಿನ ಪರಿವರ್ತಿತ ಅನುದಾನವನ್ನು ಶೇಕಡಾ ೧೫ರಷ್ಟರ ಮಟ್ಟಿಗೆ ಕೊರತೆ ಕಂಡುಬಂದ ಪ್ರಮಾಣಕ್ಕೆ ಕಡಿಮೆಗೊಳಿಸಲಾಗುವುದು.
 • ಉತ್ತಮ ಗುಣಮಟ್ಟ ಮತ್ತು ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು, ಮಂಜೂರಾದ ವಿವರವಾದ ಯೋಜನಾ ವರದಿ ಕಾಮಗಾರಿಯನ್ನು ಟರ್ನ್ ಕೀ ಆಧಾರದ ಮೇಲೆ ನಿರ್ವಹಿಸತಕ್ಕದ್ದು

ಪುನಾರಚಿತ ತ್ವರಿತ ವಿದ್ಯುತ್ ಅಭಿವೃದ್ಧಿ ಸುಧಾರಣಾ ಯೋಜನೆಯ ಪ್ರಧಾನ ಅಂಶಗಳು :

 • ವಾಣಿಜ್ಯಾತ್ಮಕ ಕಾರ್ಯಸಾಧ್ಯತೆಯನ್ನು ಪಡೆಯುವುದು
 • ಅಡಚಣೆ ಮತ್ತು ನಿಲುಗಡೆಯನ್ನು ತಪ್ಪಿಸುವುದು
 • ಗ್ರಾಹಕರನ್ನು ಹೆಚ್ಚು ತೃಪ್ತರನ್ನಾಗಿಸುವುದು

ಕಾಮಗಾರಿಯ ಗುರಿ:

 • ೬೬ ಅಥವಾ ೩೩ ಕೆವಿ ಮಾರ್ಗ: ಹೊಸ ಫೀಡರ್/ಫೀಡರುಗಳನ್ನು ಪ್ರತ್ಯೇಕಗೊಳಿಸುವುದು/ಉನ್ನತೀಕರಣ
 • ೬೬/೧೧ ಅಥವಾ ೩೩/೧೧ ಕೆವಿ ಉಪ ಕೇಂದ್ರ: ಹೊಸತು/ಉನ್ನತೀಕರಣ
 • ೧೧ ಕೆವಿ ಮಾರ್ಗ: ಹೊಸ ಫೀಡರ್/ಫೀಡರನ್ನು ಪ್ರತ್ಯೇಕಿಸುವುದು
 • ವಿತರಣ ಪರಿವರ್ತಕ: ಸಾಮರ್ಥ್ಯ ಉನ್ನತೀಕರಣ/ಹೊಸ ಪರಿವರ್ತಕ
 • ಎಲ್.ಟಿ.ಮಾರ್ಗ: ಹೊಸ ಫೀಡರ್/ಫೀಡರನ್ನು ಪ್ರತ್ಯೇಕಿಸುವುದು
 • ಏರಿಯಲ್ ಬಂಚ್ ಕೇಬಲ್
 • ಗ್ರಾಹಕ ಸ್ಥಾಪನಕ್ಕೆ ಮಾಪಕ ಅಳವಡಿಕೆ
 • ಸಂಚಾರಿ ಉಪಕೇಂದ್ರಗಳು ಮತ್ತು ಇತರೆ

ಭಾಗ -ಬಿ ಗೆ ಪೂರ್ವ ಅವಶ್ಯಕತೆಗಳು:

 • ಪಟ್ಟಣಗಳು/ಯೋಜಿತ ಪ್ರದೇಶಗಳನ್ನು ಆರ್-ಎ.ಪಿ.ಡಿ.ಆರ್.ಪಿ.ಯ ಭಾಗ-ಎ ನಲ್ಲಿ ಒಳಪಡಿಸಿರುವುದು.
 • ಪಟ್ಟಣಗಳು/ಯೋಜಿತ ಪ್ರದೇಶಗಳಲ್ಲಿ ಸಮಗ್ರ ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಪ್ರಮಾಣವು ಶೇಕಡಾ ೧೫ಕ್ಕಿಂತ ಅಧಿಕವಾಗಿರಬೇಕು.
ಇಂಧನ ಸಚಿವಾಲಯವು ಹೊರಡಿಸಿರುವ ಭಾಗ-ಬಿ ಗೆ ಪ್ರಮುಖ ಮಾರ್ಗದರ್ಶಕಗಳು:
ಹೆಚ್ಚಿನ ವಿವರಗಳಿಗಾಗಿ www.apdrp.gov.in ನ್ನು ಪರಿಶೀಲಿಸಿ.
 • ಆಯಾ ಸಂಸ್ಥೆಗಳು, ಇಡೀ ಸಂಸ್ಥೆಯ ಮಟ್ಟದಲ್ಲಿ, ಭಾಗ-ಎ ಯೋಜನೆಯು ಪೂರ್ಣಗೊಂಡ ವರ್ಷದಿಂದ, ವರ್ಷದಿಂದ ವರ್ಷಕ್ಕೆ ಪ್ರತಿ ವರ್ಷ ಸಮಗ್ರ ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಪ್ರಮಾಣವನ್ನು ಇಳಿತಗೊಳಿಸುವ ಕಾರ್ಯಸಾಧನೆ ಮಾಡತಕ್ಕದ್ದು.
 • ಶೇಕಡಾ ೩೦ಕ್ಕಿಂತ ಹೆಚ್ಚಿನ ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಹೊಂದಿರುವ ಸಂಸ್ಥೆಗಳು ಪ್ರತಿ ವರ್ಷ ಶೇಕಡಾ ೩ ರಷ್ಟು ಇಳಿತಗೊಳಿಸತಕ್ಕದ್ದು.
 • ಶೇಕಡಾ ೩೦ಕ್ಕಿಂತ ಕಡಿಮೆ ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಹೊಂದಿರುವ ಸಂಸ್ಥೆಗಳು ಪ್ರತಿ ವರ್ಷ ಶೇಕಡಾ ೧.೫ ರಷ್ಟು ಇಳಿತಗೊಳಿಸತಕ್ಕದ್ದು.
 • ಭಾಗ-ಬಿ ಯೋಜನೆಯನ್ನು, ಮಂಜೂರಾದ ದಿನಾಂಕದಿಂದ ಮೂರು ವರ್ಷಗಳೊಳಗೆ ಪೂರ್ಣಗೊಳಿಸತಕ್ಕದ್ದು.
 • ಎಲ್ಲಾ ಉದ್ದೇಶಗಳಿಗಾಗಿ, ಭಾಗ-ಬಿ ಕಾಮಗಾರಿಗಳು ಪ್ರಾರಂಭಗೊಳ್ಳುವ ಮುಂಚೆ, ಆ ಯೋಜಿತ ಪ್ರದೇಶದಲ್ಲಿ ಸ್ವಾಯತ್ತ ಸಂಸ್ಥೆಯೊಂದು ನಡೆಸಿದ ಅಧ್ಯಯನದಿಂದ ಕಂಡುಬಂದ ಮೌಲ್ಯೀಕರಣದ ಪ್ರಕಾರದ ಸಮಗ್ರ ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಪ್ರಮಾಣವನ್ನೇ ಮೂಲ ಪ್ರಮಾಣವೆಂದು ಪರಿಗಣಿಸಲಾಗುವುದು.
 • ಸಂಸ್ಥೆಯು, ಯೋಜಿತ ಪ್ರದೇಶವನ್ನು ರಿಂಗ್ ಫೆನ್ಸಿಂಗ್ ಮೂಲಕ ಗುರುತು ಮಾಡಿ ಖಚಿತಪಡಿಸತಕ್ಕದ್ದು.
 • ಭಾಗ-ಬಿಯನ್ನು ಅನುಷ್ಠಾನಗೊಳಿಸುವ ಮುನ್ನ, ಸಂಸ್ಥೆಯು ಸಮಗ್ರ ತಾಂತ್ರಿಕ ಮತ್ತು ವಾಣಿಜ್ಯ ನಷ್ಟದ ಮೂಲ ಪ್ರಮಾಣವನ್ನು ಗೊತ್ತುಪಡಿಸಿಕೊಂಡಿರತಕ್ಕದ್ದು.
 • ಯೋಜನೆಯ ಹೂಡಿಕೆಯ ಮರುಗಳಿಕೆ ಪ್ರಮಾಣವು ಶೇಕಡಾ ೧೦ಕ್ಕಿಂತ ಕಡಿಮೆ ಇರಬಾರದು.
 • ಯೋಜನೆಯನ್ನು ಸಮಗ್ರ ಟರ್ನ್ ಕೀ ಆಧಾರದ ಮೇಲೆ ನಿರ್ವಹಿಸತಕ್ಕದ್ದು.
ಮಾರ್ಗದರ್ಶಕದ ಪ್ರಕಾರ, ಬೆವಿಕಂಪನಿಯ ೨೪ ಪಟ್ಟಣಗಳಿಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು, ರೂ.೨೯೦.೨೮ಕೋಟಿ ಮೊಬಲಗಿಗೆ ಮಂಜೂರು ಮಾಡಲಾಯಿತು. ಬೆವಿಕಂಪೆನಿಯು ಈ ೨೪ ಪಟ್ಟಣಗಳಿಗೆ ಭಾಗ-ಬಿಯ ಆರ್-ಎ.ಪಿ.ಡಿ.ಆರ್.ಪಿ. ಯೋಜನೆಯ ಕಾಮಗಾರಿಗಾಗಿ ರೂ.೨೯೦.೨೮ಕೋಟಿ ಮೊಬಲಗಿಗೆ (ಮೆ|| ಪಿ.ಎಫ್.ಸಿ, ನವದೆಹಲಿ ಇವರಿಂದ ಮಂಜೂರಾದದ್ದು) ಜಿಲ್ಲಾವಾರು ೭ ಪ್ಯಾಕೇಜುಗಳಲ್ಲಿ ಸಮಗ್ರ ಟರ್ನ್ ಕೀ ಆಧಾರದ ಮೇಲೆ ಪರ್ಯಾವಲೋಚನಾ ಸಮಿತಿ, ಇಂಧನ ಸಚಿವಾಲಯದ ನಿರ್ದೇಶನಗಳ ಪ್ರಕಾರ ಟೆಂಡರನ್ನು ಆಹ್ವಾನಿಸಿತು.
ತದನುಸಾರವಾಗಿ, ಭಾಗ-ಬಿಯ ಆರ್-ಎ.ಪಿ.ಡಿ.ಆರ್.ಪಿ. ಕಾಮಗಾರಿಯ ವಿವರವಾದ ಕಾರ್ಯಯೋಜನಾ ವರದಿಯನ್ನು ನಿಗದಿತ ಹಾಗೂ ಗುರಿ ಹೊಂದಿದ ಸಮಯದೊಳಗೆ ಪಟ್ಟಣವಾರು ಪೂರ್ಣಗೊಳಿಸಬೇಕೆಂದು ವಿತರಿಸಲಾಯಿತು.
೨೪ ತಿಂಗಳುಗಳ ಅವಧಿಗೆ ಮೂರು ಹಂತಗಳಲ್ಲಿ ಕಾಮಗಾರಿಯನ್ನು ನಿರ್ವಹಿಸತಕ್ಕದ್ದು. ವಿವರ ಹೀಗಿದೆ:

ಹಂತ-೧ :

 • ಹೊಸ ೧೧ಕೆವಿ ಮಾರ್ಗ/ ಫೀಡರುಗಳನ್ನು ಪ್ರತ್ಯೇಕಿಸಲು ಸಂಪರ್ಕ ಮಾರ್ಗವನ್ನು ಅಳವಡಿಸುವುದು.
 • ೧೧ಕೆವಿ ಏರಿಯಲ್ ಬಂಚ್ ಕೇಬಲನ್ನು ಒದಗಿಸುವುದು.
 • ೧೧ಕೆವಿ ಫೀಡರುಗಳನ್ನು ಕೊಯಟ್ ವಾಹಕದಿಂದ ಪುನರ್ ವಾಹಕಗೊಳಿಸುವಿಕೆ.
 • ೧೧ಕೆವಿ ಫೀಡರುಗಳನ್ನು ರ್‍ಯಾಬಿಟ್ ವಾಹಕದಿಂದ ಪುನರ್ ವಾಹಕಗೊಳಿಸುವಿಕೆ.
 • ೨೫ ಕೆವಿಎ ಪರಿವರ್ತಕಗಳನ್ನು ೬೩ ಕೆವಿಎ ವಿತರಣಾ ಪರಿವರ್ತಕಗಳಿಂದ ಉನ್ನತೀಕರಿಸುವುದು.
 • ೬೩ ಕೆವಿಎ ಪರಿವರ್ತಕಗಳನ್ನು ೧೦೦ ಕೆವಿಎ ವಿತರಣಾ ಪರಿವರ್ತಕಗಳಿಂದ ಉನ್ನತೀಕರಿಸುವುದು.
 • ೧೦೦ ಕೆವಿಎ ಪರಿವರ್ತಕಗಳನ್ನು ೨೫೦ ಕೆವಿಎ ವಿತರಣಾ ಪರಿವರ್ತಕಗಳಿಂದ ಉನ್ನತೀಕರಿಸುವುದು.
 • ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳನ್ನು ಸ್ಟಾಟಿಕ್ ಮಾಪಕಗಳಿಂದ ಬದಲಾಯಿಸುವುದು.
 • ಆಟೋ ರೀಕ್ಲೋಸರುಗಳನ್ನು ಅಳವಡಿಸುವುದು.
 • ಸೆಕ್ಷನಲೈಸರುಗಳನ್ನು ಒದಗಿಸುವುದು.

ಹಂತ-೨ :

 • ಹೊಸ ವಿತರಣಾ ಪರಿವರ್ತಕ ಕೇಂದ್ರಗಳ ಸ್ಥಾಪನೆ.
 • ಹೊಸ ಎಲ್.ಟಿ.ಮಾರ್ಗ/ಹೆಚ್ಚುವರಿ ಸರ್ಕ್ಯುಟುಗಳನ್ನು ಅಳವಡಿಸುವುದು.
 • ಎಲ್.ಟಿ.ಮಾರ್ಗಗಳನ್ನು ಪುನರ್ ವಾಹಕಗೊಳಿಸುವುದು.
 • ಎಲ್.ಟಿ.ಏರಿಯಲ್ ಬಂಚ್ ಕೇಬಲನ್ನು ಅಳವಡಿಸುವುದು.

ಹಂತ-೩ :

 • ೧೧ಕೆವಿ, ೫೦hz ೫೦೦ ಕೆವಿಎ ವಿತರಣಾ ಪರಿವರ್ತಕದ ಸಹಿತ ಟ್ರಾಲಿ ಮೌಂಟೆಡ್ ಸಾಮರ್ಥ್ಯದ ಸಣ್ಣ ಉಪಕೇಂದ್ರದ ಸ್ಥಾಪನೆ.
 • ಎಲ್.ಟಿ.ಮಾರ್ಗದಲ್ಲಿ ೨ ತಂತಿಗಳ ಒಂದು ಫೇಸನ್ನು ೫ ತಂತಿಗಳ ೩ ಫೇಸಿಗೆ ಪರಿವರ್ತಿಸುವುದು.
 • ಎಲ್.ಟಿ.ಮಾರ್ಗದಲ್ಲಿ ೩ ತಂತಿಗಳ ಒಂದು ಫೇಸನ್ನು ೫ ತಂತಿಗಳ ೩ ಫೇಸಿಗೆ ಪರಿವರ್ತಿಸುವುದು.
 • ಎಲ್.ಟಿ.ಮಾರ್ಗದಲ್ಲಿ ೪ ತಂತಿಗಳ ಒಂದು ಫೇಸನ್ನು ೫ ತಂತಿಗಳ ೩ ಫೇಸಿಗೆ ಪರಿವರ್ತಿಸುವುದು.
 • ದುರಸ್ತಿ ಹಾಗೂ ನಿರ್ವಹಣಾ ಕೆಲಸಗಳು.

 

 

 

ಇತ್ತೀಚಿನ ನವೀಕರಣ​ : 23-06-2020 05:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080