ಅಭಿಪ್ರಾಯ / ಸಲಹೆಗಳು

ನಡೆಯುತ್ತಿರುವ ಡಿಎಸ್ಎಮ್ ಯೋಜನೆಗಳು

 ವ್ಯಾಟ್‍ಎಲ್.ಇ.ಡಿ ಬಲ್ಬ್ ಹಾಗೂ 20 ವ್ಯಾಟ್‍ಎಲ್.ಇ.ಡಿ. ಟ್ಯೂಬ್‍ಲೈಟ್

bulb

  • ಹೊಸಬೆಳಕು ಯೋಜನೆಯಡಿಯಲ್ಲಿಇನ್‍ಕ್ಯಾಂಡಿಸೆಂಟ್ ಬಲ್ಬ್‍ಗಳನ್ನು 9 ವ್ಯಾಟ್‍ಎಲ್.ಇ.ಡಿ ಬಲ್ಬ್ ಗಳಿಂದಬದಲಾಯಿಸುವುದು.
  • ಹೊಸಬೆಳಕು ಎರಡನೇ ಹಂತಯೋಜನೆಯಡಿಯಲ್ಲಿ ಪ್ಲೂರೊಸೆಂಟ್ ಟ್ಯೂಬ್‍ಲೈಟ್‍ಗಳನ್ನು 20 ವ್ಯಾಟ್‍ಎಲ್.ಇ.ಡಿ. ಟ್ಯೂಬ್‍ಲೈಟ್‍ಗಳಿಂದ ಬದಲಾಯಿಸುವುದು.
  • ಮೆ|| ಎನರ್ಜಿಎಫಿಷಿಎನ್ಸಿ ಸರ್ವೀಸಸ್ ಲಿಮಿಟೆಡ್ (ಇ.ಇ.ಎಸ್.ಎಲ್) ಸಂಸ್ಥೆಯ ಮುಖಾಂತರಕಾರ್ಯಕ್ರಮವನ್ನುಅನುಷ್ಠಾನಗೊಳಿಸಲಾಗಿದೆ

2.“ಸೂರ್ಯರೈತ” ಪ್ರಾಯೋಗಿಕಯೋಜನೆ:

surya

ಕರ್ನಾಟಕ ಸರ್ಕಾರವುಸೆಪ್ಟಂಬರ್-2014ರಲ್ಲಿರೈತರಕಲ್ಯಾಣಕ್ಕಾಗಿ “ಸೂರ್ಯರೈತ”É ಎಂಬ ವಿನೂತನಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯಡಿಯಲ್ಲಿರೈತರಜಮೀನಿನಲ್ಲಿ ಸೌರ ಫಲಕಗಳನ್ನು ಅಳವಡಿಸಿ, ಸೌರಶಕ್ತಿಯಿಂದ ಉತ್ಪಾದಿಸಿದ ವಿದ್ಯುತ್ತನ್ನು ನೇರವಾಗಿ ಕೃಷಿ ಪಂಪ್‍ಸೆಟ್‍ಗಳಿಗೆ ಬಳಸಿ, ಹೆಚ್ಚುವರಿಯಾಗಿಉತ್ಪಾದಿಸಿದ ವಿದ್ಯುತ್ತನ್ನು ಬೆವಿಕಂನ ವಿದ್ಯುತ್‍ಜಾಲಕ್ಕೆರವಾನಿಸಬಹುದಾಗಿರುತ್ತದೆ ಮತ್ತು ನೆಟ್ ಮೀಟರಿಂಗ್‍ಆಧಾರದ ಮೇಲೆ ಹಣವನ್ನು ಗಳಿಸಬಹುದಾಗಿರುತ್ತದೆ.

 

ಈ ಯೋಜನೆಯನ್ನು ಬೆವಿಕಂಯು ಪ್ರಾಯೋಗಿಕವಾಗಿ ಭಾರತದಲ್ಲೇ ಮೊದಲ ಬಾರಿಕನಕಪುರತಾಲ್ಲೂಕಿನ ಹಾರೋಬೆಲೆ 11ಕೆವಿ ಎಫ್-2 ಫೀಡರ್‍ನ 310 ರೈತರ ಪಂಪ್‍ಸೆಟ್‍ಗಳಿಗೆ ಹಮ್ಮಿಕೊಳ್ಳಲಾಗಿದ್ದು, ಹಾಲಿ ಪಂಪ್‍ಸೆಟ್‍ಗಳನ್ನು ಹೆಚ್ಚಿನಕಾರ್ಯಕ್ಷಮತೆಇರುವ ಪಂಪ್‍ಸೆಟ್‍ಗಳಿಗೆ ಬದಲಾಯಿಸಿ ಫೋಟೋವೊಲ್ಟಾಯಿಕ್ ಪ್ಯಾನೆಲ್‍ಗಳನ್ನು ಅಳವಡಿಸಿ, ಉತ್ಪಾದನೆಯಾದ ವಿದ್ಯುತ್ತನ್ನುತಮ್ಮ ವ್ಯವಸಾಯಕ್ಕೆ ಬಳಸಿ, ಹೆಚ್ಚುವರಿ ವಿದ್ಯುತ್‍ನ್ನು ಬೆವಿಕಂನ ಜಾಲಕ್ಕೆ ನೀಡಬಹುದಾಗಿರುತ್ತದೆ. ಈ ರೀತಿಯಾಗಿ ಹೆಚ್ಚುವರಿಯಾಗಿರವಾನಿಸಲಾದ ವಿದ್ಯುತ್‍ಗೆ ಕೆ.ಇ.ಆರ್.ಸಿ ಜಕಾತಿಯನ್ವಯ ನೆಟ್ ಮೀಟರಿಂಗ್‍ಆಧಾರದ ಮೇಲೆ ಹಣ ಪಾವತಿ ಮಾಡಲಾಗುತ್ತದೆ.ಇದರಿಂದರೈತರಿಗೆ ಬೆಳೆಗಳಿಂದ ಬರುವಆದಾಯದೊಂದಿಗೆ ಹೆಚ್ಚುವರಿಆದಾಯ ಪಡೆಯಬಹುದಾಗಿರುತ್ತದೆ.

 

ಮೊದಲನೆ ಹಂತದ250 ಸೌರಶಕ್ತಿ ಪಂಪ್‍ಸೆಟ್‍ಗಳು 30ನೇ ಸೆಪ್ಟೆಂಬರ್ 2017 ರಅಂತ್ಯಕ್ಕೆಅನುಷ್ಠಾನಗೊಳಿಸಿದ್ದು, ಎರಡನೇ ಹಂತದ60 ಸೌರಶಕ್ತಿ ಪಂಪ್‍ಸೆಟ್‍ಗಳ ಕಾರ್ಯವು ಪ್ರಗತಿಯಲ್ಲಿರುತ್ತದೆ.

 

3.ಸೌರಶಕ್ತಿಜಾಲರಹಿತ ಪಂಪ್‍ಸೆಟ್‍ಯೋಜನೆ:

 

ಕರ್ನಾಟಕ ಸರ್ಕಾರವುಕರ್ನಾಟಕ ನವೀಕರಿಸಬಹುದಾದಇಂಧನಇಲಾಖೆಯ ವತಿಯಿಂದಸೌರಶಕ್ತಿಜಾಲ ರಹಿತ ಪಂಪ್‍ಸೆಟ್ ಅಳವಡಿಸುವ ಯೋಜನೆಯನ್ನುರೈತರುಗಳ ಕಲ್ಯಾಣಕ್ಕಾಗಿಹಮ್ಮಿಕೊಂಡಿದೆ.
ಕರ್ನಾಟಕ ಸರ್ಕಾರವು ಬೆವಿಕಂಗೆ 234, 410 ಮತ್ತು 175 ಸಂಖ್ಯೆಯ ಸೌರಶಕ್ತಿ ಪಂಪ್‍ಸೆಟ್‍ಗಳನ್ನು ಮೊದಲನೇ, ಎರಡನೇ ಮತ್ತು ಮೂರನೇ ಹಂತದಲ್ಲಿ ಹಂಚಿಕೆಮಾಡಲಾಗಿದೆ.ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ.

 

ಈ ಯೋಜನೆಯಡಿ ಫಲಾನುಭವಿಗಳು ಸಂಬಂಧಪಟ್ಟ ಉಪವಿಭಾಗಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.ಫಲಾನುಭವಿಗಿರಬೇಕಾದಅರ್ಹತಾ ಮಾನದಂಡಗಳು;ಪಂಪ್‍ಸೆಟ್‍ನ ಮೋಟಾರ್ ಸಾಮಾಥ್ರ್ಯವು 5 ಹೆಚ್.ಪಿ.ಮತ್ತು ನೀರಿನ ಆಳ ಗರಿಷ್ಠ 70ಮೀ ಅಥವಾ 233 ಅಡಿ ಒಳಗೊಂಡಿರಬೇಕು.

 

ಸಾಮಾನ್ಯ ವರ್ಗಕ್ಕೆ ಸೇರಿದ ಫಲಾನುಭವಿಯುಯೋಜನಾವಂತಿಗೆರೂ.ಒಂದು ಲಕ್ಷ ಮೌಲ್ಯದಡಿಡಿಯನ್ನು ವ್ಯವಸ್ಥಾಪಕ ನಿರ್ದೇಶಕರು, ಕೆಆರ್‍ಇಡಿಎಲ್ (ಒಚಿಟಿಚಿgiಟಿg ಆiಡಿeಛಿಣoಡಿ, ಏಖಇಆಐ) ರವರ ಹೆಸರಿಗೆಸಲ್ಲಿಸಬೇಕಾಗಿರುತ್ತದೆ.

 

4.“ವಿದ್ಯುತ್‍ಜಾಗೃತಿಯೋಜನೆ”:

 

 

ಬೆವಿಕಂಯು ಮೆ|| ದಿ ಎನರ್ಜಿರಿಸೋರ್ಸಸ್‍ಇನ್ಸ್ಟಿಟ್ಯೂಟ್ (ಟೆರಿ) ಸಹಭಾಗಿತ್ವದೊಂದಿಗೆ “ವಿದ್ಯುತ್‍ಜಾಗೃತಿಯೋಜನೆ” ಎಂಬ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಇಂಧನ ಉಳಿತಾಯವನ್ನು ಸಂವೇದನೆಗೊಳಿಸುವ ಮತ್ತುಉತ್ತೇಜಿಸುವ ಬಗ್ಗೆ ಬೆಂಗಳೂರಿನ 100 ಶಾಲಾ/ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು 2014-16 ರವರೆಗೆ ಹಮ್ಮಿಕೊಳ್ಳಲಾಗಿರುತ್ತದೆ.ಈ ಕಾರ್ಯಕ್ರಮದಡಿಯಲ್ಲಿ ಸುಮಾರು 50,000 ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ, ಎರಡು ವರ್ಷಗಳಲ್ಲಿ (2014-2016) 100 ಶಾಲಾ/ಕಾಲೇಜುಗಳಲ್ಲಿ ಮತ್ತುವಿಧ್ಯಾರ್ಥಿಗಳ ಮನೆಗಳಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆಗೊಳಿಸಲು ಅರಿವನ್ನು ನೀಡಲಾಗಿರುತ್ತದೆ.

 

5.“ವಿದ್ಯುತ್‍ರಕ್ಷಕ”:

 

ಮೆ|| ಟಿ.ಐ.ಡಿ.ಇ,ಸರ್ಕಾರೇತರ ಸಂಸ್ಥೆಯುವಿದ್ಯುತ್‍ರಕ್ಷಕ ಎಂಬ ವಿದ್ಯುತ್ ಉಳಿತಾಯ/ಬೇಡಿಕೆತಕ್ಕಂತೆ ನಿರ್ವಹಣೆಯೋಜನೆಯನ್ನುಹಮ್ಮಿಕೊಂಡಿದೆ. ವಿದ್ಯುತ್‍ಉಳಿತಾಯ ಮತ್ತು ವಿದ್ಯುತ್ ಸಂರಕ್ಷಣೆಯ ಹವ್ಯಾಸವನ್ನುಗ್ರಾಹಕರುದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಕಾರ್ಯಕ್ರಮದ ಮುಖಾಂತರ ಪ್ರಯತ್ನಿಸಲಾಗುತ್ತಿದೆ. ಗ್ರಾಹಕರುತಮ್ಮ ವಿದ್ಯುತ್ ಬಳಕೆ ದತ್ತಾಂಶವನ್ನು ವಿಶ್ಲೇಷಿಸುವುದರ ಮತ್ತುಮೆ|| ಟಿ.ಐ.ಡಿ.ಇರವರುಒದಗಿಸುವವಾರ್ಷಿಕ ವರದಿಗಳಮೂಲಕ ತಮ್ಮದೇಆದ ವಿದ್ಯುತ್ ಬಳಕೆಯ ಮಾದರಿಗಳ ಬಗ್ಗೆ ಅರಿವನ್ನು ಮೂಡಿಸಲು ಪ್ರಯತ್ನಿಸುತ್ತದೆ.ಇದಲ್ಲದೆಗ್ರಾಹಕರಿಗೆ ನವೀಕರಿಸಬಹುದಾದಇಂಧನದಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿಒದಗಿಸುತ್ತದೆ.

 

ವಿದ್ಯುತ್‍ರಕ್ಷಕ(ವಿ.ಆರ್.) ಕಾರ್ಯಕ್ರಮವುವಿ.ಆರ್.-1 (2016) ಮತ್ತು ವಿ.ಆರ್.-2 (2017) ಎಂಬ ಎರಡುಹಂತಗಳಲ್ಲಿ ನಡೆಯುತ್ತಿದ್ದು, ಮಲ್ಲೇಶ್ವರಂ ಮತ್ತುಆರ್.ಬಿ.ಡಿ ಲೇಔಟ್‍ಗಳಲ್ಲಿ 500 ಮನೆಗಳಿಗೆ ಅಗತ್ಯವಾದದತ್ತಾಂಶವನ್ನು ಸಂಗ್ರಹಿಸಿ 2016 ರಲ್ಲಿ ಪ್ರಾಯೋಗಿಕಅಧ್ಯಯನ (ವಿ.ಆರ್. &ವಿ.ಆರ್.-1) ಕೈಗೊಂಡಿದೆ. ವಿ.ಆರ್.-1 ಸರ್ವೆಗಳಲ್ಲಿ 17% ವಿದ್ಯುತ್ ಉಳಿತಾಯವಾಗಿರುವುದನ್ನು ತಿಳಿಸಿದೆ.

 

6.ಸ್ವಯಂಚಾಲಿತಡಿ.ಎಸ್.ಎಂ ಪ್ರಾಯೋಗಿಕಯೋಜನೆ:

 

ಬೆವಿಕಂಯು ಮೆ|| ಇನ್ನೋವರಿ ಮತ್ತು ಮೆ|| ಯು.ಎಸ್.ಎ.ಐ.ಡಿ ಕಂಪನಿಗಳ ಸಹಭಾಗಿತ್ವದೊಂದಿಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿಇಂಟರ್ಯಾಕ್ಟಿವ್‍ಎನರ್ಜಿ ಫ್ಲಾಟ್‍ಫಾರಂ ಮೂಲಕ 5 ಮೆ.ವ್ಯಾ ಹೊರೆಯನ್ನುಅಧಿಕ ಬೇಡಿಕೆ ಸಮಯದಲ್ಲಿಕಡಿಮೆ ಮಾಡಲು ಸ್ವಯಂಚಾಲಿತಡಿ,ಎಸ್.ಎಂ ಪ್ರಾಯೋಗಿಕಯೋಜನೆಯನ್ನು ಹಮ್ಮಿಕೊಂಡಿದೆ.

 

7.“ಸೋಲಾರ್ ಡಿ.ಸಿ ಇನ್ವರ್ಟರ್ ವ್ಯವಸ್ಥೆ À” ಪ್ರಾಯೋಗಿಕಯೋಜನೆ:

solar

  • ಬೆವಿಕಂಯು ಮೆ||.ಐ.ಐ.ಟಿ.-ಮದ್ರಾಸ್, ಚೆನ್ನೈರವರ ಸಹಭಾಗಿತ್ವದೊಂದಿಗೆರಾಮನಗರಜಿಲ್ಲೆಯ, ಮಾಗಡಿತಾಲ್ಲೂಕಿನ ಬೆಳಗವಾಡಿ ಗ್ರಾಮದ 215 ಮನೆಗಳಿಗೆ ಗ್ರಿಡ್ ಸಂಪರ್ಕಿತ “ಸೋಲಾರ್ ಡಿ.ಸಿ ಇನ್ವರ್ಟರ್‍ರಹಿತ ವ್ಯವಸ್ಥೆ”ಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ.
  • ಸೋಲಾರ್ ಡಿ.ಸಿ ಇನ್ವರ್ಟರ್‍ರಹಿತ ವ್ಯವಸ್ಥೆಯು ಸೌರಶಕ್ತಿಯಿಂದಉತ್ಪಾದನೆಯಾದ ಡಿ.ಸಿ. ವಿದ್ಯುತ್, ಬೆವಿಕಂನ ಎ.ಸಿ ವಿದ್ಯುತ್, ಬ್ಯಾಟರಿಯ ಡಿ.ಸಿ. ವಿದ್ಯುತ್ ಗಳನ್ನು ಸಂಯೋಜಿಸಿ ಪ್ರತ್ಯೇಕ ಸರ್ಕೂಟ್ ಗೆ 48 ವೋಲ್ಟ್ ಡಿ.ಸಿ ವಿದ್ಯುತ್‍ನ್ನು ನೀಡುತ್ತದೆ.
  • ಈ ಯೋಜನೆಯ ಪ್ರತಿ ಫಲಾನುಭವಿಗೆಒಂದು ಬಿ.ಎಲ್.ಡಿ.ಸಿ ಫ್ಯಾನ್, ಒಂದು ಡಿ.ಸಿ ಟ್ಯೂಬ್‍ಲೈಟ್, ಎರಡುಎಲ್.ಇ.ಡಿ ಬಲ್ಬ್‍ಗಳು ಮತ್ತುಎರಡು ಡಿ.ಸಿ. ಪಾಯಿಂಟ್‍ಗಳು- ಒಂದು ಮೊಬೈಲ್‍ಚಾರ್ಜರ್‍ಗೆ ಮತ್ತುಒಂದು ಟಿ.ವಿ ಪಾಯಿಂಟ್‍ಗೆ ಹಾಗೂ ಟ್ಯೂಬ್‍ಲೈಟ್ ಮತ್ತು ಫ್ಯಾನ್‍ಗಳನ್ನು ನಿಯಂತ್ರಿಸಲುಒಂದುರಿಮೋಟ್‍ಅನ್ನುಒದಗಿಸಲಾಗಿದೆ.

8.ಇಂಟಲಿಜೆಂಟ್ ಲೈಟಿಂಗ್ ಮ್ಯಾನೇಜ್‍ಮೆಂಟ್ ಸಿಸ್ಟಮ್ (ಐ.ಎಲ್.ಎಂ.ಎಸ್)

  • ನಿಗಮ ಕಛೇರಿಯ ಯೋಜನೆಗಳು ಶಾಖೆಯಲ್ಲಿ ಪ್ರಾಯೋಗಿಕಯೋಜನೆಯಾಗಿ ಅನುಷ್ಠಾನಗೊಳಿಸಲಾಯಿತು.
  • “ಇಂಟಲಿಜೆಂಟ್ ಲೈಟಿಂಗ್ ಮ್ಯಾನೇಜ್‍ಮೆಂಟ್ ಸಿಸ್ಟಮ್” (ಐ.ಎಲ್.ಎಂ.ಎಸ್) ಯು ಚಲನೆ ಮತ್ತುದಿನದ ಬೆಳಕಿನ ಸಂವೇದನೆಯ ಮೂಲಕ ಸ್ವಯಂಚಾಲಿತವಾಗಿಕಛೇರಿಯ ಲೈಟಿಂಗ್ ವ್ಯವಸ್ಥೆಯನ್ನು ‘ಆನ್’ ಮತ್ತು ‘ಆಫ್’ ಮಾಡುತ್ತದೆ.
  • ಇದರಿಂದ 30%-50% ವಿದ್ಯುತ್ ಉಳಿತಾಯವಾಗುತ್ತದೆ
  • ಶೂನ್ಯ ಮಾನವ ಶಕ್ತಿ ವೆಚ್ಚ ಮತ್ತುವಿದ್ಯುತ್‍ಉಪಕರಣಗಳ ಬಾಳಿಕೆ ಹೆಚ್ಚುತ್ತದೆ

9.ಬಿ.ಇ.ಇ. 5 ಸ್ಟಾರ್‍ರೇಟೆಡ್ ಸೀಲಿಂಗ್ ಫ್ಯಾನ್:

fan

  • ಪವನ ಯೋಜನೆಯಡಿಕನ್‍ವೆನ್‍ಷನಲ್ ಸೀಲಿಂಗ್ ಫ್ಯಾನ್‍ಗಳ ಬದಲಾಗಿ ಬಿ.ಇ.ಇ. 5 ಸ್ಟಾರ್‍ರೇಟೆಡ್ ಸೀಲಿಂಗ್ ಫ್ಯಾನ್‍ಗಳ ಬಳಕೆಯನ್ನು ಉತ್ತೇಜಿಸಲಾಗಿದೆ.
  • ಮೆ|| ಎನರ್ಜಿಎಫಿಷಿಎನ್ಸಿ ಸರ್ವೀಸಸ್ ಲಿಮಿಟೆಡ್ (ಇ.ಇ.ಎಸ್.ಎಲ್) ಸಂಸ್ಥೆಯ ಮುಖಾಂತರಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ

10.ಸೋಲಾರ್ ವಾಟರ್ ಹೀಟರ್:

  • 1200 ಚ.ಅ. ಹಾಗೂ ಅದಕ್ಕಿಂತ ಹೆಚ್ಚಿನ ಸೈಟು ಅಳತೆಯಲ್ಲಿ ಕಟ್ಟುವ ಕಟ್ಟಡಗಳಿಗೆ ಸೋಲಾರ್ ವಾಟರ್ ಹೀಟರ್‍ನ್ನುಕಡ್ಡಾಯವಾಗಿಅಳವಡಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರವುಆದೇಶ ಸಂಖ್ಯೆ:ಇಎನ್ 396/ಎನ್.ಸಿ.ಇ2006 ದಿನಾಂಕ:13.11.2007 ರಂದು ಹೊರಡಿಸಿದೆ.
  • ಮೇಲಿನ ಆದೇಶದನ್ವಯಎಲ್ಲಾಶಾಖಾಧಿಕಾರಿಗಳಿಗೆ ಸೋಲಾರ್ ವಾಟರ್ ಹೀಟರ್‍ಗಳ ಬಳಕೆಯ ಬಗ್ಗೆ ಗ್ರಾಹಕರಿಗೆಜಾಗೃತಿ ಮೂಡಿಸಬೇಕೆಂದು ನಿರ್ದೇಶನ ನೀಡಲಾಗಿದೆ ಹಾಗೂ ಸೋಲಾರ್ ವಾಟರ್ ಹೀಟರ್‍ಗಳನ್ನು ಕಡ್ಡಾಯವಾಗಿ ಅಳವಡಿಸಲು ಸುತ್ತೋಲೆಯನ್ನು ಹೊರಡಿಸಲಾಗಿದೆ.
  • ಕರ್ನಾಟಕಗೆಜೆಟ್ ದಿನಾಂಕ:22.07.2010ರಲ್ಲಿಅಧಿಸೂಚನೆ ಸಂಖ್ಯೆ:ಕೆ.ಇ.ಆರ್.ಸಿ/ಸಿ.ಒ.ಎಸ್/ಡಿ/07/10 ದಿನಾಂಕ:01.07.2010 ಅನ್ನು ಪ್ರಕಟಿಸಲಾಗಿದೆ.
  • ಸೋಲಾರ್ ವಾಟರ್ ಹೀಟರ್‍ನ್ನು ಅಳವಡಿಸಿಕೊಂಡಲ್ಲಿ ಪ್ರತಿ ವಾಸದ ಮನೆಗಳಿಗೆ ಒಂದುಯೂನಿಟ್‍ಗೆ 50 ಪೈಸೆ ಹಾಗೂ ಗರಿಷ್ಠ ರೂ.50/- ರಿಯಾಯಿತಿದೊರೆಯುತ್ತದೆ.ವಸತಿ ಸಂಕೀರ್ಣಗಳು/ಗುಂಪು ಮನೆಗಳು ಇರುವೆಡೆ ಸೋಲಾರ್‍ರಿಬೆಟ್ ನೀಡಲು ಪ್ರತಿಡ್ವೆಲ್ಲಿಂಗ್‍ಯೂನಿಟ್‍ಗೆ 100 ಲೀ ಸಾಮಥ್ರ್ಯವಿರಬೇಕೆಂದು ನಿಗದಿಪಡಿಸಲಾಗಿದೆ.
  • ಜನಸಂಪರ್ಕ ಸಭೆ, ಗ್ರಾಹಕರ ಸಂವಾದಇತ್ಯಾದಿ ಸಭೆಗಳ ಮೂಲಕ ಸಾರ್ವಜನಿಕರಿಗೆಸೋಲಾರ್ ವಾಟರ್ ಹೀಟರ್‍ಗಳನ್ನು ಅಳವಡಿಸುವ ಬಗ್ಗೆಅರಿವು ಮೂಡಿಸಲಾಗಿದೆ. ಮಾಪಕಓದುಗರು ಹಾಗೂ ಲೈನ್‍ಮೆನ್‍ಗಳುಗ್ರಾಹಕರ ದೂರುಗಳಿಗೆ ಭೇಟಿನೀಡಿದಾಗ ಹಾಗೂ ಮೀಟರ್‍ರೀಡಿಂಗ್ ತೆಗೆದುಕೊಳ್ಳುವಾಗ ಸೋಲಾರ್ ವಾಟರ್ ಹೀಟರ್ ಅಳವಡಿಸುವುದರಿಂದ ಆಗುವ ಪ್ರಯೋಜನಗಳ ಹಾಗೂ ವಿದ್ಯುತ್ ಉಳಿತಾಯದ ಬಗ್ಗೆ ವಿವರಿಸಲು ಸೂಚಿಸಲಾಗಿದೆ
  • ಕರ್ನಾಟಕ ಸರ್ಕಾರವು ಹೊರಡಿಸಿರುವ ಹೊಸ ಕಟ್ಟಡಗಳಿಗೆ ಸೋಲಾರ್ ವಾಟರ್ ಹೀಟರ್‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ಆದೇಶವನ್ನು ಪಾಲಿಸಬೇಕೆಂದು ಬೆವಿಕಂನ ಎಲ್ಲಾ ಶಾಖಾಧಿಕಾರಿಗಳಿಗೆನಿರ್ದೇಶನವನ್ನು ನೀಡಲಾಗಿದೆ.

11.ಸೋಲಾರ್‍ರೂಫ್‍ಟಾಫ್ ಪಿವಿ ಯೋಜನೆ(ಎಸ್ಆರ್ ಟಿಪಿ ವಿ)

solar panel

ಕರ್ನಾಟಕ ಸರ್ಕಾರವುಗೃಹಬಳಕೆ, ವಾಣಿಜ್ಯ, ಶಿಕ್ಷಣ ಸಂಸ್ಥೆ, ಕೈಗಾರಿಕೋದ್ಯಮಗ್ರಾಹಕರುಜಾಲ ಸಂಪರ್ಕಿತ ಸೌರಶಕ್ತಿ ಮೇಲ್ಛಾವಣಿ ಪಿವಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೋಲಾರ್ ನೀತಿಯನ್ನುಘೋಷಿಸಿದೆ.

 

ಸೌರಶಕ್ತಿ ಪಿವಿ ಘಟಕ ವ್ಯವಸ್ಥೆಯನ್ನು ಅಳವಡಿಸುವುದರಿಂದಾಗುವ ಉಪಯೋಗಗಳು:

  • ಸೌರಶಕ್ತಿಉತ್ಪಾದನೆಯು ಪರಿಸರ ಸ್ನೇಹಿಯಾಗಿದೆ
  • ಸ್ವಂತ ವಿದ್ಯುತ್‍ನ್ನುಉತ್ದಾದನೆ ಮಾಡಬಹುದಾಗಿದೆ
  • ಉತ್ಪಾದಿಸಿದ ಸೌರ ವಿದ್ಯುತ್‍ನ್ನು ಬಳಸಿ, ಉಳಿದ ನಂತರ ಬೆವಿಕಂ ಜಾಲಕ್ಕೆರವಾನಿಸುವುದರಿಂದ ಹಣವನ್ನು ಗಳಿಸಬಹುದಾಗಿದೆ

ಹೆಚ್ಚಿನ ಮಾಹಿತಿಗಾಗಿ ಬೆವಿಕಂ ಅಂತರ್ಜಾಲದ ಹೋಮ್ ಪೇಜ್ ನಲ್ಲಿರುವ “ಸೋಲಾರ್‍ರೂಫ್‍ಟಾಪ್” ಅನ್ನು ವೀಕ್ಷಿಸಿ

 

12. ಕೆಪಾಸಿಟಿ ಬಿಲ್ಡಿಂಗ್‍ಕಾರ್ಯಕ್ರಮ:

 

ಬ್ಯೂರೊಆಫ್‍ಎನರ್ಜಿಎಫಿಷಿಯೆನ್ಸಿ ಸಂಸ್ಥೆಯು ಕೆಪಾಸಿಟಿ ಬಿಲ್ಡಿಂಗ್‍ಕಾರ್ಯಕ್ರಮವನ್ನು 34 ಯುಟಿಲಿಟಿಗಳಲ್ಲಿ ಟ್ರೈನಿಂಗ್‍ಆಫ್‍ಟೈನರ್ಸ್‍ಕಾರ್ಯಕ್ರಮವನ್ನು 2014-15 ರಲ್ಲಿತರಬೇತಿಯನ್ನು ನೀಡಿದ್ದರು.

 

ಎರಡನೇ ಹಂತದ ಬ್ಯೂರೊಆಫ್‍ಎನರ್ಜಿಎಫಿಷಿಯೆನ್ಸಿ ಸಂಸ್ಥೆಯು ಕೆಪಾಸಿಟಿ ಬಿಲ್ಡಿಂಗ್‍ಕಾರ್ಯಕ್ರಮವನ್ನು ವೃತ್ತ ಕಛೇರಿಗಳಲ್ಲಿನ ಅಧಿಕಾರಿಗಳಿಗೆ ಬೇಡಿಕೆಗೆತಕ್ಕಂತೆ ನಿರ್ವಹಣೆಯ ವಿದ್ಯುತ್‍ದಕ್ಷತೆಯ ಬಗ್ಗೆ ತರಬೇತಿಯನ್ನು ಉದ್ದೇಶಿಸಿತು.

 

ಬೆವಿಕಂನಲ್ಲಿ 04 ತರಬೇತಿ ಕಾರ್ಯಕ್ರಮಗಳಲ್ಲಿ ವೃತ್ತಕಛೇರಿಯಲ್ಲಿರುವ ಅಧಿಕಾರಿಗಳಿಗೆ ಬೇಡಿಕೆಗೆತಕ್ಕಂತೆ ನಿರ್ವಹಣೆಯ ವಿದ್ಯುತ್‍ದಕ್ಷತೆಯ ಬಗ್ಗೆ ಮೆ||ಟೆರಿ ಸಂಸ್ಥೆಯು ಜನವರಿ-2018 ಮತ್ತು ಫೆಬ್ರವರಿ-2018 ರಲ್ಲಿತರಬೇತಿಯನ್ನು ನೀಡಿತು.

 

13.ಅರ್ಥ್ ಹವರ್:

 

ಬೆವಿಕಂ ಅಧಿಕಾರಿಗಳು/ನೌಕರರು ಮತ್ತು ಸಾರ್ವಜನಿಕರು ಮನೆಗಳಲ್ಲಿ ಅಗತ್ಯವಿಲ್ಲದ ವಿದ್ಯುತ್ ದೀಪಗಳನ್ನು ಆರಿಸಿ ಇಚಿಡಿಣh ಊouಡಿ-2018ನ್ನು ಮಾರ್ಚ್ ತಿಂಗಳಿನ 24ನೇ ದಿನಾಂಕದಂದುಆಚರಿಸಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-05-2020 02:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080