ಅಭಿಪ್ರಾಯ / ಸಲಹೆಗಳು

ಡಿಸಿಸಿಯ ಸ್ಥಾಪನೆ ಹಾಗು ಅದರ ಚಟುವಟಿಕೆಗಳು

ಡಿಸಿಸಿ ಯ ಸ್ಥಾಪನೆ  ಮತ್ತು ಅದರ ಪಾತ್ರಗಳು

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆವಿಕಂ) 3 ನೇ ಮಹಡಿ, ಬ್ಲಾಕ್ 2, ಕಾರ್ಪೊರೇಟ್ ಕಚೇರಿ, ಬೆಸ್ಕಾಂ, ಕೆ.ಆರ್. ಸರ್ಕಲ್, ಬೆಂಗಳೂರಿನಲ್ಲಿ ಸ್ಕಾಡಾ (ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಸಂಪಾದನೆ) ವ್ಯವಸ್ಥೆಯನ್ನು ಹೊಂದಿರುವ ವಿತರಣಾ ನಿಯಂತ್ರಣ ಕೇಂದ್ರವನ್ನು (ಡಿಸಿಸಿ) ಸ್ಥಾಪಿಸಿದೆ. ರಾಜ್ಯ ಲೋಡ್ ರವಾನೆ ಕೇಂದ್ರ (ಎಸ್‌ಎಲ್‌ಡಿಸಿ), ಸ್ಟೇಟ್‌ ಟಾನ್ಸಮಿಷನ್‌ ಯುಟಿಲಿಟಿ (ಎಸ್‌ಟಿಯು) ಮತ್ತು ಇತರ ಪಾಲು ಹೊಂದಿರುವವರ ಸಹಯೋಗದೊಂದಿಗೆ ವಿತರಣಾ ವ್ಯವಸ್ಥೆಯ ಅತ್ಯುತ್ತಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ವರ್ಷದುದ್ದಕ್ಕೂ ಡಿಸಿಸಿ 24/7 ಕಾರ್ಯನಿರ್ವಹಿಸುತ್ತದೆ.ಗೌರವಾನ್ವಿತ ಆಯೋಗ ಹೊರಡಿಸಿದ ವಿತರಣಾ ಸಂಹಿತೆಯ ಪ್ರಕಾರ ಡಿಸಿಸಿಯ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಸಂವಹನ ಸೌಲಭ್ಯದೊಂದಿಗೆ ಸಂಯೋಜಿತ ವಿಸ್ತೃತ ಸ್ಕಾಡಾ ವ್ಯವಸ್ಥೆಯನ್ನು ಕೆಪಿಟಿಸಿಎಲ್‌ ಮತ್ತು ಬೆಸ್ಕಾಂ ಸಹಯೋಗದೊಂದಿಗೆ ಸ್ಥಾಪಿಸಿದೆ .

  • ನೈಜ ಸಮಯದ ಲೋಡ್‌ ನಿರ್ವಹಣೆಯನ್ನು ಎಸ್‌ಎಲ್‌ಡಿಸಿಯು ಬೆವಿಕಂಗೆ ನಿಗದಿಪಡಿಸಿರುವ ವಿದ್ಯುತ್‌ ಹಂಚಿಕೆಗೆ ಅನುಗುಣವಾಗಿ, ಮಾಡಲಾಗುತ್ತದೆ. ಇದರಿಂದ, ವಿದ್ಯುತ್‌ ವ್ಯವಸ್ಧೆಯನ್ನು ಸುರಕ್ಷಿತವಾಗಿ ನಿ‍ರ್ವಹಿಸಲಾಗುವುದು.  
  • ಬೆವಿಕಂ ವ್ಯಾಪ್ತಿಯಲ್ಲಿ ಸಿಸ್ಟಮ್ ಕಾರ್ಯಾಚರಣೆ, ಬೇಡಿಕೆ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಡ್ ರವಾನೆ ಕೇಂದ್ರವು ನೀಡಿದ ನಿರ್ದೇಶನಗಳನ್ನು ಪಾಲಿಸುವುದು.
  • ಲೋಡ್ ಮತ್ತು ಉತ್ಪಾದನೆ ಸಮತೋಲನಕ್ಕಾಗಿ ತರಂಗಾಂತರ (control of frequency) ನಿಯಂತ್ರಣವನ್ನು ಸಾಧಿಸಲು ಲೋಡ್‌ ಶೆಡ್ಡಿಂಗ್‌ ಮಾಡುವ ಸಂದರ್ಭ ಎದುರಾಗಬಹುದರಿಂದ, ಅವಶ್ಯಕ.11 ಕೆ.ವಿ ಫೀಡರ್ ಗಳನ್ನು ವರ್ಗವಾರು ಗುಂಪುಗಳನ್ನಾಗಿ ಮಾಡಿ ಒಂದೇ ಗುಂಪಿನ ಫೀಡರ್‌ ಗಳ ಲೋಡ್‌ ಶೆಡ್ಡಿಂಗ್‌ ಪುನರಾವರ್ತನೆಯಾಗದಂತೆ ಹಾಗೂ ಗ್ರಾಹಕರಿಗೆ ವಿದ್ಯುತ್‌ ಅಡಚಣೆಗಳು ಪುನರಾವರ್ತನೆಯಾಗದಂತೆ ಕಾರ್ಯಾ ನಿರ್ವಹಿಸಲಾಗುವುದು.
  • ಬೆವಿಕಂಮುಂದೆ ದಿನದ ಪ್ರತಿ ಗಂಟೆಯ ಹಾಗೂ ದೈನಂದಿನ ಬೇಡಿಕೆಯನ್ನು, ಐತಿಹಾಸಿಕ ಡೇಟಾ, ಹವಾಮಾನ ಬದಲಾವಣೆ ಮತ್ತು ಇತರ ಅಂಶಗಳಿಂದಾಗಿ ನಿರೀಕ್ಷಿತ ಬದಲಾವಣೆಗಳನ್ನು ಆಧರಿಸಿ ಅಂದಾಜು ಮಾಡಿ, ಎಸ್‌ಎಲ್‌ಡಿಸಿಗೆ ದಿನವಹಿ ವಿದ್ಯುತ್ ಬೇಡಿಕೆಯನ್ನು ಒಂದು ದಿನದ ಮುಂಚಿತವಾಗಿ ಒದಗಿಸಲಾಗುತ್ತದೆ.
  • ಬೆವಿಕಂ ವ್ಯಾಪ್ತಿಯಲ್ಲಿರುವ ಎಲ್ಲಾ 220ಕೆವಿ ಸ್ವೀಕೃತ ಕೇಂದ್ರಗಳಿಗೆ ಮುಂದೆ ದಿನದ ಪ್ರತಿ ಗಂಟೆಯ ದೈನಂದಿನ ಲೋಡ್‌ ಹಂಚಿಕೆ ಮಾಡಲಾಗುವುದು ಹಾಗೂ ಹಂಚಿಕೆ ಮಾಡಲಾದ ಲೋಡ್‌ ಮತ್ತು ದಾಖಲಾದ ಲೋಡನ್ನು ತಾಳೆ ಮಾಡಿರುವ ವರದಿಯನ್ನು ದಿನವಹಿ ತಯಾರಿಸುವುದು.
  • ಬೆವಿಕಂ/ವಲಯವಾರು ಲೋಡ್‌ ಕರ್ವ್‌ ಅನ್ನು ಸ್ಕಾಡದಿಂದ ಪಡೆದ ಪ್ರತಿ ಗಂಟೆಯ ಲೋಡ್‌ ಆಧಾರದ ಮೇಲೆ ದಿನವಹಿ ತಯಾರಿಸುವುದು.
  • ಘನ ಸರ್ಕಾರದ ಮಾಗದರ್ಶನದ ಪ್ರಕಾರ ಹಾಗೂ ಬೆ.ವಿಕಂ ನಿಯಮಾನುಸಾರ ವಿವಿಧ ವರ್ಗದ ಗ್ರಾಹಕರಿಗೆ ಪೂರೈಕೆಯ ಸಮಯವನ್ನು ಖಚಿತಪಡಿಸಿಕೊಳ್ಳುವುದು.
  • ಸ್ಕಾಡಾದಿಂದ 11ಕೆ.ವಿ ಫೀಡರಗಳ ವಿದ್ಯುತ್‌ ಸರಬರಾಜಿನ ಮಾಹಿತಿಯನ್ನು ಪಡೆದು, ಬೆವಿಕಂನ ವಿವಿಧ ವರ್ಗಗಳ ಗ್ರಾಹಕರ ದಿನ/ತಿಂಗಳವಾರು ವಿದ್ಯುತ್‌ ಸರಬರಾಜಿನ ವ್ಯವಸ್ಧೆ ಕುರಿತು ಎಂ.ಐ.ಎಸ್‌ ವರದಿಗಳನ್ನು ತಯಾರಿಸುವುದು. 
  • ನೈಜ ಸಮಯದ ವಿದ್ಯುತ್‌ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಯಾವುದೇ ಪ್ರಸರಣ ಅಂಶಗಳ ತೊಂದರೆಯಿಂದ ಅಥವಾ ವಿತರಣಾ ಲೈನಿನ್ನಲ್ಲಿ ಯಾವುದೇ ವಿದ್ಯುತ್‌ ಅಡಚಣೆ ಸಂಭವಿಸಿದಲ್ಲಿ, ಎಸ್‌ಟಿಯು ಹಾಗೂ ಬೆವಿಕಂ ಸಮನ್ವಯದೊಂದಿಗೆ ವಿದ್ಯುತ್‌ ಅಡಚಣೆಯಾದ ಗ್ರಾಹಕರಿಗೆ ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲು ಸಂಬಂಧಪಟ್ಟ ಬೆವಿಕಂ ಕ್ಷೇತ್ರ ಎಂಜಿನಿಯರ್‌ಗಳಿಂದ ಕೂಡಲೇ ಕ್ರಮ ತೆಗೆದುಕೊಳ್ಳಲಾವುದು. 

ಬೆವಿಕಂನ ಲೋಡ್‌

ಇತ್ತೀಚಿನ ನವೀಕರಣ​ : 05-06-2021 12:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080