Sl No |
Application number |
Applicant Name |
Information sought |
Current status |
0
1
1 |
DGM(RTI)/F-9(24)/11.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮವು ತನ್ನ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಟೆಂಡರ್ ಗೆ ಮಾತ್ರ ಕರ್ನಾಟಕ ಪಾರದರ್ಶಕ ಟೆಂಡರ್ ಪ್ರೋಸಿಜರ್ಸ್ (ಕೆ.ಟಿ.ಟಿ.ಪಿ) ಆಕ್ಟ್ ಬಳಕೆ ಮಾಡುತ್ತಿಲ್ಲವೆಂಬ ಆರೋಪ ಇದೆ, ಈ ಬಗೆಗೆ ನಿಗಮದ ಸ್ಪಷ್ಟನೆ ಏನಿದೆ.
2. ನಿಗಮದಲ್ಲಿ ಈ ಹಿಂದೆ ಇದ್ದ 44/45 ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಗಳ ಸಂಖ್ಯೆಯನ್ನು ಯಾವ ಆಧಾರದ ಮೇರೆಗೆ ಈ ಬಾರಿಯ 28.3.2022 ರ ಟೆಂಡರ್ ನಲ್ಲಿ ಹೆಚ್ಚಳ ಮಾಡಿದ್ದಿರಿ. ಈ ಹೆಚ್ಚುವರಿ ದುರಸ್ತಿ ಕೇಂದ್ರಗಳನ್ನು ಯಾವ ಆಧಾರದ ಮೇರೆಗೆ ಸ್ಥಳ ಹಾಗೂ ಜಾತಿವಾರು ಮೀಸಲಾತಿ ನಿರ್ಧಾರ ಮಾಡಿದ್ದೀರಿ.
3. ಬೆಸ್ಕಾಂ ನಿಗಮದ ಇತರೇ ಯೊಜನೆಗಳ ಅನುಷ್ಟಾನಕ್ಕೆ ಕೆ.ಟಿ.ಟಿ.ಪಿ. ಆಕ್ಟ್ ಮತ್ತಿತರೇ ಕಾರಣ ನಮೂದಿಸಿ ಡಿವಿಜನ್ ಗಳಲ್ಲಿ/ಸರ್ಕಲ್ ಗಳಲ್ಲಿ ಕರೆಯಬಹುದಾದ ಟೆಂಡರ್ ಗಳನ್ನು ಕೇಂದ್ರ ಕಚೇರಿಗೆ ವರ್ಗಾಯಿಸಿಕೊಳ್ಳುತ್ತೀರಿ. ಈಗ ಮಾತ್ರ ಸಬ್ ಡಿವಿಜನ್ ಗಳಲ್ಲಿದ್ದ ದುರಸ್ತಿ ಕೇಂದ್ರಗಳು ಹೋಬಳಿ ಹೋಬಳಿಗಳಿಗೆ ಸಂತೆ ತೆರೆದಂತೆ ತೆರೆಯಲು ಕಾರಣ ಏನು.
ಈ ವಿವರಗಳು ನಿಗಮದಲ್ಲಿ ನಡೆಯುತ್ತಿರುವ ಹತ್ತು ಹಲವಾರು ಲೋಪಗಳನ್ನು ಘನ ನ್ಯಾಯಾಲಯದ ಮುಂದೆ ತರುವ ಉದ್ದೇಶದಿಂದ ಕೇಳಲಾಗುತ್ತಿದ್ದು, ದಯಮಾಡಿ ವಿವರಗಳನ್ನು ನೀಡಲು ಕೋರಿದೆ. |
Assigned to PIODGM(RTI&KI) |
2
2 |
DGM(RTI)/F-9(23)/11.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಲ್ಲಿ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳಿಗೆ ದುರಸ್ತಿ ಟೆಂಡರ್ ನಲ್ಲಿ ಕಳೆದ 2016-17 ನೇ ಸಾಲಿನಲ್ಲಿ ಭಾಗವಹಿಸಿದ್ದ ದುರಸ್ತಿದಾರರು ನಿಗಮದ ಶೇಕಡಾವಾರು ದರಗಳನ್ನು ನಮೂದಿಸುವಾಗ ಶೇಕಡಾ 10 ಮೈನೆಸ್ ದರದಿಂದ ಹಿಡಿದು ಶೇಕಡಾ 40% ಮೈನೆಸ್ ದರದ ತನಕ ದರ ನಮೂದಿಸಿದ್ದಾರೆ ಎಂಬ ಮಾಹಿತಿ ಇದೆ. ಈ ರೀತಿಯಲ್ಲಿ ಮೈನೆಸ್ ದರ ನಮೂದಿಸಿ ಕಾರ್ಯ ನಿರ್ವಹಿಸುವವರು ದುರಸ್ತಿ ಕೇಂದ್ರದಲ್ಲಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಈ ಬಗೆಗೆ ನಿಗಮದ ಅಧಿಕಾರಿಗಳು ಯಾಕೆ ಯೋಚಿಸುತ್ತಿಲ್ಲ.
2. ಮೇಲ್ಕಂಡಂತೆ ಹೆಚ್ಚಿನ ಪೈಪೋಟಿಯಲ್ಲಿ ದರಗಳನ್ನು ಮೈನೆಸ್ ನಮೂದಿಸಿ ಕೆಲಸ ಪಡೆದ ದುರಸ್ತಿದಾರರು ಕಾರ್ಯ ನಿರ್ವಹಿಸುವಾಗ ಮಾರುಕಟ್ಟೆಯಲ್ಲಿ ಕಳೆದ ವರ್ಷದಿಂದಲೂ ಇದ್ದ ಸಾಮಗ್ರಿಗಳ ದರಕ್ಕಿಂತ ಅರ್ಧದಷ್ಟೂ ಹಣವನ್ನು ನಿಗಮದಿಂದ ಪಡೆದಿಲ್ಲ ಈ ರೀತಿಯ ವ್ಯವಹಾರ ಹೇಗೆ ಸಾಧ್ಯ.
3. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೆ.ಟಿ.ಟಿ.ಪಿ. ಆಕ್ಟ್ ಪ್ರಕಾರ ಟೆಂಡರ್ ನಡೆಸಿದ್ದೇವೆ. ಮುಂದಿನದಕ್ಕೂ ನಮಗೂ ಸಂಬಂಧವಿಲ್ಲ ಎಂಬುದು ನಿಮ್ಮ ನಿಗಮದ ಅಧಿಕಾರಿಗಳ ಉತ್ತರವಾದರೆ, ನಿಗಮ ರೈತರ ಬೆಳೆ ಹಾನಿಗೊಳಗಾಗುವುದನ್ನು ಜನರ ಜೀವದ ಬಗೆಗೆ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟ ಅಲ್ಲವಾ.
ಈ ಮೇಲ್ಕಂಡ ಅಂಶಗಳ ಬಗೆಗೆ ನಿಗಮದ ಸ್ಪಷ್ಟವಾದ ನಿಲುವನ್ನು ತಿಳಿಸಿ. |
Assigned to PIODGM(RTI&KI) |
3
3 |
DGM(RTI)/F-9(22)/11.04.2022 |
Prasanna Kumar S N |
1. ಬೆಸ್ಕಾಂ ನಿಗಮವು ಪ್ರತಿ ವರ್ಷ ತನ್ನ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸರಣಾ ಮಾರ್ಗಗಳನ್ನು ಪರಿಷ್ಕರಿಸುತ್ತಾ ನೂತನ ವಿಧಾನ ಅಳವಡಿಸುತ್ತಿದೆ ಹೌದಲ್ಲವೇ.
2. ಮೇಲ್ಕಂಡಂತೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ನಗರ ಪ್ರದೇಶಗಳಲ್ಲಿ ನೂತನ ಮಾರ್ಗ ಅಳವಡಿಸುವಾಗ ಉದಾಹರಣೆಗೆ 11 ಕೆ.ವಿ. ಮಾರ್ಗಗಳನ್ನು ರ್ಯಾಬಿಟ್ ತಂತಿಯ ಬದಲಿಗೆ ಹೆಚ್.ಟಿ. ಎ.ಬಿ. ಕೇಬಲ್ ಗೆ ಬದಲಿಸಿದಾಗ ಹಳೆಯ ರ್ಯಾಬಿಟ್ ಮಾರ್ಗ ಯಾವ ಕಾರಣಕ್ಕಾಗಿ ಬಿಚ್ಚಿ ಉಗ್ರಾಣಕ್ಕೆ ಹಿಂತಿರುಗಿಸಿಲ್ಲ. ವಿವರಣೆ ಅಗತ್ಯವಿದೆ ನೀಡಿ.
3. ಮೇಲ್ಕಂಡಂತೆ 11 ಕೆ.ವಿ. ಎ.ಬಿ. ಕೇಬಲ್ ಮಾರ್ಗ ಅಳವಡಿಕೆಯಾದ ಕೆಲವೇ ತಿಂಗಳಿಗೆ ಹೆಚ್.ಟಿ. ಯು.ಜಿ. ಕೇಬಲ್ ಅಳವಡಿಕೆ ಬೆಸ್ಕಾಂ ಮುಂದಾಗಿದೆ. ರ್ಯಾಬಿಟ್ ಮಾರ್ಗಕ್ಕೆ ತಗಲುತ್ತಿದ್ದ ವೆಚ್ಚಕ್ಕೂ, ಎ.ಬಿ. ಕೇಬಲ್ ಮಾರ್ಗದ ಅಳವಡಿಕೆ ವೆಚ್ಚಕ್ಕೂ, ನಂತರ ಬಂದ ಯು.ಜಿ. ಕೇಬಲ್ ಅಳವಡಿಕೆ ವೆಚ್ಚಕ್ಕೂ ಆದ ವೆಚ್ಚ ಎಷ್ಟು. ಈ ವಿವರಗಳನ್ನು ಕಿ.ಮೀ. ಪ್ರಮಾಣದಲ್ಲಿ ವಿವರಿಸಿ.
4.ಈ ವರೆವಿಗೆ ಕಳೆದ 5 ವರ್ಷಗಳಿಂದ ಬೆಸ್ಕಾಂ ನಿಗಮ ಯಾವ ನಗರಗಳಿಗೆ ಎಷ್ಟು ಪ್ರಮಾಣದಲ್ಲಿ ಹೆಚ್.ಟಿ. ಎ.ಬಿ. ಕೇಬಲ್ ಯಾವ ದಿನಾಂಕದಲ್ಲಿ ಅಳವಡಿಸಿದೆ, ನಂತರ ಇದೇ ಪ್ರದೇಶಗಳಿಗೆ ಹೆಚ್.ಟಿ. ಯು.ಜಿ. ಕೇಬಲ್ ಯಾವ ದಿನಾಂಕದಲ್ಲಿ ಅಳವಡಿಸಿದೆ. ಅವುಗಳಿಗೆ ತಗುಲಿರುವ ವೆಚ್ಚ ಎಷ್ಟು. ಈ ವಿವರಗಳು ಸಾರ್ವಜನಿಕರ ಹಿತ ದೃಷ್ಟಿಯಿಂದ ಘನ ಉಚ್ಚ ನ್ಯಾಯಾಲಯದ ಗಮನಕ್ಕೆ ತರುವ ಸಲುವಾಗಿ ತುರ್ತು ಅಗತ್ಯವಿದೆ ದಯಮಾಡಿ ಒದಗಿಸಿ. |
Assigned to PIODGM(RTI&KI) |
4
4 |
DGM(RTI)/F-9(21)/11.04.2022 |
Prasanna Kumar S N |
1. ಗೌರವಾನ್ವಿತ ಬೆಸ್ಕಾಂನ ತಾಂತ್ರಿಕ ನಿರ್ದೇಶಕರೇ, ನಿಗಮವು ತನ್ನ ಹತ್ತು ಹಲವಾರು ಯೋಜನೆಗಳನ್ನು ನಿರ್ವಹಿಸಲು ಟೆಂಡರ್/ಗುತ್ತಿಗೆ ನೀಡಿರುವ ಕಾರ್ಯಗಳಲ್ಲಿ ಅವುಗಳ ಅನುಷ್ಟಾನ/ಅವುಗಳ ಅಳವಡಿಕೆ ಮುನ್ನ ಅಳವಡಿಸಬಹುದಾದ ಸಾಮಗ್ರಿಗಳನ್ನು ಅಧಿಕಾರಿಗಳಿಂದ ಪರೀಕ್ಷಿಸಿಸಿ ಪ್ರಮಾಣ/ಅರ್ಹತೆ ಸಾಕ್ಷೀಕರಿಸಿಕೊಳ್ಳಬೇಕು ಎಂಬ ನಿಯಮ ಇದೆ ಅಲ್ಲವೇ.
2. ಮೇಲ್ಕಂಡಂತೆ ನಿಗಮದ ಯೋಜನೆಗಳಿಗೆ ಬಳಸುವ ಸಾಮಗ್ರಿಗಳನ್ನು ಅವುಗಳ ಅಳವಡಿಕೆಗೆ ಮುನ್ನ ಪರೀಕ್ಷಿಸಿ ಸರಿಯಾಗಿದೆ ಎಂದು ಒಪ್ಪಿ ಪ್ರಮಾಣ ಪತ್ರ ನೀಡಬೇಕಾದ ಅಧಿಕಾರಿಗಳು ಇದ್ದಾರೆಂದ ಮೇಲೆ, ನಿಗಮಕ್ಕೆ ಸರಬರಾಜಾಗುವ ಹೊಸ ವಿದ್ಯುತ್ ಪರಿವರ್ತಕಗಳಲ್ಲಿ ಹಳೆಯ/ಬಳಕೆಯಾದ ಕೋರ್ ಗಳು ಹೇಗೆ ಅಳವಡಿಕೆಯಾಗುತ್ತಿವೆ.
3. ನಿಗಮಕ್ಕೆ ನಿಗಮದ ನೂತನ ಯೋಜನೆಗಳಿಗೆ ಎಳೆಯುತ್ತಿರುವ 11 ಕೆ.ವಿ/ಸೆಕೆಂಡರಿ ಲೈನ್ ಗಳಲ್ಲಿ ಅತ್ತ ರ್ಯಾಬಿಟ್ ತಂತಿಯೂ ಅಲ್ಲದ ಇತ್ತ 2 ಎಸಿಎಸ್ಆರ್ ಸಹ ಅಲ್ಲದ ವೈರ್ ಯಾಕೆ ಬಳಕೆಯಾಗುತ್ತಿದೆ.
4. ಈ ಮೇಲ್ಕಂಡಂತೆ ಹಳೆಯ ಕೋರ್ ಗಳು ಟಿಸಿಗಳಿಗೆ ಮಧ್ಯಮ ದರ್ಜೆಯ ಸಾಮಗ್ರಿಗಳು ಲೈನ್ ಗಳಿಗೆ ಹೀಗೆ ಅಳವಡಿಕೆಯಿಂದಲೇ ನಿಗಮಕ್ಕೆ ಕೋಟಿ ಕೋಟಿಗಟ್ಟಲೆ ನಷ್ಟವುಂಟಾಗುತ್ತಿದೆಯಲ್ಲ. ಈ ನಷ್ಟಗಳಿಗೆ ಯಾರು ಹೊಣೆ. ಈ ಬಗೆಗೆ ನಿಗಮ ಏನು ಸೃಷ್ಟೀಕರಣ ನೀಡಬಯಸುತ್ತದೆ ದಯಮಾಡಿ ವಿವರ ಕೊಡಿ. |
Assigned to PIODGM(RTI&KI) |
5
5 |
DGM(RTI)/F-9(20)/11.04.2022 |
Prasanna Kumar S N |
ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತವು ತನ್ನ ವ್ಯಾಪ್ತಿಯ ಘನ ಸರ್ಕಾರದ ಯೋಜನೆಗಳ ವಿದ್ಯುತ್ ಸರಬರಾಜಿನ ವ್ಯವಸ್ಥೆಯ ಸಲುವಾಗಿ ಟೆಂಡರ್ ಮೂಲಕ ಈ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಳೆದ ತಿಂಗಳಿನಲ್ಲಿ ಸರಬರಾಜುದಾರರಿಂದ ಪೂರೈಕೆಯಾದ ವಿದ್ಯುತ್ ಪರಿವರ್ತಕಗಳನ್ನು ಸಂಸ್ಥೆಯ ಯಾವ ಅಧಿಕಾರಿಗಳು ತಪಾಸಣೆ ಮಾಡಿದರು. ಅವರು ಪರೀಕ್ಷಿಸಿದ ಪರಿವರ್ತಕಗಳ ಸೀರಿಯಲ್ ನಂಬರ್ ಗಳು ಯಾವುದು ಹಾಗೂ ಪರೀಕ್ಷಾ ವರದಿಗಳು ಹಾಗೂ ಸರಬರಾಜುದಾರರ ಪರೀಕ್ಷಾ ಪ್ರಮಾಣ ಪತ್ರ ಇವುಗಳು ಅಗತ್ಯವಿದೆ ದಯಮಾಡಿ ಒದಗಿಸಿ. |
Assigned to PIODGM(RTI&KI) |
6
6 |
DGM(RTI)/F-9(19)/11.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತವು ಈ ಹಿಂದೆ ತನ್ನ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ಸಮೂಹ ದುರಸ್ತಿ (ಮಾಸ್ ರಿಪೇರ್) ಎಂಬ ಹೆಸರಿನಡಿಯಲ್ಲಿ ತನ್ನ ಎಲ್ಲಾ ವಿಭಾಗಗಳ ವ್ಯಾಪ್ತಿಯ ಪರಿವರ್ತಕಗಳ ದುರಸ್ತಿಗೆ ಒಂದೇ ಸಂಸ್ಥೆಯನ್ನು ದುರಸ್ತಿಗೆ ನೇಮಿಸಿತ್ತು, ಹೌದಲ್ಲವೇ.
2. ಮೇಲ್ಕಂಡ "ಮಾಸ್ ರಿಪೇರ್" ಸಮೂಹ ದುರಸ್ತಿಯನ್ನು ಕಳೆದ ಯಾವ ಯಾವ ಆರ್ಥಿಕ ಸಾಲಿನಲ್ಲಿ ನೇಮಿಸಿತ್ತು. ಈ ದುರಸ್ತಿ ಕಾರ್ಯ ವಹಿಸಿಕೊಂಡಿದ್ದ ಸಂಸ್ಥೆಗಳು ಯಾವುದು ಹಾಗೂ ಅವುಗಳಿಗೆ ಪರಿವರ್ತಕಗಳ ಕೆಪಾಸಿಟಿ ಆಧರಿಸಿ ದುರಸ್ತಿಗೆ ಎಷ್ಟು ದರ ನಿಗದಿಪಡಿಸಲಾಗಿತ್ತು. ಈ ವಿವರಗಳು ನಿಗಮದ ಪ್ರಸಕ್ತ ಆಡಳಿತದ ಲೋಪಗಳನ್ನು ಘನ ಉಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ತೀವ್ರ ಅಗತ್ಯವಿದೆ ದಯಮಾಡಿ ಒದಗಿಸಿ. |
Assigned to PIODGM(RTI&KI) |
7
7 |
DGM(RTI)/F-9(18)/11.04.2022 |
Prasanna Kumar S N |
1. ಬೆಸ್ಕಾಂನ ಗೌರವಾನ್ವಿತ ತಾಂತ್ರಿಕ ನಿರ್ದೇಶಕರಾದ ತಾವು ಈ ಹಿಂದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ತಾಂತ್ರಿಕ ನಿರ್ದೇಶಕರಾಗಿದ್ದಿರಿ. ಆ ಸಮಯದಲ್ಲಿ ಅಲ್ಲಿಯೂ ನಿಗಮದ ಟೆಂಡರ್ ಗಳನ್ನು ತಮಗೆ ಇಷ್ಟ ಬಂದಂತೆ ಮಾರ್ಪಾಡು ಮಾಡಿದ್ದೀರಿ. ಅವುಗಳನ್ನು ವ್ಯಾಪ್ತಿವಾರು/ಹಣಕಾಸಿನ ವೆಚ್ಚವಾರು ವಿಭಜಿಸಿದಿರಿ. ಕೊನೆಯಲ್ಲಿ ಈ ವಿಭಜಿತ ಕ್ಷೇತ್ರಗಳಲ್ಲಿ ನಿಮ್ಮ ಹಿಂಬಾಲಕರು ನಿಮಗೆ ಇಷ್ಟವಾದವರು ಫಲಾನುಭವಿಗಳಾದರು ಎಂಬ ಆರೋಪ ಇದೆ. ಈ ಆರೋಪಕ್ಕೆ ಸಾಕಷ್ಟು ಪುರಾವೆಗಳೂ ಪತ್ರಿಕೆಗೆ ದೊರೆತಿದೆ. ಈ ಬಗೆಗೆ ನಿಮ್ಮ ಸ್ಪಷ್ಟನೆ ಏನು.
2. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಾವು ಬೆಸ್ಕಾಂಗೆ ವರ್ಗವಾಗಿ ಬಂದಾಗಿನಿಂದ ನಿಮ್ಮ ಚೆಸ್ಕಾಂನ ಹಿಂಬಾಲಕರು ಬೆಸ್ಕಾಂನಲ್ಲಿಯೂ ಫಲಾನುಭವಿಗಳಾಗಲು ತಾವು ಬೆಸ್ಕಾಂನಲ್ಲಿಯೂ ಟೆಂಡರ್ ಗಳನ್ನು ಕೆಲಸ ಕಾರ್ಯಗಳನ್ನು ಒಡೆದು ವಿಭಜಿಸುವ ಕಾರ್ಯ ಮುಂದುವರೆಸುತ್ತಿದ್ದೀರಿ ಎಂಬ ಆರೋಪ ಪುನರಾವರ್ತನೆ ಆಗುತ್ತಿದೆ. ಈ ಬಗೆಗೆ ತಾವು ಸಮರ್ಥಿಸಿಕೊಳ್ಳುವ ವಿವರಗಳಿದ್ದರೆ ದಯಮಾಡಿ ಕೊಡಿ.
ಈ ವಿವರಗಳು/ತಮ್ಮ ಸಮರ್ಥನೆ ಪತ್ರಿಕೆಗೆ ತುಂಬ ಅಗತ್ಯವಿದೆ. ಏಕಾ ಏಕಿ ತಮ್ಮ ಮೇಲೆ ಆರೋಪಗಳನ್ನು ಮಾಡುವುದರ ಬದಲಿಗೆ ಆರೋಪ ಹಾಗೂ ತಮ್ಮ ಸಮರ್ಥನೆಯನ್ನು ಪರಿಶೀಲಿಸಿ ನಿಜ ಯಾವುದು, ಸುಳ್ಳು ಯಾವುದು ಎಂಬ ತೀರ್ಮಾನಕ್ಕೆ ಬರುವುದರ ಸಲುವಾಗಿ ವಿವರ ಅಗತ್ಯವಿದೆ. |
Assigned to PIODGM(RTI&KI) |
8
8 |
DGM(RTI)/F-9(17)/11.04.2022 |
Prasanna Kumar S N |
1. ತಮ್ಮ ಬೆಸ್ಕಾಂ ನಿಗಮವು ತನ್ನ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗಾಗಿ ಘನ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆ (ಕ.ವಿ.ಕಾ) ಸಂಸ್ಥೆಗೂ ನೀಡುತ್ತಿದೆಯಲ್ಲವೇ.
2. ಮೇಲ್ಕಂಡ "ಕ.ವಿ.ಕಾ." ಸಂಸ್ಥೆಗೆ ಬೆಸ್ಕಾಂ ಪರಿವರ್ತಕಗಳನ್ನು ಅವುಗಳ ಕೆಪಾಸಿಟಿ ಆಧಾರಿತವಾಗಿ ಪ್ರತಿ ಪರಿವರ್ತಕಗಳಿಗೆ ಎಷ್ಟು ರೂ.ಗಳ ವೆಚ್ಚದಲ್ಲಿ ದುರಸ್ತಿ ಮಾಡಿಸುತ್ತಿದೆ. 2018-19, 2019-20, 2020-21, 2021-22 ನೇ ಸಾಲಿನ ದರ ಪಟ್ಟಿ ವಿವರ ಒದಗಿಸಿ.
3. ಬೆಸ್ಕಾಂ ತನ್ನ ವ್ಯಾಪ್ತಿಯ ಕೆಟ್ಟಿರುವ ಪರಿವರ್ತಕಗಳನ್ನು ಮೇಲ್ಕಂಡ ರೀತಿಯಲ್ಲೇ ಸರ್ಕಾರಿ ಸ್ವಾಮ್ಯದ "ಎನ್.ಜಿ.ಈ.ಎಫ್." ಸಂಸ್ಥೆಯಿಂದ ದುರಸ್ತಿ ಮಾಡಿಸಿದೆಯೇ, "ಎನ್.ಜಿ.ಈ.ಎಫ್." ಸಂಸ್ಥೆಗೆ ದುರಸ್ತಿಗಾಗಿ ವಿಚಾರಣೆ ನಡೆಸಿತ್ತೆ. ಹಾಗೆ ದುರಸ್ತಿ ಮಾಡಿದ್ದಲ್ಲಿ ಅಥವಾ ದರಗಳ ವಿವರವನ್ನು ಮೇಲ್ಕಂಡ "ಎನ್.ಜಿ.ಈ.ಎಫ್." ಸಂಸ್ಥೆ ನೀಡಿದ್ದಲ್ಲಿ ಸದರಿ ದರಗಳ ವಿವರ ಮೇಲ್ಕಂಡಂತೆ ಕಳೆದ ಮೂರು ಆರ್ಥಿಕ ವರ್ಷಗಳ ವಿವರ ಅಗತ್ಯವಿದೆ. ದಯಮಾಡಿ ವಿವರ ನೀಡಿ.
ಈ ವಿವರಗಳು ನಿಗಮದ ಹಣ ಅನಗತ್ಯವಾಗಿ ಪೋಲಾಗಿ ವ್ಯರ್ಥವಾಗುತ್ತಿದೆ ಎಂಬ ಆರೋಪದ ಕುರಿತು ಘನ ಉಚ್ಚ ನ್ಯಾಯಾಲಯದ ಪೀಠದ ಮುಂದೆ ತರುವ ಸಲುವಾಗಿ ತುರ್ತು ಅಗತ್ಯವಿದ್ದು ತುರ್ತಾಗಿ ವಿವರ ನೀಡಲು ವಿನಮ್ರವಾಗಿ ತಮ್ಮನ್ನು ಕೋರಬಯಸುತ್ತೇವೆ. |
Assigned to PIODGM(RTI&KI) |
9
9 |
DGM(RTI)/F-9(16)/11.04.2022 |
Prasanna Kumar S N |
1. ತಮ್ಮ ಬೆಸ್ಕಾಂ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ಕಗಳ ದುರಸ್ತಿಗೆ ನಿಗಮವೇ ಟ್ರಾನ್ಸಿಲ್ ಆಯಿಲ್ ಸರಬರಾಜು ಮಾಡುತ್ತಿದೆಯಷ್ಟೇ.
2. ಕಳೆದ 2020-21 ನೇ ಸಾಲಿನಲ್ಲಿ ಹಾಗೂ 2021-22 ನೇ ಸಾಲಿನಲ್ಲಿ ಒಟ್ಟು ನಿಗಮದಲ್ಲಿ ದುರಸ್ತಿಗೆ ಬಂದಿದ್ದ ಪರಿವರ್ತಕಗಳೆಷ್ಟು ವಿಭಾಗಾವಾರು ವಿವರ ಅಗತ್ಯವಿದೆ. ದಯಮಾಡಿ ಒದಗಿಸಿ.
3. ಕಳೆದ 2020-21 ಹಾಗೂ 2021-22 ನೇ ಸಾಲಿನಲ್ಲಿ ಬೆಸ್ಕಾಂನ ಕೇಂದ್ರ ಕಚೇರಿಯಿಂದ/ಕೇಂದ್ರ ಉಗ್ರಾಣದಿಂದ ವಿಭಾಗಾವಾರು ಸರಬರಾಜಾದ ಹೊಸ ಟ್ರಾನ್ಸಿಲ್ ಆಯಿಲ್ ಪ್ರಮಾಣ ಎಷ್ಟು ವಿವರ ಅಗತ್ಯವಿದೆ. ದಯಮಾಡಿ ಒದಗಿಸಿ. |
Assigned to PIODGM(RTI&KI) |
10
10 |
DGM(RTI)/F-9(15)/11.04.2022 |
Prasanna Kumar S N |
1. ತಮ್ಮ ಬೆಸ್ಕಾಂ ತುಮಕೂರು ವೃತ್ತದ ತುಮಕೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಗೂ ನಿಟ್ಟೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ಕಳೆದ ಆರ್ಥಿಕ ವರ್ಷ 2021-22 ನೇ ಸಾಲಿನಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದ್ದ ವಿದ್ಯುತ್ ಪರಿವರ್ತಕಗಳಲ್ಲಿ ಎಷ್ಟು ಪರಿವರ್ತಕಗಳು ದುರಸ್ತಿಗೆ ಬಂದಿದ್ದವು.
2. ತುಮಕೂರು ತಾಲ್ಲೂಕಿನ ಹಾಗೂ ಗುಬ್ಬಿ ತಾಲ್ಲೂಕಿನ ಬೆಸ್ಕಾಂನ ಅಧಿಕೃತ ದುರಸ್ತಿದಾರರು ಮೇಲ್ಕಂಡ 2021-22 ನೇ ಸಾಲಿನಲ್ಲಿ ತುಮಕೂರು ಉಗ್ರಾಣಕ್ಕೆ ದುರಸ್ತಿ ಮಾಡಿ ಸರಬರಾಜು ಮಾಡಿದ ವಿದ್ಯುತ್ ಪರಿವರ್ತಕಗಳೆಷ್ಟು.
3. ತಮ್ಮ 2022 ನೇ ಸಾಲಿನ 28.3.2022 ನೇ ದಿನಾಂಕದ ವಿದ್ಯುತ್ ಪರಿವರ್ತಕಗಳ ದುರಸ್ತಿ ಸಲುವಾಗಿ ಹೊರಡಿಸಿದ ಜಾಹಿರಾತಿನಂತೆ ಯಾವ ಮಾನದಂಡ ಹಾಗೂ ವರದಿ/ಶಿಫಾರಸ್ಸಿನ ಆಧಾರದ ಮೇರೆಗೆ ತುಮಕೂರು ತಾಲ್ಲೂಕಿನ ಗೂಳೂರು ಗ್ರಾಮವನ್ನು ಹಾಗೂ ಗುಬ್ಬಿ ತಾಲ್ಲೂಕಿನ ನಿಟ್ಟೂರು ಪಟ್ಟಣವನ್ನು ವಿದ್ಯುತ್ ಪರಿವರ್ತಕ ದುರಸ್ತಿಗೆ ಕೇಂದ್ರವಾಗಿ ಪರಿಗಣಿಸಿದ್ದೀರಿ.
ಈ ವಿವರಗಳು ಅನಗತ್ಯವಾಗಿ ಬೆಸ್ಕಾಂ ನಿಗಮದಲ್ಲಿ ಅನವಶ್ಯಕ ಸಂಗತಿಗಳು ಜರುಗಬಾರದು ಹಾಗೂ ಸಾರ್ವಜನಿಕರ ಕಂದಾಯದ ಹಣ ಪೋಲಾಗಬಾರದು ಎಂಬ ಕಾರಣಕ್ಕಾಗಿ ಅತ್ಯವಶ್ಯವಾಗಿದ್ದು ದಯಮಾಡಿ ವಿವರ ಒದಗಿಸಿ. |
Assigned to PIODGM(RTI&KI) |
11
11 |
DGM(RTI)/F-9(14)/11.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮವು ತನ್ನ ಅಗತ್ಯತೆಗಳಾದ ವಿದ್ಯುತ್ ಪರಿವರ್ತಕಗಳನ್ನು ಕೊಂಡುಕೊಳ್ಳುವ ಸಂದರ್ಭದಲ್ಲಿ ಹಾಗೂ ದುರಸ್ತಿಗೊಳಿಸಿಕೊಳ್ಳುವ ಸಂದರ್ಭದಲ್ಲಿ ಕೆಲವೊಮ್ಮೆ ಸರ್ಕಾರದ ಆದೇಶದ ಪ್ರಕಾರ ಎಂದು "ಎನ್.ಜಿ.ಈ.ಎಫ್" "ಕ.ವಿ.ಕಾ" ಸಂಸ್ಥೆಗಳಿಗೆ ತನ್ನ ಅಗತ್ಯತೆಗಳ ಪೂರೈಕೆಗೆ ಆದೇಶ ನೀಡುವುದು ಸರಿಯಷ್ಟೆ.
2. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ನಿಗಮದಿಂದ ಪಡೆದ "ಪೂರೈಕೆ" ಆದೇಶವನ್ನು ತಮ್ಮಿಂದ ಆದೇಶ ಪಡೆದ ಸಂಸ್ಥೆಗಳು ಪರಬಾರೆ ಮಾಡಬಹುದೇ. ಬೇರೆ ಸಂಸ್ಥೆಗಳಿಗೆ ಗುತ್ತಿಗೆ ನೀಡಬಹುದೇ.
3. ಕಳೆದ 2012-13 ನೇ ಆರ್ಥಿಕ ವರ್ಷದಿಂದ ಈವರೆವಿಗೆ ಅಂದರೆ 30.3.2022 ರ ವರೆವಿಗೆ "ಎನ್.ಜಿ.ಈ.ಎಫ್" ಸಂಸ್ಥೆ ಬೆಸ್ಕಾಂನಿಂದ ಎಷ್ಟು ವಿದ್ಯುತ್ ಪರಿವರ್ತಕಗಳ ಪೂರೈಕೆಗೆ ಆದೇಶ ಪಡೆದಿದೆ ಹಾಗೂ ಎಷ್ಟು ಪರಿವರ್ತಕಗಳನ್ನು ನಿಗಮಕ್ಕೆ ಸರಬರಾಜು ಮಾಡಿದೆ.
4. ಸದರಿ ಮೇಲ್ಕಂಡ ಎನ್.ಜಿ.ಈ.ಎಫ್. ಸಂಸ್ಥೆಯ ವಿದ್ಯುತ್ ಪರಿವರ್ತಕಗಳು ಯಾವ ಸ್ಥಳದಿಂದ ನಿಗಮಕ್ಕೆ ಸರಬರಾಜಾದವು. ಅವುಗಳನ್ನು ಪೂರೈಕೆದಾರ ಸಂಸ್ಥೆಯ ಕಾರ್ಯಾಗಾರಕ್ಕೆ ಯಾವ ಅಧಿಕಾರಿ ಹೋಗಿ ತಪಾಸಣೆ ಮಾಡಿದ್ದರು. ಈ ವಿವರಗಳು ನಿಗಮದ ಹಿತ ದೃಷ್ಟಿಯಿಂದಲೇ ತುರ್ತು ಅಗತ್ಯವಿದೆ. ದಯಮಾಡಿ ವಿವರ ಒದಗಿಸಿ. |
Assigned to PIODGM(RTI&KI) |
12
12 |
DGM(RTI)/F-9(13)/11.04.2022 |
Prasanna Kumar S N |
1. ಒಂದು ಮನೆಯ ಬೆಳಕಿಗೆ ವಿದ್ಯುತ್ ಪೂರೈಸಬೇಕಾದಲ್ಲಿ ಸರ್ಕಾರದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಇರಬೇಕು ಎಂದು ಕಾನೂನು ಹೇಳುತ್ತದೆ. ಈ ಗುತ್ತಿಗೆದಾರ ವಿದ್ಯುತ್ ಸಂಬಂಧಿತ ಕ್ಷೇತ್ರದ ಅನುಭವ/ ವಿದ್ಯಾಭ್ಯಾಸ ಇಲ್ಲದವನಾದರೆ ಆತ ಡಿಪ್ಲಮೋ ವಿದ್ಯಾಭ್ಯಾಸ ಮಾಡಿದ ವ್ಯಕ್ತಿಯ ಸೂಪರ್ ವೈಸೆಷನ್ ನಲ್ಲಿ ಕಾರ್ಯ ನಿರ್ವಹಿಸಬೇಕಿದೆ. ನಿಮ್ಮ ಘನ ಸರ್ಕಾರದ ಕಾನೂನು ಹೀಗಿರುವಾಗ ನಿಮ್ಮ ನಿಗಮದಲ್ಲಿ ಊರು ಊರಿಗೆ/ಹಳ್ಳಿ ಹಳ್ಳಿಗೆ/ ಪಟ್ಟಣದ ಜನ ನಿಬಿಡ ಪ್ರದೇಶಗಳಲ್ಲಿ ಅಳವಡಿಸುವ ವಿದ್ಯುತ್ ಸರಬರಾಜು ಮಾಡುವ ಪರಿವರ್ತಕಗಳ ದುರಸ್ತಿಗೆ ನಿಗಮವು ಯಾವುದೇ ಅನುಭವ ಇಲ್ಲದ ವಿದ್ಯುತ್ ವಲಯದ ಓಮ್ಸ್/ವ್ಯಾಟ್ಸ್/ಕಿಲೋ ವೋಲ್ಟ್ಸ್/ಬಗೆಗೆ ಗಾಳಿ ಗಂಧ ಗೊತ್ತಿಲ್ಲದ ಸಂಸ್ಥೆಗಳನ್ನು/ವ್ಯಕ್ತಿಗಳನ್ನು ವಿದ್ಯುತ್ ಪರಿವರ್ತಕ ದುರಸ್ತಿಗೆ ಕರೆಯುವುದು ಸಾಧುವೆ. ಈ ಬಗೆಗೆ ನಿಗಮದ ಸ್ಪಷ್ಟನೆ ಏನು.
2. ಉಳ್ಳಾಲ/ಕೆಂಗೇರಿ ಘಟನೆ ನಡೆದು ಇನ್ನು ದಿನಗಳೇ ಉರುಳಿಲ್ಲ. ಅಲ್ಲಿ ನಡೆದ ಘನ ಘೋರ ದುರಂತವು ವಿದ್ಯುತ್ ಪರಿವರ್ತಕ ಸ್ಪೋಟದಿಂದ ಆದದ್ದು ಎಂಬುದು ತಮಗೂ ತಿಳಿದಿದೆ ಎಂದು ಭಾವಿಸುತ್ತೇನೆ. ಹಾಗಿದ್ದೂ 11 ಕೆ.ವಿ. ವಿದ್ಯುತ್ ಪ್ರವಹಿಸುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸುವ ಕಾರ್ಯಗಳಿಗೆ ಅನುಭವ ರಹಿತ/ಅವಿದ್ಯಾವಂತ ಉದ್ಯಮಿಗಳಿಗೆ ಮಣೆ ಹಾಕಿದರೆ, ಜನಗಳ ಜೀವಕ್ಕೆ ನಿಗಮದಲ್ಲಿ ಬೆಲೆ ಇಲ್ಲವೇ. ದಯಮಾಡಿ ಈ ಬಗೆಗೆ ನಿಗಮದ ಸ್ಪಷ್ಟನೆ ಏನು ಎಂಬುದಾಗಿ ವಿವರವಾಗಿ ತಿಳಿಸಬೇಕಾಗಿ ಕೋರುತ್ತೇವೆ. |
Assigned to PIODGM(RTI&KI) |
13
13 |
DGM(RTI)/F-9(12)/04.04.2022 |
Lakshmikantharaju M G |
ರಾಜ್ಯದ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಕೃಷಿ ಬಳಕೆಗೆ ಹೆಚ್ಚು ವಿದ್ಯುತ್ ಬಳಕೆಯಾಗುವ ಮೂರು ತಾಲ್ಲೂಕುಗಳ ವಿದ್ಯುತ್ ಪ್ರಮಾಣವನ್ನು (ಯೂನಿಟ್) ವಿವರವನ್ನು ನೀಡುವಂತೆ ಕೋರಿ. |
Assigned to PIODGM(RTI&KI) |
14
14 |
DGM(RTI)/F-9(11)/04.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮವು ತನ್ನ ಗ್ರಾಹಕರ ಬಳಕೆಗೆ ರಾಜ್ಯದ ಕೆಲವು ವಿದ್ಯುತ್ ಪರಿವರ್ತಕಗಳ ಉತ್ಪಾದಕರಿಂದ ನೂತನ 4 ಸ್ಟಾರ್ ರೇಟೆಡ್ ವಿದ್ಯುತ್ ಪರಿವರ್ತಕಗಳನ್ನು ಟೆಂಡರ್ ಮೂಲಕ ಖರೀದಿಸಿದ್ದು ಸರಿಯಷ್ಟೇ. ಸದರಿ ಟೆಂಡರ್ ದಾಖಲಾತಿಗಳಲ್ಲಿ ನಿಗಮವು ಅಪೇಕ್ಷಿಸಿದ್ದ 4 ಸ್ಟಾರ್ ರೇಟೆಡ್ ಮಾದರಿಯಲ್ಲಿಯೇ ನಿಗಮದ ಅಪೇಕ್ಷಿತ (ಭಾರತೀಯ ಮಾನಕ ಬ್ಯೂರೋ ನಿಯಮಾವಳಿಗಳ ಪ್ರಕಾರ) ಮಾನದಂಡಗಳಂತೆಯೇ ವಿದ್ಯುತ್ ಪರಿವರ್ತಕಗಳು ಸರಬರಾಜಾಗಿದೆಯೇ.
2. ಟೆಂಡರ್ ನಲ್ಲಿ ನಿಗಮವು ಆಯ್ಕೆ ಮಾಡಿದ ಸಂಸ್ಥೆಗಳು, ಅವುಗಳು ಈವರೆವಿಗೆ ನಿಗಮಕ್ಕೆ ಸರಬರಾಜು ಮಾಡಿರುವ ವಿದ್ಯುತ್ ಪರಿವರ್ತಕಗಳೆಷ್ಟು ಹಾಗೂ ಆ ವಿದ್ಯುತ್ ಪರಿವರ್ತಕಗಳು ನಿಗಮದ ಯಾವ ಅಧಿಕಾರಿಯಿಂದ ಯಾವ ಸ್ಥಳದಲ್ಲಿ ಪರೀಕ್ಷೆಗೆ ಒಳಪಟ್ಟಿದೆ. ಪರೀಕ್ಷಿಸಲಾದ ಲ್ಯಾಬ್ ಯಾವುದು ಅಲ್ಲಿ ಯಾವ ಪರೀಕ್ಷಾ ಯಂತ್ರ ಅಳವಡಿಸಲ್ಪಟ್ಟಿದೆ. ಈ ವಿವರಗಳು ಅಗತ್ಯವಿದೆ. ದಯಮಾಡಿ ವಿವರ ಒದಗಿಸಿ.
3. ನಿಗಮಕ್ಕೆ ಸರಬರಾಜಾಗಿರುವ ಬಹುತೇಕ ವಿದ್ಯುತ್ ಪರಿವರ್ತಕಗಳು 4 ಸ್ಟಾರ್ ಮಾದರಿಯಲ್ಲಿ ಇಲ್ಲವೆಂದು ಹಾಗೂ ನಿಗಮದಿಂದ ರೈತರಿಗೆ ಸರಬರಾಜಾಗಿರುವ ಅನೇಕ ಪರಿವರ್ತಕಗಳು ರೈತರಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲವಾಗಿದೆಯೆಂಬ ದೂರಿದೆ. ಈ ಬಗೆಗೆ ನಿಗಮ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬ ವಿವರ ಒದಗಿಸಿ. ಸಾರ್ವಜನಿಕರ ಕಂದಾಯದ ಹಣ ಅನಗತ್ಯವಾಗಿ ಪೋಲಾಗುವುದನ್ನು ತಡೆಯುವ ಉದ್ದೇಶದಿಂದ ಈ ವಿವರ ಕೇಳಲಾಗಿದ್ದು ದಯಮಾಡಿ ವಿವರ ಒದಗಿಸಿ. |
Assigned to PIODGM(RTI&KI) |
15
15 |
DGM(RTI)/F-9(10)/04.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮವು ತನ್ನ ವ್ಯಾಪ್ತಿಯ ವಿದ್ಯುತ್ ಪರಿವರ್ತಕ ದುರಸ್ತಿ ಕಾರ್ಯಕ್ಕೆ ಅಂದಾಜಿಸುವ ಹಣಕಾಸಿನ ವೆಚ್ಚ ವಾರ್ಷಿಕವಾಗಿ ಆಯಾ ವ್ಯಾಪ್ತಿಯ ವಿಭಾಗಗಳಿಂದ ಬಳಸಲ್ಪಡುವ ಹಣಕಾಸಿನ ವಿವರಗಳಿಂದ ವಾರ್ಷಿಕವಾಗಿ ಪರಿಗಣಿಸಲ್ಪಡುತ್ತಿತ್ತು. ಹೌದಲ್ಲವೇ.
2. ಈ ವೆಚ್ಚವು ಖರಾರುವಕ್ಕಾಗಿ ಆಯಾ ದುರಸ್ತಿ ಕೇಂದ್ರಗಳಲ್ಲಿ ದುರಸ್ತಿಗೊಳಿಸಿ ನಿಗಮಕ್ಕೆ ನೀಡುವ ವಿದ್ಯುತ್ ಪರಿವರ್ತಕಗಳ ದುರಸ್ತಿ ವೆಚ್ಚವಾಗಿರುತ್ತಿತ್ತು ಹಾಗೂ ಆಯಾ ಸಂಸ್ಥೆಗಳು ತನ್ನ ಟೆಂಡರ್ ನಲ್ಲಿ ನಮೂದಿಸುವ ಶೇಕಡಾವಾರು % ಆಧಾರಿತ ಪ್ಲಸ್ ಅಥವಾ ಮೈನೆಸ್ ದರವನ್ನೇ ಅವಲಂಬಿಸಿರುತ್ತಿತ್ತು. ಹೌದಲ್ಲವೇ.
3. ಮೇಲ್ಕಂಡಂತೆ ಆಯಾ ದುರಸ್ತಿ ಕೇಂದ್ರಗಳ ಮೈನೆಸ್ ದರವನ್ನು ನಿಗಮದ ಟೆಂಡರ್ ನಲ್ಲಿ ಉಲ್ಲೇಖಿಸಿದ್ದ ದರಗಳಿಗೆ ಸೇರಿಸಿದಾಗ ಆಯಾ ದುರಸ್ತಿ ಕೇಂದ್ರಗಳಲ್ಲಿ ಈಗ ನಿಗಮವು ಉಲ್ಲೇಖಿಸುವ ಅಥವಾ ಅಂದಾಜಿಸಿ ಟೆಂಡರ್ ನಲ್ಲಿ ಪ್ರಸ್ತಾಪಿಸುವ ಟೆಂಡರ್ ಮೊತ್ತವು ವಾರ್ಷಿಕವಾಗಿ ಆಯಾ ವಿಭಾಗಗಳಲ್ಲಿ/ಆಯಾ ದುರಸ್ತಿ ಕೇಂದ್ರಗಳಲ್ಲಿ ವಾರ್ಷಿಕವಾಗಿ ವಿದ್ಯುತ್ ಪರಿವರ್ತಕ ದುರಸ್ತಿಗೆ ವೆಚ್ಚವಾಗುವ ಮೊತ್ತಕ್ಕೆ ಸರಿಸಮನಾಗಿರಬೇಕು. ಹೌದಲ್ಲವೇ.
4. ನಿಗಮದ ಸೇವೆಯಲ್ಲಿರುವ ಅಧಿಕಾರಸ್ಥರಿಗೆ/ಅವರಿಗೆ ಬೇಕಾದವರಿಗೆ ಟೆಂಡರ್ ನಲ್ಲಿ ಭಾಗವಹಿಸುವ ಅರ್ಹತೆ ಸಿಗಬೇಕು ಎನ್ನುವ ಕಾರಣಕ್ಕೆ ವಾರ್ಷಿಕ ವೆಚ್ಚವನ್ನು ಪರಿಗಣಿಸದೇ/ಅಂದಾಜು ಮೊಬಲಗನ್ನೇ ತಿದ್ದುವುದು/ ಮಾರ್ಪಡಿಸುವುದು ಕಾನೂನಿಗೆ ವಿರುದ್ಧವಾಗುತ್ತದೆ ಹೌದಲ್ಲವೇ. ಈ ಬಾರಿಯ ಟೆಂಡರ್ ದಾಖಲಾತಿಗಲ್ಲಿ ಯಾವ ರೀತಿಯಲ್ಲಿ ಅಂದಾಜು ಮೊತ್ತ ಪರಿಷ್ಕರಿಸಲ್ಪಟ್ಟಿದೆ. ಈ ವಿವರಗಳು ಘನ ನ್ಯಾಯಾಲಯದ ಅವಗಾಹನೆಗೆ ತುರ್ತು ಅಗತ್ಯವಿದೆ ದಯಮಾಡಿ ವಿವರ ಒದಗಿಸಿ. |
Assigned to PIODGM(RTI&KI) |
16
16 |
DGM(RTI)/F-9(9)/04.04.2022 |
Prasanna Kumar S N |
1. ಬೆಸ್ಕಾಂ ಕಳೆದ 28.3.2022 ರಂದು ದಿನ ಪತ್ರಿಕೆಯಲ್ಲಿ ಜಾಹಿರಾತು ನೀಡಿ, ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ವಿಚಾರಣೆ ಪ್ರಕಟಿಸಿರುವುದು ಸರಿಯಷ್ಟೇ. ಈ ಜಾಹಿರಾತಿನಲ್ಲಿ ಬೆಸ್ಕಾಂ ನಿಗಮವು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳಿಗೆಂದು ಘೋಷಣೆ ಮಾಡಿ ಮೀಸಲಾತಿ ನಿಗದಿಗೊಳಿಸಿರುವ ವಿಚಾರಣೆ ಸಂಖ್ಯೆ 1) 91. 2) 94. 3) 99. 4) 86. 5) 78. 6) 72. 7) 69. 8) 64. 9) 52. 10) 65. 11) 55. 12) 22. ಈ ಘೋಷಿತ ಮೀಸಲಾತಿ ನಿಗದಿ ಪಡಿಸಿರುವ ಬಹುತೇಕ ಸ್ಥಳಗಳಲ್ಲಿ ಹಾಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ದುರಸ್ತಿದಾರರೇ ಹಾಲಿ ಇರುವ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ತಮ್ಮ ಗಮನದಲ್ಲಿದೆ ಹೌದಲ್ಲವೇ.
2. ಬೆಸ್ಕಾಂನ ತಾಂತ್ರಿಕ ನಿರ್ದೇಶಕರಾದ ತಾವು ಈ ಹಿಂದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲೂ ತಾಂತ್ರಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಬಂದಿದ್ದೀರಿ ಹೌದಲ್ಲವೇ.
3. ತಾವು ಮೇಲ್ಕಂಡ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸೇವೆಯಲ್ಲಿಯೂ ಅಲ್ಲಿಯ ವಿದ್ಯುತ್ ಪರಿವರ್ತಕ ದುರಸ್ತಿ ಕಾರ್ಯ ವ್ಯಾಪ್ತಿಯನ್ನು ಬಹುತೇಕ ಒಡೆದು ಒಂದನ್ನು ಎರಡು ಮಾಡಿ ಅಲ್ಲಿ ಮೀಸಲಾತಿ ನಿಗದಿ ಮಾಡಿ ಅನೇಕ ತಮ್ಮ ಹಿಂಬಾಲಕರಿಗೆ ಅನುಕೂಲ ಮಾಡಿದ್ದೀರಿ ಎಂಬ ಆರೋಪ ಇದೆ. ಈ ಬಗೆಗೆ ತಮ್ಮ ಸ್ಪಷ್ಟನೆ ಏನು. |
Assigned to PIODGM(RTI&KI) |
17
17 |
DGM(RTI)/F-9(8)/04.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ ತನ್ನ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಕೊಡುವ ಕಾರ್ಯಕ್ಕೆ ಟೆಂಡರ್ ನಡೆಸುವ ಉದ್ದೇಶದಿಂದ ದಿನಾಂಕ: 28.3.2022 ರಂದು ದಿನ ಪತ್ರಿಕೆಯಲ್ಲಿ ವಿಚಾರಣಾ ಜಾಹಿರಾತು ಪ್ರಕಟಿಸಿರುವುದು ಸರಿಯಷ್ಟೇ.
2. ನಿಗಮವು ತನ್ನ ವ್ಯಾಪ್ತಿಯ ವಿದ್ಯುತ್ ಸರಬರಾಜಿನ ಸೆಕೆಂಡರಿ ಮಾರ್ಗಗಳನ್ನು 11 ಕೆವಿ. ಮಾರ್ಗಗಳನ್ನು ದುರಸ್ತಿಗೊಳಿಸಿ ಮಾರ್ಗ ನಿರ್ವಹಣೆ ಮಾಡುವ ಮಾರ್ಗದಾಳುಗಳನ್ನು ನೇಮಕ ಮಾಡಿಕೊಳ್ಳುವಾಗಲೂ ಆತ ಕನಿಷ್ಟ 10ನೇ ತರಗತಿ ಪಾಸಾಗಿರಬೇಕು ಎಂದು ಅಪೇಕ್ಷಿಸುತ್ತದೆ. ಹೌದಲ್ಲವೇ.
3. ನಿಗಮವು ತನ್ನ ಪ್ರತಿ ಶಾಖೆಯ ಉಸ್ತುವಾರಿ ನೋಡಿಕೊಳ್ಳುವ ಶಾಖಾಧಿಕಾರಿಯ ನೇಮಕಕ್ಕೂ ಕನಿಷ್ಟ ಆತ ಡಿಪ್ಲಮೋ ಉತ್ತೀರ್ಣನಾಗಿರಬೇಕು ಎಂದು ಅಪೇಕ್ಷಿಸುತ್ತದೆ ಹೌದಲ್ಲವೇ.
4. ಮೇಲ್ಕಂಡಂತೆ ಎಲ್ಲವೂ ನಿಗದಿತ ವಿದ್ಯಾಭ್ಯಾಸ ಅರ್ಹತೆ ಉಳ್ಳವರು ಮಾತ್ರ ಅರ್ಹರೆಂದು ಅಪೇಕ್ಷಿಸುವ ನಿಗಮವು ವಿದ್ಯುತ್ ಪರಿವರ್ತಕದ ದುರಸ್ತಿಗೆ ಭಾಗವಹಿಸುವ ಸ್ಪರ್ಧಿಗಳು ಕನಿಷ್ಟ ಪರಿವರ್ತಕದ ದುರಸ್ತಿ ಅನುಭವವನ್ನೂ ಪರಿಗಣಿಸದೇ ಏಕಾ ಏಕಿ ಈ ಆರ್ಥಿಕ ಸಾಲಿನಲ್ಲಿ ಆರೇಳು ದುರಸ್ತಿ ಕೇಂದ್ರಗಳನ್ನು ಹೊಸಬರಿಗೆ ಎಂದು ಯಾವ ಕಾನೂನಿನ ಅಡಿಯಲ್ಲಿ ಯಾವ ಮಾನದಂಡದ ಅಡಿಯಲ್ಲಿ ಘೋಷಿಸಿದೆ. ಈ ಆಯ್ಕೆಯನ್ನು ನಿಗಮವು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತದೆ. ವಿವರಿಸಿ. ಈ ವಿವರಗಳು ಸಾರ್ವಜನಿಕ ರೈತರ ಹಿತದೃಷ್ಟಿಯಿಂದ ಅಪೇಕ್ಷಿಸಿದೆ. |
Assigned to PIODGM(RTI&KI) |
18
18 |
DGM(RTI)/F-9(7)/04.04.2022 |
Prasanna Kumar S N |
1. 2015-16 ರ ಸಾಲಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ತನ್ನ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಕೊಡುವ ಕಾರ್ಯಕ್ಕೆ 1500/2000 ವಿದ್ಯುತ್ ಪರಿವರ್ತಕಗಳನ್ನು ವಾರ್ಷಿಕವಾಗಿ ದುರಸ್ತಿಗೊಳಿಸಿಕೊಟ್ಟಿದ್ದ ಅನುಭವ ಉಳ್ಳವರನ್ನು ಮಾತ್ರ ಅರ್ಹರೆಂದು ಪರಿಗಣಿಸುತ್ತಿತ್ತು ಹೌದಲ್ಲವೆ.
2. ಮೇಲ್ಕಂಡ ದುರಸ್ತಿ ಕಾರ್ಯಕ್ಕೆ ಅರ್ಹರಾಗ ಬೇಕಾದವರು ವಾರ್ಷಿಕವಾಗಿ ಸದರಿ ಭಾಗಿಯಾಗುವ ಟೆಂಡರ್ ಮೊತ್ತದ ಅರ್ಧದಷ್ಟು ವಾರ್ಷಿಕ ಹಣಕಾಸಿನ ವಹಿವಾಟು ನಡೆಸಿದವರಾಗಿರಬೇಕಿತ್ತು ಹಾಗೂ ಆತನ ಅಥವಾ ಸದರಿ ಸಂಸ್ಥೆಯ ಹೆಸರಿನಲ್ಲಿ ಟೆಂಡರ್ ಮೊತ್ತದ ಕನಿಷ್ಟ 25% ನಷ್ಟು ಆಸ್ತಿ/ಪಾಸ್ತಿ ಇರಬೇಕಿತ್ತು.
3. ಈ ನಿಯಮಗಳನ್ನು ಬೆಸ್ಕಾಂ 2016-17 ಆರ್ಥಿಕ ಸಾಲಿನಲ್ಲಿ ಮುರಿದು ಏಕಾ ಏಕಿ ತನ್ನ ನಿಯಮ/ರೀತಿ/ನೀತಿಗಳನ್ನು ಸಡಿಲಿಸಬೇಕು ಬೇಕೆಂದವರಿಗೆಲ್ಲಾ ಅವರು ಬಯಸಿದ ರೀತಿಗಳಲ್ಲೇ ಕಾನೂನು ಮಾರ್ಪಾಡು ಕೊಟ್ಟಿದೆ ಎಂಬ ಆರೋಪ ಇದೆ ಹೌದಾ.
4. ಈ ವಿವರಗಳನ್ನು ಘನ ಉಚ್ಚನ್ಯಾಯಾಲಯಕ್ಕೆ ರಾಜ್ಯದ ರೈತರ/ಉದ್ದಿಮೆದಾರರ /ಜನತೆಯ ಹಿತ ದೃಷ್ಟಿಯಿಂದ ಸಲ್ಲಿಸಬೇಕಿರುವುದರಿಂದ 1990 ನೇ ಇಸವಿಯಿಂದ 28.3.2022 ಇಲ್ಲಿಯ ವರೆವಿಗೆ ನಿಗಮವು ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯಕ್ಕೆ ಟೆಂಡರ್ ಕರೆದಿರುವುದರ ಸಂಪೂರ್ಣ ವಿವರಗಳನ್ನು ಅವುಗಳ ಕ್ಯೂ.ಆರ್ ವಿವರಗಳ ಸಮೇತ ಒದಗಿಸಿ. |
Assigned to PIODGM(RTI&KI) |
19
19 |
DGM(RTI)/F-9(6)/04.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮವು ತನ್ನ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಕೊಡುವ ಕಾರ್ಯಕ್ಕೆ ಕಳೆದ ಮೂರ್ನಾಲ್ಕು ದಶಕಗಳಿಂದ ದುರಸ್ತಿದಾರರನ್ನು ಟೆಂಡರ್ ಮೂಲಕ ಆಹ್ವಾನಿಸಿ ದುರಸ್ತಿ ಕಾರ್ಯ ವಹಿಸಿ ಕೊಡುತ್ತಿರುವುದು ಸರಿಯಷ್ಟೇ.
2. ಮೇಲ್ಕಂಡ ಟೆಂಡರ್ ಪ್ರಕ್ರಿಯೆ ಘನ ಸರ್ಕಾರದ ಈ ಪ್ರಕ್ಯೂರ್ ಮೆಂಟ್ ಪೋರ್ಟೆಲ್ ಮೂಲಕ ಸರ್ಕಾರದ ರೀತಿ ನೀತಿಗಳನ್ನು ಪಾಲಿಸಿ ಕರೆಯಬೇಕಿತ್ತಲ್ಲವೇ.
3. ಯಾವುದೇ ಕಾರ್ಯಕ್ಕೆ ಟೆಂಡರ್ ಕರೆಯಬೇಕಾದಲ್ಲಿ ಆಯಾ ಕಾರ್ಯಗಳ ಅವುಗಳ ಸಂಖ್ಯೆ/ಮೊತ್ತ/ಗುರಿಯ ಅರ್ಧದಷ್ಟು ಕಾರ್ಯ ನಿರ್ವಹಿಸಿರುವ ಅನುಭವ ಉಳ್ಳವರನ್ನು ಟೆಂಡರ್ ಗೆ ಅರ್ಹರೆಂದು ಪರಿಗಣಿಸಬೇಕಾದ ನಿಯಮ ಇದೆ ಹೌದಲ್ಲವೇ.
4. ನಿಗಮವು ತನ್ನ ವ್ಯಾಪ್ತಿಯ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳ ಟೆಂಡರ್ ಹೊರತು ಪಡಿಸಿ ಉಳಿದ ವಿದ್ಯುತ್ ಸರಬರಾಜು ಕಾರ್ಯಗಳ/ನೂತನ ವಿದ್ಯುತ್ ಪರಿವರ್ತಕಗಳ ಪೂರೈಕೆಯ/ಹಾಗೂ ಇತರೇ ಟೆಂಡರ್ ಗಳಲ್ಲಿ ಮೇಲ್ಕಂಡಂತೆ ನಿಗದಿತ ಗುರಿಯ ಅರ್ಧದಷ್ಟು ಕಾರ್ಯ/ಪೂರೈಕೆ/ಅನುಭವ ಇರುವವರನ್ನು ಅರ್ಹರೆಂದು ಪರಿಗಣಿಸುವ ಕಾನೂನು ರೀತಿ ನೀತಿ ರೂಪಿಸಿದೆ. ಆದರೆ ಪರಿವರ್ತಕ ದುರಸ್ತಿ ಕಾರ್ಯಕ್ಕೆ ಮಾತ್ರ ಯಾವುದೇ ಮೇಲ್ಕಂಡಂತೆ ನಿಯಮ, ರೀತಿ/ನೀತಿ ಇಲ್ಲ ಈ ವ್ಯತ್ಯಾಸಕ್ಕೆ ಕಾರಣ ಏನು. ಈ ವಿವರಗಳು ನಿಗಮದ ಹಣಕಾಸು ಪೋಲು ತಡೆಯುವ ಉದ್ದೇಶದಿಂದ ಅಗತ್ಯವಿದೆ. |
Assigned to PIODGM(RTI&KI) |
20
20 |
DGM(RTI)/F-9(5)/04.04.2022 |
Prasanna Kumar S N |
1. ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತವು ತನ್ನ ವ್ಯಾಪ್ತಿಯ 44/45 ವಿದ್ಯುತ್ ಪರಿವರ್ತಕ ದುರಸ್ತಿ ಘಟಕಗಳನ್ನು ಕಳೆದ 2019 ರ ಸೆಪ್ಟಂಬರ್ ತಿಂಗಳಿನಲ್ಲಿ ಒಂದು ವರ್ಷದ ಅವಧಿ ನಂತರ ಮುಂದುವರೆಸಬಹುದಾದ ಮತ್ತೊಂದು ಒಂದು ವರ್ಷದ ಅವಧಿಗೆ ದರ ಆಧರಿಸಿ (ರೇಟ್ ಕಾಂಟ್ರ್ಯಾಕ್ಟ್) ಟೆಂಡರ್ ನೀಡಿದ್ದು ಸರಿಯಷ್ಟೇ ಈ ರೀತಿಯಲ್ಲಿ ಪರಿವರ್ತಕ ದುರಸ್ತಿಗೆ ನೀಡಿದ್ದಾಗ ಪ್ರತಿ ಪರಿವರ್ತಕಗಳಿಗೆ ಅವುಗಳ ಕೆಪಾಸಿಟಿ ಆಧಾರದ ಮೇರೆಗೆ ದುರಸ್ತಿಗೆ ತಗಲುತ್ತಿದ್ದ ವೆಚ್ಚ ಏನು.
2. ಈಗ ನಿಗಮವು ಕರೆದಿರುವ ವಿದ್ಯುತ್ ಪರಿವರ್ತಕ ದುರಸ್ತಿಗೆ ನಿಗದಿಗೊಳಿಸಿರುವ ದರ ವೆಚ್ಚ ಏನು ಇದರಿಂದಾಗಿ ಬೆಸ್ಕಾಂ ನಿಗಮಕ್ಕೆ ಈ ಹಿಂದೆ ಆದ ನಷ್ಟ ಎಷ್ಟಿತ್ತು. ಈಗ ದುರಸ್ತಿಗೆ ನೀಡುತ್ತಿರುವ ದರ/ಮಾನದಂಡದಿಂದ ನಿಗಮಕ್ಕೆ ಎಷ್ಟು ಹಣ ಉಳಿತಾಯ ಆಗುತ್ತದೆ ದಯಮಾಡಿ ವಿವರ ನೀಡಿ.
3. ಹಾಲಿ ನಿಗಮವು ವಿದ್ಯುತ್ ಪರಿವರ್ತಕ ದುರಸ್ತಿ ಕಾರ್ಯಕ್ಕೆ ಮಾನದಂಡ ನಿಯಮ/ರೂಪುರೇಷೆ ರೂಪಿಸಲು ಸಮಿತಿ ರಚಿಸಿದೆಯೇ ಅದರಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಅವರ ಪದನಾಮ ಹುದ್ದೆ ಇವುಗಳ ಸಂಪೂರ್ಣ ವಿವರ ದಯಮಾಡಿ ನೀಡಿ. |
Assigned to PIODGM(RTI&KI) |
21
21 |
DGM(RTI)/F-9(4)/04.04.2022 |
Prasanna Kumar S N |
1. ಬೆಸ್ಕಾಂ ನಿಗಮವು ದಿನಾಂಕ: 29.03.2022 ರಂದು ನಿಗಮದ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ಕರೆದಿರುವ ಟೆಂಡರ್ ವಿಚಾರಣೆ ಜಾಹಿರಾತಿನಲ್ಲಿ ವಿಚಾರಣೆ ಸಂಖ್ಯೆ:21-22/46 ರಿಂದ ವಿಚಾರಣೆ ಸಂಖ್ಯೆ:21-22/99 ರ ವರೆಗಿನ ವಿಚಾರಣೆ ಸಂಖ್ಯೆಗಳಲ್ಲಿ ಈ ಕೆಳಕಂಡ 13 ಸಂಖ್ಯೆಯಷ್ಟು ವಿಚಾರಣೆ ಸಂಖ್ಯೆಗಳನ್ನು ಹಾಗೂ ಸ್ಥಳಗಳನ್ನು ಸಂಖ್ಯೆ-91-ಸ್ಥಳ-ನ್ಯಾಮತಿ/ ಸಂಖ್ಯೆ-94-ಸ್ಥಳ-ಚಿತ್ರದುರ್ಗ/ಸಂಖ್ಯೆ-99-ಸ್ಥಳ-ಮೊಳಕಾಲ್ಮೂರು/ಸಂಖ್ಯೆ-86-ಸ್ಥಳ-ಹುಳಿಯಾರು/ಸಂಖ್ಯೆ-72-ಸ್ಥಳ-ನಿಟ್ಟೂರು/ಸಂಖ್ಯೆ-69-ಸ್ಥಳ-ಚಿಂತಾಮಣಿ /ಸಂಖ್ಯೆ-64-ಸ್ಥಳ-ಮುಳುಬಾಗಿಲು/ಸಂಖ್ಯೆ-52-ಸ್ಥಳ-ಚಂದಾಪುರ/ಸಂಖ್ಯೆ-65-ಸ್ಥಳ-ಕೆ.ಜಿ.ಎಫ್/ಸಂಖ್ಯೆ-55-ಸ್ಥಳ-ಯಲಹಂಕ/ಸಂಖ್ಯೆ-22-ಸ್ಥಳ-ರಾಜರಾಜೇಶ್ವರಿ ನಗರ/ಸಂಖ್ಯೆ-85-ಸ್ಥಳ-ಮಧುಗಿರಿ ಇವುಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆಂದು ಮೀಸಲಾಗಿಟ್ಟಿದ್ದೀರಿ. ಹೌದಲ್ಲವೇ.
2. ಈ ಮೀಸಲಾತಿಗಳನ್ನು ಮತ್ತು ಇದೇ ಸ್ಥಳವೆಂದು ಆಯಾ ಪ್ರದೇಶಗಳನ್ನು ಯಾವ ಮಾನದಂಡ ಹಾಗೂ ಕಾನೂನು ಮತ್ತು ನಿಯಮಗಳ ಪಾಲನೆ ಆಧರಿಸಿ ತೀರ್ಮಾನಿಸಿದೆ.
3. ಈ ಮೀಸಲಾತಿಯ ತೀರ್ಮಾನವನ್ನು ನಿಗಮದ ಯಾವ ಸಮಿತಿ ಯಾವ ದಿನದ ಸಭೆಯಲ್ಲಿ ತೀರ್ಮಾನಿಸಿದೆ. ಸಭೆ ನಡೆದ ದಿನ ಹಾಗೂ ತೀರ್ಮಾನಿಸಿದ ಅಧಿಕಾರಿಗಳ ಹೆಸರು ಪದನಾಮ, ವಿವರಗಳು ಸಾರ್ವಜನಿಕರ ಹಿತ ದೃಷ್ಟಿಯಿಂದ ಅಗತ್ಯವಿದೆ ದಯಮಾಡಿ ನೀಡಿ. |
Assigned to PIODGM(RTI&KI) |
22
22 |
DGM(RTI)/F-9(3)/04.04.2022 |
Prasanna Kumar S N |
1. ದಿನಾಂಕ: 29.03.2022 ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ನಿಮ್ಮ ನಿಗಮದ ಜಾಹೀರಾತಿನಂತೆ ಬೆಸ್ಕಾಂನ ಉಪ ಪ್ರಧಾನ ವ್ಯವಸ್ಥಾಪಕರು, ಕಾರ್ಯಾಚರಣೆ-1 ರವರು 21-22 ರ ಆರ್ಥಿಕ ವರ್ಷದ ವಿಚಾರಣೆ ಸಂಖ್ಯೆ: 46/28.03.2022 ರಿಂದ ವಿಚಾರಣೆ ಸಂಖ್ಯೆ: 99/28.03.2022 ರ ವರೆವಿಗೆ ಒಟ್ಟು 54 ಸಂಖ್ಯೆಯಷ್ಟು ವಿದ್ಯುತ್ ಪರಿವರ್ತಕಗಳ ದುರಸ್ತಿ ಘಟಕ ನಡೆಸುವ ಉದ್ದೇಶದಿಂದ ಟೆಂಡರ್ ಕರೆದಿದ್ದು ಸರಿಯಷ್ಟೇ ಸದರಿ ಮೇಲ್ಕಂಡ 54 ಟೆಂಡರ್ ಕರೆಯುವ ಮುನ್ನ ನಿಗಮವು ತನ್ನ ವ್ಯಾಪ್ತಿಯ ಪ್ರತಿ ತಾಲ್ಲೂಕಿಗೊಂದು ವಿದ್ಯುತ್ ಪರಿವರ್ತಕ ದುರಸ್ತಿ ಘಟಕ ಎಂಬಂತೆ 44 ವಿದ್ಯುತ್ ಪರಿವರ್ತಕ ದುರಸ್ತಿ ಘಟಕ ನಡೆಸುತ್ತಿತ್ತು. ಹೌದಲ್ಲವೇ.
2. ಹಾಲಿ ತಾವು ಈಗ ಕೆಲವು ತಾಲ್ಲೂಕುಗಳಿಗೆ ಹೆಚ್ಚುವರಿಯಾಗಿ ದುರಸ್ತಿ ಘಟಕ ಸ್ಥಾಪಿಸಲು ತೀರ್ಮಾನಿಸಿರುವುದರ ಹಿಂದೆ ಇರುವ ತಾಂತ್ರಿಕ ಕಾರಣಗಳೇನು
3. ಈ ಹಿಂದೆ ಇದ್ದ ದುರಸ್ತಿ ಘಟಕಗಳ ಸಾಮರ್ಥ್ಯಗಳನ್ನು ಯಾವ ಮಾಪನದಿಂದ ತಾವು ಅಲ್ಲಗಳೆದಿದ್ದೀರಿ.
4. ನಿಗಮವು ಹೆಚ್ಚುವರಿಯಾಗಿ ದುರಸ್ತಿ ಘಟಕಗಳನ್ನು ಸ್ಥಾಪಿಸುವುದಕ್ಕೆ ನಿಗಮದ ಯಾವ ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿತ್ತು. |
Assigned to PIODGM(RTI&KI) |
23
23 |
DGM(RTI)/F-9(2)/01.04.2022 |
M Dada peer |
ದಿನಾಂಕ: 01.01.2019 ರಿಂದ ದಿನಾಂಕ: 15.03.2022 ರವರೆಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಅಧೀನದಲ್ಲಿರುವ ನಿಗಮ/ಮಂಡಳಿ/ಸಂಸ್ಥೆಗಳಲ್ಲಿ ಇಲಾಖಾವಾರು ಮುಖ್ಯಸ್ಥರು ದೃಢೀಕರಿಸಿರುವ ಅನುಕಂಪದ ಆಧಾರದ ನೇಮಕಾತಿ ಹೊಂದಿದವರ ವಿವರಗಳನ್ನು ನೀಡುವಂತೆ ಕೋರಿ. |
Assigned to PIODGM(RTI&KI) |
24
24 |
DGM(RTI)/F-9(1)/01.04.2022 |
B.S. Mohan Kumar |
ತಮ್ಮ ಕಚೇರಿಯಲ್ಲಿ ಪ್ರೆಸ್ಟೀಜ್ ಟ್ರಾಂಕ್ವಿಲಿಟಿ, ಬೂದಿಗೆರೆ ಕ್ರಾಸ್, ಸದರಿ ಬಹುಮಹಡಿ ಕಟ್ಟಡಕ್ಕೆ ನಿಗಮ ಕಾರ್ಯಾಲಯ (ನಿರ್ದೇಶಕರು ತಾಂತ್ರಿಕ)ದ ಅಧಿಕಾರಿ ವರ್ಗದವರಿಂದ ಖಾಯಂ ವಿದ್ಯುತ್ ಸಂಪರ್ಕಕ್ಕಾಗಿ ಅನುಮೋದಿಸಿದ ಪ್ರತಿಗಳನ್ನು ದೃಢೀಕರಿಸಿ ನೀಡುವಂತೆ ಕೋರಿ. |
Assigned to PIODGM(RTI&KI) |